/newsfirstlive-kannada/media/post_attachments/wp-content/uploads/2025/03/Ranya-roa-Gold-Case-8.jpg)
ಬೆಂಗಳೂರು: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ದುಬೈನಲ್ಲಿ ರನ್ಯಾ ರಾವ್ ಜೊತೆಗಿದ್ದ ಆಕೆಯ ಗೆಳೆಯ, ಸ್ಟಾರ್ ಹೋಟೆಲ್ ಮಾಲೀಕನ ಮೊಮ್ಮಗನನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳು ಬಂಧಿಸಿದ್ದಾರೆ.
DRI ಬಂಧಿಸಿದ ಆರೋಪಿಯನ್ನು ತರುಣ್ ಕೊಂಡೂರುರಾಜು ಎನ್ನಲಾಗಿದೆ. ಇಂದು ಬೆಳಗಿನ ಜಾವ ಆರೋಪಿಯನ್ನು ಕೋರ್ಟ್‌ಗೆ ಹಾಜರು ಪಡಿಸಿರುವ ಅಧಿಕಾರಿಗಳು ಅಧಿಕೃತವಾಗಿ ಬಂಧಿಸಿದ್ದಾರೆ. ಕಳೆದ 2 ದಿನದಿಂದ ರನ್ಯಾ ಗೆಳೆಯ ತರುಣ್ ರಾಜು ಅವರನ್ನ DRI ವಿಚಾರಣೆ ನಡೆಸಿದೆ.
ಕಸ್ಟಡಿಯಲ್ಲಿ ರನ್ಯಾ ಕಣ್ಣೀರಧಾರೆ!
ವಿಚಾರಣೆಯಲ್ಲಿರುವ ನಟಿ ರನ್ಯಾ ರಾವ್ ಅವರು ಡಿಆರ್‌ಐ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಲಾಗದೆ ಅಳುತ್ತಿದ್ದಾರೆ. ನಾನು ಈ ಹಿಂದೆ ಎಂದೂ ಈ ರೀತಿ ಮಾಡಿಲ್ಲ. ನನ್ನ ಬ್ಲ್ಯಾಕ್ಮೇಲ್ ಮಾಡಲಾಗಿದೆ. ನಾನು ಟ್ರ್ಯಾಪ್ ಆಗಿದ್ದೇನೆ. ಈ ಮಾತನ್ನಷ್ಟೇ ರನ್ಯಾ ರಾವ್ ತನಿಖಾಧಿಕಾರಿಗಳಿಗೆ ಪದೇ ಪದೇ ಹೇಳುತ್ತಿದ್ದಾರೆ.
ಇದನ್ನೂ ಓದಿ: 15 ದಿನಕ್ಕೆ 4 ಬಾರಿ ದುಬೈ ಟ್ರಿಪ್.. ರನ್ಯಾ ರಾವ್ 15kg ಚಿನ್ನದ ಹಿಂದೆ ‘6’ ಅನುಮಾನ! ರಹಸ್ಯವೇನು?
ಡಿಆರ್‌ಐ ಕಸ್ಟಡಿಯಲ್ಲಿರುವ ನಟಿ ರನ್ಯಾ ರಾವ್‌ಗೆ ಇಂದು 3 ದಿನದ ಕಸ್ಟಡಿ ಅವಧಿ ಅಂತ್ಯವಾಗುತ್ತಿದೆ. ಡಿಆರ್‌ಐ ಕಸ್ಟಡಿಗೆ ನೀಡಿದ್ದ ನ್ಯಾಯಾಲಯ ತನಿಖೆಗೆ ಸಹಕರಿಸಬೇಕು. ಇಲ್ಲದಿದ್ದರೆ ಮತ್ತೆ ಕಸ್ಟಡಿಗೆ ನೀಡುವುದಾಗಿ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಮತ್ತೆ ಕೋರ್ಟ್‌ಗೆ ಹಾಜರುಪಡಿಸಿ ಆರೋಪಿಯ ಹೆಚ್ಚಿನ ವಿಚಾರಣೆಗಾಗಿ 40 ದಿನಗಳ ಕಾಲ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ