ಸೊಂಟದ ಸುತ್ತ, ಮಂಡಿ ಕೆಳಗೆ, ಶೂ ಒಳಗೆ.. ರನ್ಯಾ ರಾವ್ ಮೈ ಮೇಲೆಲ್ಲಾ ಚಿನ್ನ; ಅಧಿಕಾರಿಗಳಿಗೆ ಬಿಗ್‌ ಶಾಕ್!

author-image
admin
Updated On
ಸೊಂಟದ ಸುತ್ತ, ಮಂಡಿ ಕೆಳಗೆ, ಶೂ ಒಳಗೆ.. ರನ್ಯಾ ರಾವ್ ಮೈ ಮೇಲೆಲ್ಲಾ ಚಿನ್ನ; ಅಧಿಕಾರಿಗಳಿಗೆ ಬಿಗ್‌ ಶಾಕ್!
Advertisment
  • ಚಿನ್ನ.. ಚಿನ್ನ.. ಚಿನ್ನ.. ನಟಿ ರನ್ಯಾ ರಾವ್ ಮೈ ಮೇಲೆಲ್ಲಾ ಚಿನ್ನ!
  • ದುಬೈನಿಂದ EK 566 ಎಮಿರೇಟ್ ಫ್ಲೈಟ್​ನಲ್ಲಿ ಬಂದಿದ್ದ ರನ್ಯಾ
  • ರನ್ಯಾ ಬಳಿ ₹12 ಕೋಟಿ 56 ಲಕ್ಷ ಮೌಲ್ಯದ 14.213 ಕೆ.ಜಿ ಚಿನ್ನ

ಚಿನ್ನ.. ಚಿನ್ನ.. ಚಿನ್ನ.. ನಟಿ ರನ್ಯಾ ರಾವ್ ಮೈ ಮೇಲೆಲ್ಲಾ ಚಿನ್ನ ಇರೋದನ್ನ ನೋಡಿ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳೇ ಶಾಕ್ ಆಗಿದ್ದಾರೆ.

ರನ್ಯಾ ತಗ್ಲಾಕೊಂಡಿದ್ದೇ ರೋಚಕ! 
ಕಳೆದ ಮಾರ್ಚ್​ 3ರ ಸಂಜೆ 6.30ಕ್ಕೆ ನಟಿ ರನ್ಯಾ ರಾವ್ ದುಬೈನಿಂದ EK 566 ಎಮಿರೇಟ್ ಫ್ಲೈಟ್​ನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್​ಪೋರ್ಟ್​ಗೆ ಬಂದಿಳಿದಿದ್ದರು. ಮೊದಲೇ ಮಾಹಿತಿ ಇದ್ದ DRI ಅಧಿಕಾರಿಗಳು ರನ್ಯಾ ರಾವ್‌ ಅವರ ಮಾನಿಟರ್ ಮಾಡಿದರು. ಮೆಟಲ್ ಡಿಟೆಕ್ಟರ್​ನಲ್ಲಿ ರನ್ಯಾ ಪಾಸಾದಾಗ ಸೈರನ್ ಶಬ್ಧ ಬಂದಿತ್ತು.

publive-image

ಸಂಶಯ ನಿಜವಾದಾಗ DRI ಅಧಿಕಾರಿಗಳು ರನ್ಯಾ ರಾವ್ ಬಳಿ ಕೆಲ ಪ್ರಶ್ನೆ ಕೇಳಿದ್ರು. ನೀವೇನಾದ್ರು ಗೋಲ್ಡ್, ಬೆಲೆ ಬಾಳುವ ವಸ್ತು ತಂದಿದ್ದೀರಾ? ಎಂದರು ಅದಕ್ಕೆ ನಾನು ಏನನ್ನೂ ತಂದಿಲ್ಲ ಎಂದಿದ್ದಾರೆ. ಏನೇ ಕೇಳಿದ್ರೂ ಇಲ್ಲ ಎಂದು ರನ್ಯಾ ಉಲ್ಟಾ ಹೊಡೆದಿದ್ದಾರೆ.

ಇದನ್ನೂ ಓದಿ: 37 ವರ್ಷದ ಹಿಂದೆ 10 ರೂ.ಗೆ ಖರೀದಿಸಿದ್ದ ರಿಲಯನ್ಸ್ ಷೇರುಗಳಿಂದ ಜಾಕ್‌ ಪಾಟ್‌; ಅದೃಷ್ಟ ಅಂದ್ರೆ ಇದು! 

ಮೆಟಲ್ ಡಿಟೆಕ್ಟರ್​ನಲ್ಲಿ ರನ್ಯಾ ರಾವ್‌ ಪಾಸಾದಾಗ ಸೈರನ್ ಆಗಿತ್ತು. ರನ್ಯಾ ತಂದಿದ್ದ ಟ್ರಾಲಿ ಬ್ಯಾಗ್​ ಸ್ಕ್ಯಾನಿಂಗ್​ಗೆ ಹಾಕಲಾಗಿತ್ತು. ಸ್ಕ್ಯಾನಿಂಗ್​ನಲ್ಲಿ ಕ್ಯಾರಿ ಬ್ಯಾಗ್ ಒಳಗೆ ಏನು ಪತ್ತೆಯಾಗಿರಲಿಲ್ಲ. ನಂತರ ಪರ್ಸನಲ್ ಆಗಿ ಕರೆದುಕೊಂಡು ಹೋಗಿ ಚಿನ್ನ ಸಾಗಾಟ ಬೆಳಕಿಗೆ ಬಂದಿದೆ.

publive-image

ರನ್ಯಾ ರಾವ್‌ ಪರಿಶೀಲನೆ ವೇಳೆ ಡಿಆರ್​ಐ ಅಧಿಕಾರಿಗಳು ನಿಜಕ್ಕೂ ಶಾಕ್ ಆಗಿದ್ದಾರೆ. ಪರ್ಸನಲ್‌ ಚೆಕ್ಕಿಂಗ್ ವೇಳೆ ಚಿನ್ನದ ಬಾರ್​ಗಳು ದೇಹದಲ್ಲಿರೋದು ಪತ್ತೆಯಾಗಿದೆ. ಸೊಂಟದಲ್ಲಿ, ಮಂಡಿ ಕೆಳಗೆ, ಶೂನಲ್ಲಿ ಚಿನ್ನವೋ ಚಿನ್ನ. ದೇಹಕ್ಕೆ ಟೇಪ್ ಹಾಕಿ ಚಿನ್ನದ ಬಾರ್​ ಅಂಟಿಸಿದ್ದು, ರನ್ಯಾ ಬಳಿ ₹12 ಕೋಟಿ 56 ಲಕ್ಷ ಮೌಲ್ಯದ 14.213 ಕೆ.ಜಿ ಚಿನ್ನ ಪತ್ತೆಯಾಗಿದೆ. ಪತ್ತೆಯಾದ ಅಷ್ಟೂ ಚಿನ್ನ 24 ಕ್ಯಾರೆಟ್ ಗೋಲ್ಡ್ ಅನ್ನೋದು ಮತ್ತೊಂದು ವಿಶೇಷ.

ರನ್ಯಾ ಮೈ ಎಲ್ಲಾ ಚಿನ್ನ!
1. ಗೋಲ್ಡ್ ಬಾರ್​ ದೇಹದ ಮೇಲಿಟ್ಟು ಟೇಪ್
2. ಸೊಂಟದ ಸುತ್ತ ಗೋಲ್ಡ್​​​ ಸುತ್ತಿಕೊಂಡಿದ್ದು
3. ಮಂಡಿ ಕೆಳಗೂ ಚಿನ್ನ ಸುತ್ತಿಕೊಂಡಿದ್ದ ರನ್ಯಾ
4. ಪಾಕೆಟ್​ ಮುಂಭಾಗದಲ್ಲಿ ಗೋಲ್ಡ್ ಬಾರ್ ಪತ್ತೆ
5. ಶೂ ಒಳಗಿತ್ತು ತುಂಡು ಮಾಡಿದ್ದ ಗೋಲ್ಡ್ ಬಾರ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment