ಮದುವೆಯಾದ 3 ತಿಂಗಳಿಗೆ ಸ್ಮಗ್ಲಿಂಗ್; ರನ್ಯಾ ರಾವ್‌ ಬಳಿ ಸಿಕ್ಕ ಚಿನ್ನ ಎಷ್ಟು? ಬೆಂಗಳೂರು ಇತಿಹಾಸದಲ್ಲೇ ಇದು ದಾಖಲೆ!

author-image
admin
Updated On
ಮದುವೆಯಾದ 3 ತಿಂಗಳಿಗೆ ಸ್ಮಗ್ಲಿಂಗ್; ರನ್ಯಾ ರಾವ್‌ ಬಳಿ ಸಿಕ್ಕ ಚಿನ್ನ ಎಷ್ಟು? ಬೆಂಗಳೂರು ಇತಿಹಾಸದಲ್ಲೇ ಇದು ದಾಖಲೆ!
Advertisment
  • ಬೆಂಗಳೂರು‌ ಏರ್‌ಪೋರ್ಟ್‌ ಇತಿಹಾಸದಲ್ಲೇ‌ ಇದು ಅಧಿಕ ಮೊತ್ತ!
  • ಹೆಸರಾಂತ ರಾಜಕೀಯ ಕುಟುಂಬದ ಸಂಬಂಧಿಕರ ಜೊತೆ ವಿವಾಹ
  • ಲ್ಯಾವೆಲ್ಲಿ ರಸ್ತೆಯ ಫ್ಲ್ಯಾಟ್‌ನಲ್ಲಿ ಕೋಟಿ, ಕೋಟಿ ಹಣ ಕೂಡ ಪತ್ತೆ

ಬೆಂಗಳೂರು: ಸ್ಯಾಂಡಲ್‌ವುಡ್‌ನ ಮಾಣಿಕ್ಯ, ಪಟಾಕಿ ಸಿನಿಮಾದಲ್ಲಿ ಅಭಿನಯಿಸಿದ್ದ ನಟಿ ರನ್ಯಾ ರಾವ್ ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳು ಈ ಪ್ರಕರಣದ ಇಂಚಿಂಚು ಮಾಹಿತಿಯನ್ನು ಜಾಲಾಡುತ್ತಿದ್ದಾರೆ. ನಟಿ ರನ್ಯಾ ರಾವ್ ಗೋಲ್ಡ್‌ ಸುತ್ತಾ ಕೆದಕಿದಷ್ಟು ರಹಸ್ಯಗಳು ಬಯಲಾಗುತ್ತಿದೆ.

ಮನೆಯಲ್ಲಿ ಅಪಾರ ಪ್ರಮಾಣದ ನಗದು ಪತ್ತೆ!
ನಟಿ ರನ್ಯಾ ರಾವ್‌ ಬಂಧಿಸಿರುವ DRI ಅಧಿಕಾರಿಗಳ ತಂಡ ಬಳಿಕ ಅವರ ಮನೆಯನ್ನು ಪರಿಶೀಲನೆ ನಡೆಸಿದೆ. ಲ್ಯಾವೆಲ್ಲಿ ರಸ್ತೆಯ ನಂದವಾಣಿ ಮ್ಯಾನ್ಶನ್‌ ಫ್ಲ್ಯಾಟ್‌ನಲ್ಲಿ 5ಕ್ಕೂ ಹೆಚ್ಚು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮೊನ್ನೆ ರಾತ್ರಿಯೇ ಹಲವು ಗಂಟೆಗಳ ಪರಿಶೀಲನೆ ನಡೆಸಿರುವ ಅಧಿಕಾರಿಗಳಿಗೆ ಬರೋಬ್ಬರಿ 3 ದೊಡ್ಡ ಪೆಟ್ಟಿಗೆ ತುಂಬಾ 2 ಕೋಟಿಗೂ ಹಣ ಪತ್ತೆಯಾಗಿದೆ ಎನ್ನಲಾಗಿದೆ.

publive-image

ರನ್ಯಾ ರಾವ್‌ ಬಳಿ ಸಿಕ್ಕ ಗೋಲ್ಡ್‌ ಬಗ್ಗೆ DRI ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿದ್ದಾರೆ. ನಟಿ ಬಳಿ ಸಿಕ್ಕಿದ್ದು ಚಿನ್ನ, ನಗದು‌ ಸೇರಿ ಬರೋಬ್ಬರಿ 17.29 ಕೋಟಿ ‌ಮೌಲ್ಯದ್ದಾಗಿದೆ. ಬೆಂಗಳೂರು‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇತಿಹಾಸದಲ್ಲೇ‌ ಇದು ಅಧಿಕ ಮೊತ್ತ ಎನ್ನಲಾಗಿದೆ. 17.29 ಕೋಟಿಯಲ್ಲಿ ನಗದು 2.67 ಕೋಟಿ‌ ಆಗಿದ್ರೆ ಉಳಿದಿದೆಲ್ಲವೂ ಚಿನ್ನದ ಬಿಲ್ಲೆಗಳಾಗಿದೆ.

ಇದನ್ನೂ ಓದಿ: ಮಂಡ್ಯದಲ್ಲಿ ಹೃದಯ ವಿದ್ರಾವಕ ಘಟನೆ; 3 ದಿನದ ಹಿಂದೆ ಮದುವೆ ಆಗಿದ್ದ ಯುವಕ ನಿಧನ 

ಹೆಸರಾಂತ ರಾಜಕೀಯ ಕುಟುಂಬದ ಸೊಸೆ!
ಸ್ಯಾಂಡಲ್‌ವುಡ್‌ ನಟಿ ರನ್ಯಾ ರಾವ್‌ ಅವರಿಗೆ ಮದುವೆಯಾಗಿ 3 ತಿಂಗಳು ಕಳೆದಿದೆ. ಬೆಂಗಳೂರಲ್ಲಿ ಕಳೆದ 3 ತಿಂಗಳ ಹಿಂದೆ ರನ್ಯಾ ರಾವ್ ಅದ್ದೂರಿ‌ ಮದುವೆ ನಡೆದಿತ್ತು. ರಾಜ್ಯದ ಹೆಸರಾಂತ ರಾಜಕೀಯ ಕುಟುಂಬದ ಸಂಬಂಧಿಕರಲ್ಲೇ ತಾಜ್‌ ವೆಸ್ಟ್ ಎಂಡ್‌ನಲ್ಲಿ ರನ್ಯಾ ರಾವ್‌ ವಿವಾಹವಾಗಿದ್ದರು. ರನ್ಯಾ ರಾವ್ ಪತಿ ಹೆಸರಾಂತ ಅರ್ಕಿಟೆಕ್ಟ್ ಆಗಿದ್ದು, ಮದುವೆಯಾದ ಮೇಲೆ ಲ್ಯಾವೆಲ್ಲಿ ರಸ್ತೆಯ ಫ್ಲಾಟ್‌ಗೆ ಶಿಪ್ಟ್ ಆಗಿದ್ದರು.

ಜಾರಿ ನಿರ್ದೇಶನಾಲಯ ಎಂಟ್ರಿ!
ನಟಿ ರನ್ಯಾ ರಾವ್‌ ಅಕ್ರಮವಾಗಿ ಚಿನ್ನ ಸಾಗಾಟ ಪ್ರಕರಣದ ತನಿಖೆಗೆ ED (ಜಾರಿ ನಿರ್ದೇಶನಾಲಯ) ಕೂಡ ಎಂಟ್ರಿಯಾಗಿದೆ. ಈ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಲಿರುವ ಇಡಿ, ಹವಾಲ ಹಣದ ವರ್ಗವಣೆಯ ಬಗ್ಗೆಯೂ ಸಾಕಷ್ಟು ಅನುಮಾನಗೊಂಡಿದ್ದಾರೆ.

publive-image

ಇಷ್ಟೊಂದು ಗೋಲ್ಡ್ ಎಲ್ಲಿಗೆ ಸಾಗಾಟ ಮಾಡಲಾಗುತ್ತಾ ಇತ್ತು. ರನ್ಯಾ ರಾವ್‌ ಈ ಹಿಂದೆಯೂ ಈ ರೀತಿಯಾಗಿ ಮಾಡಿದ್ರಾ. ರನ್ಯಾ ಅವರ ವಿದೇಶ ಪ್ರಯಾಣದ ಬಗ್ಗೆ ಅಧಿಕಾರಿಗಳು ಟ್ರ್ಯಾಕ್ ಮಾಡುತ್ತಿದ್ದು, ಎಷ್ಟು ಬಾರಿ ವಿದೇಶಕ್ಕೆ ಹೋಗಿ ಬಂದಿದ್ದಾರೆ. ಎಲ್ಲಿಗೆಲ್ಲಾ ಹೋಗಿದ್ದಾರೆ. ಯಾರನ್ನೆಲ್ಲ ಭೇಟಿಯಾಗಿದ್ದಾರೆ ಎನ್ನುವ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ರನ್ಯಾ ರಾವ್ ಅವರು ಕಳೆದ 1 ವರ್ಷದಲ್ಲಿ 40 ಬಾರಿ ದುಬೈಗೆ ಹೋಗಿ ಬಂದಿರುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment