/newsfirstlive-kannada/media/post_attachments/wp-content/uploads/2025/03/Actress-Ranya-Rao-Arrest-6.jpg)
ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ 14.8 ಕೆಜಿ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ಗೆ ಮತ್ತೊಂದು ಮೆಗಾ ಟ್ವಿಸ್ಟ್ ಸಿಕ್ಕಿದೆ. ದುಬೈನಿಂದ ಬೆಂಗಳೂರಿಗೆ ಬರುತ್ತಿದ್ದ ನಟಿ ರನ್ಯಾ ರಾವ್ ಪ್ರತಿ ಬಾರಿಯೂ ಒಂದೇ ಜಾಕೆಟ್ ಧರಿಸಿ ವಾಪಸ್ ಆಗುತ್ತಿದ್ದರು. ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳು ಇದೇ ಅನುಮಾನದಲ್ಲಿ ಪರಿಶೀಲಿಸಿದಾಗ ಚಿನ್ನದ ಅಸಲಿ ರಹಸ್ಯ ಗೊತ್ತಾಗಿದೆ.
ನಟಿ ರನ್ಯಾ ರಾವ್ ಪ್ರತಿ ಬಾರಿ ದುಬೈನಿಂದ ವಾಪಸ್ ಬರುತ್ತಿದ್ದಾಗ ಒಂದೇ ಜಾಕೆಟ್ ಧರಿಸಿದ್ದರು. ಆ ಜಾಕೆಟ್‌ನಲ್ಲಿ ಹೆಚ್ಚಿನ ಚಿನ್ನ ತರಲು ಅನುಕೂಲವಾಗುವಂತೆ ಬಟ್ಟೆ ಧರಿಸಿರುತ್ತಿದ್ದರು. ಇದರಿಂದಾಗಿ ರನ್ಯಾ ರಾವ್ ಮೇಲೆ ಡಿಆರ್‌ಐ ಅಧಿಕಾರಿಗಳ ಅನುಮಾನ ಹೆಚ್ಚಾಗಿದೆ. ರನ್ಯಾ ರಾವ್ ತಾನು ಧರಿಸಿದ್ದ ಜಾಕೆಟ್‌ನಲ್ಲೇ ಬಹುಪಾಲು ಚಿನ್ನ ಇಟ್ಟುಕೊಂಡಿದ್ದರು.
ದುಬೈನಲ್ಲಿ ರನ್ಯಾ ರಾವ್‌ಗೆ ಕೋಟಿ, ಕೋಟಿ ಚಿನ್ನ ಖರೀದಿ ಮಾಡಲು ಹಣ ಹೇಗೆ ಬಂತು. ಹಣ ಪಾವತಿ ಮಾಡಿರುವ ವಿಧಾನದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ನಗದು ಹಣವನ್ನೇ ರನ್ಯಾ ರಾವ್ ನೀಡಿ ಚಿನ್ನ ಖರೀದಿಸಿದ್ರಾ? ಇಲ್ಲವೇ ದುಬೈನಲ್ಲಿ ಯಾರು ಹಣ ಕೊಟ್ಟರು? ರನ್ಯಾ ರಾವ್ ಅವರು ಹವಾಲಾ ಮಾರ್ಗದಿಂದ ದುಬೈಗೆ ಹಣ ಸಾಗಿಸಿ ಚಿನ್ನ ಖರೀದಿಸಿದ್ದಾರಾ ಎಂಬ ಬಗ್ಗೆಯೂ ಶಂಕಿಸಲಾಗುತ್ತಿದೆ.
ಇದನ್ನೂ ಓದಿ: ಸೊಳ್ಳೆ ಕಾಟ.. ಮುದ್ದೆ ಊಟ.. ಪರಪ್ಪನ ಅಗ್ರಹಾರ ಜೈಲು ಪಾಲಾದ ನಟಿ ರನ್ಯಾ; ಗೋಲ್ಡ್ ಕೇಸ್‌ಗೆ ಹೊಸ ಟ್ವಿಸ್ಟ್!
ರನ್ಯಾ ರಾವ್ ತಪ್ಪಿಸಿಕೊಂಡಿದ್ದು ಹೇಗೆ?
ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ವಶದಲ್ಲಿದ್ದ ರನ್ಯಾ ರಾವ್ ಅವರು ಗೋಲ್ಡ್ ಸ್ಮಗ್ಲಿಂಗ್ ಮಾಡಲು ತನ್ನನ್ನು ಬ್ಲಾಕ್ ಮೇಲ್ ಮಾಡಲಾಗಿತ್ತು ಅನ್ನೋ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ರನ್ಯಾ ರಾವ್ ಕಳೆದ 15 ದಿನಗಳಲ್ಲಿ 4 ಬಾರಿ ದುಬೈಗೆ ಹೋಗಿ ಬಂದಿದ್ದರು. ಇದರಿಂದಾಗಿ ರನ್ಯಾ ರಾವ್ ಬಗ್ಗೆ ಡಿಆರ್‌ಐ ಅಧಿಕಾರಿಗಳಿಗೆ ಅನುಮಾನ ಮತ್ತಷ್ಟು ಬಲವಾಗಿತ್ತು. ಪದೇ ಪದೇ ದುಬೈಗೆ ಹೋಗಿ ಬರುವವರ ದೈಹಿಕ ತಪಾಸಣೆ ಮಾಡುವ ಶಿಷ್ಟಾಚಾರ ಭಾರತದಲ್ಲಿದೆ.
ಪ್ರತಿ ಬಾರಿಯೂ ದುಬೈನಿಂದ ಬಂದಾಗ ನಟಿ ರನ್ಯಾ ರಾವ್ ಅವರು ದೈಹಿಕ ತಪಾಸಣೆಯಿಂದ ತಪ್ಪಿಸಿಕೊಂಡು ಏರ್‌ಪೋರ್ಟ್‌ನಿಂದ ಹೊರ ಬರುತ್ತಿದ್ದರು. ದುಬೈನಿಂದ ಪ್ರತಿ ಬಾರಿಯೂ ಬಂದಾಗಲೂ ರನ್ಯಾ ರಾವ್ ಇದೇ ರೀತಿ ಭಾರಿ ಪ್ರಮಾಣದ ಗೋಲ್ಡ್ ತಂದಿರುವ ಸಾಧ್ಯತೆ ಇದೆ.
ನಾಳೆ ಜಾಮೀನು ಸಿಗುತ್ತಾ?
ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟಿ ರನ್ಯಾ ರಾವ್ ಅವರು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ರನ್ಯಾ ರಾವ್ ಪರ ವಕೀಲರು ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದು, ನಾಳೆಯೇ ರನ್ಯಾ ರಾವ್ ಜಾಮೀನು ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ