15 ದಿನಕ್ಕೆ 4 ಬಾರಿ ದುಬೈ ಟ್ರಿಪ್‌.. ರನ್ಯಾ ರಾವ್ 15kg ಚಿನ್ನದ ಹಿಂದೆ​ ‘6’ ಅನುಮಾನ! ರಹಸ್ಯವೇನು?

author-image
admin
Updated On
ಗೋಲ್ಡ್​ ಸ್ಮಂಗ್ಲಿಂಗ್ ರಾಣಿಗೆ ಈಗ ಒಂದಲ್ಲ, ಎರಡಲ್ಲ, ಮೂರು ಟೆನ್ಶನ್​! ಯಾವೆಲ್ಲಾ ಒತ್ತಡದಲ್ಲಿದ್ದಾರೆ ರನ್ಯಾ ರಾವ್​?
Advertisment
  • ರನ್ಯಾ ರಾವ್‌ ಮನೆಯಲ್ಲಿ ಕೋಟಿ, ಕೋಟಿ ದುಡ್ಡಿನ ಖಜಾನೆ ಪತ್ತೆ
  • ಕಳೆದ 1 ವರ್ಷದಲ್ಲಿ 40 ಬಾರಿ ದುಬೈಗೆ ಹೋಗಿ ಬಂದಿರುವ ಸಾಧ್ಯತೆ
  • ರನ್ಯಾ ರಾವ್ ಏರ್​ಪೋರ್ಟ್ ಬಂದಾಗ ಪೊಲೀಸರು ಬರ್ತಾ ಇದ್ದಿದ್ಯಾಕೆ?

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ದುಬೈನಿಂದ 14.58 ಕೆಜಿ ಚಿನ್ನ ತಂದು ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದಾರೆ. ರನ್ಯಾ ರಾವ್ ಬಳಿಯಿದ್ದ ಗೋಲ್ಡ್ ವಶಪಡಿಸಿಕೊಂಡ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳಿಗೆ ಮಹತ್ವದ ಸುಳಿವು ಪತ್ತೆಯಾಗುತ್ತಿದೆ.

ದುಬೈನಿಂದ ಚಿನ್ನ ತಂದಿರುವ ನಟಿ ರನ್ಯಾ ರಾವ್‌ ಮನೆಯಲ್ಲೂ ಕೋಟಿ, ಕೋಟಿ ದುಡ್ಡಿನ ಖಜಾನೆಯೇ ಪತ್ತೆಯಾಗಿದೆ. ಈ ಗೋಲ್ಡ್ ಸ್ಮಗ್ಲಿಂಗ್​​ ಜೊತೆ ಹವಾಲಾ ನಂಟಿನ ಬಗ್ಗೆಯೂ ಅನುಮಾನ ವ್ಯಕ್ತವಾಗುತ್ತಿದೆ. ರನ್ಯಾ ರಾವ್ ಅವರು ಕಳೆದ 1 ವರ್ಷದಲ್ಲಿ 40 ಬಾರಿ ದುಬೈಗೆ ಹೋಗಿ ಬಂದಿರುವ ಸಾಧ್ಯತೆ ಇದೆ.

publive-image

ರನ್ಯಾ ರಾವ್​ ಅರೆಸ್ಟ್ ಆದ ಮೇಲೆ ಸಾಲು, ಸಾಲು ಪ್ರಶ್ನೆಗಳು ಅಧಿಕಾರಿಗಳನ್ನ ಕಾಡುತ್ತಿದೆ. ನಟಿ ದುಬೈಗೆ ಹೋಗಿ ಬಂದಾಗಲೆಲ್ಲಾ ಚಿನ್ನ ತರುತ್ತಿದ್ರಾ? ಪೊಲೀಸ್ ಅಧಿಕಾರಿಯ ಮಗಳು ಎಂಬ ಕಾರಣಕ್ಕೆ ಇವರನ್ನ ತಪಾಸಣೆ ಮಾಡುತ್ತಿರಲಿಲ್ಲ. ಹಾಗಿದ್ರೆ ರನ್ಯಾ ಸ್ಮಗ್ಲಿಂಗ್ ಜಾಲದಲ್ಲಿ ಅಧಿಕಾರಿ ಪಾತ್ರವೂ ಇದ್ಯಾ ಅನ್ನೋ ಶಂಕೆ ಇದ್ದು ಡಿಆರ್​ಐ ಅಧಿಕಾರಿಗಳು ಉನ್ನತ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಮದುವೆಯಾದ 3 ತಿಂಗಳಿಗೆ ಸ್ಮಗ್ಲಿಂಗ್; ರನ್ಯಾ ರಾವ್‌ ಬಳಿ ಸಿಕ್ಕ ಚಿನ್ನ ಎಷ್ಟು? ಬೆಂಗಳೂರು ಇತಿಹಾಸದಲ್ಲೇ ಇದು ದಾಖಲೆ! 

ರನ್ಯಾ ರಾವ್ ಚಿನ್ನದ ಹಿಂದೆ​ ‘6’ ಅನುಮಾನ!
ಅನುಮಾನ 01: ರನ್ಯಾ ರಾವ್ ಕಳೆದ 15 ದಿನದಲ್ಲಿ 4 ಬಾರಿ ದುಬೈಗೆ ಹೋಗಿದ್ಯಾಕೆ?
ಅನುಮಾನ 02: ಕುಟುಂಬಸ್ಥರು, ಬ್ಯುಸಿನೆಸ್​ ಇಲ್ಲದೇ ಇದ್ರು ದುಬೈ ಪ್ರವಾಸ ಯಾಕೆ?
ಅನುಮಾನ 03: ರನ್ಯಾ ರಾವ್ ಏರ್​ಪೋರ್ಟ್ ಬಂದಾಗ ಪೊಲೀಸರು ಬರ್ತಾ ಇದ್ದಿದ್ಯಾಕೆ?
ಅನುಮಾನ 04: ಹಿರಿಯ ಪೊಲೀಸ್ ಅಧಿಕಾರಿಗೂ ಚಿನ್ನ ಸಾಗಟಕ್ಕೂ ಸಂಬಂಧ ಇದ್ಯಾ?
ಅನುಮಾನ 05: 14.8 ಕೆ.ಜಿ ಚಿನ್ನ ದುಬೈನಿಂದ ರನ್ಯಾ ಒಬ್ಬರೇ ತರಲು ಸಾಧ್ಯ ಇದ್ಯಾ?
ಅನುಮಾನ 06: ನಟಿ ರನ್ಯಾ ರಾವ್​ ಜೊತೆ ಯಾವುದಾದರೂ ಸಿಂಡಿಕೇಟ್ ಇದೆಯಾ?

ಇದಿಷ್ಟು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳಿಗೆ ಕಾಡುತ್ತಿರುವ ಅನುಮಾನಗಳಾದ್ರೆ ರನ್ಯಾ ರಾವ್‌ ಅರೆಸ್ಟ್​ ಆದ ಬಳಿಕ ಹಿರಿಯ ಪೊಲೀಸ್​ ಅಧಿಕಾರಿಗಳಿಗೂ ಟೆನ್ಶನ್​ ಹೆಚ್ಚಾಗಿದೆ.

publive-image

ರನ್ಯಾ ರಾವ್ ಬಂಧನ ಆಗಿದ್ದು ಹೇಗೆ?
ನಟಿ ರನ್ಯಾ ರಾವ್ ಅವರು ದುಬೈನಿಂದ ಎಮಿರೈಟ್ಸ್ ಫ್ಲೈಟ್​ನಲ್ಲಿ ಬೆಂಗಳೂರಿಗೆ ಬಂದರು. ಕೂಡಲೇ DRI ಟೀಂ ಬೆಂಗಳೂರು ಏರ್​ಪೋರ್ಟ್​​ನಲ್ಲಿ ರನ್ಯಾ ಸುತ್ತುವರೆದಿದೆ. ಈ ವೇಳೆ ಆತ್ಮವಿಶ್ವಾಸದಿಂದ ರನ್ಯಾ ಎಲ್ಲಾ ಅಧಿಕಾರಿಗಳನ್ನು ಮಾತಾಡಿಸಿದ್ದಾರೆ. ತಾನು DGP ಮಗಳು, ಪೊಲೀಸರು ಕೆಲ ಹೊತ್ತಲ್ಲಿ ಬರ್ತಾರೆ ಎಂದಿದ್ದಾರೆ.

ಕೆಲಹೊತ್ತಲ್ಲೇ ರನ್ಯಾ ರಾವ್‌ ಹೇಳಿದಂತೆ ಏರ್​ಪೋರ್ಟ್​ಗೆ ಪೊಲೀಸರು ಎಂಟ್ರಿ ಆಗಿದ್ದಾರೆ. ಕೂಡಲೇ ಡಿಆರ್​​ಐ ತಂಡದಿಂದ ಪೊಲೀಸರು ಹಾಗೂ ರನ್ಯಾಳ ವಿಚಾರಣೆ ನಡೆದಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ಏರ್​​ಪೋರ್ಟ್​ಗೆ ರನ್ಯಾಳನ್ನು ಸ್ವಾಗತ ಮಾಡಲು ಕಾನ್ಸ್​ಟೇಬಲ್ ಬಂದಿದ್ದರು. ಆದರೆ ಅಷ್ಟರಲ್ಲಿ ರನ್ಯಾ ಅವರು ಡಿಆರ್​​ಐ ಅಧಿಕಾರಿಗಳ ಕೈಗೆ ಲಾಕ್ ಆಗಿದ್ದರು.

ಪೊಲೀಸರು ಅಧಿಕಾರಿಯ ಸೂಚನೆಯಂತೆ ಇಲ್ಲಿಗೆ ಬಂದಿದ್ದಾಗಿ ತಿಳಿಸಿದ್ದಾರೆ. ಕೊನೆಗೆ DRI ಅಧಿಕಾರಿಗಳು ಪೊಲೀಸರನ್ನ ಅಲ್ಲಿಂದ ವಾಪಸ್​ ಕಳಿಸಿದ್ದಾರೆ. ರನ್ಯಾ ರಾವ್‌ ಬಂಧನ ಆಗುತ್ತಿದ್ದಂತೆ ಕಾನ್ಸ್​ಟೇಬಲ್ ಹಿರಿಯ ಅಧಿಕಾರಿಗಳತ್ತ​ ಬೊಟ್ಟು ಮಾಡಿದ್ದಾರೆ. ಹಿರಿಯ ಅಧಿಕಾರಿ ಸೂಚನೆ ಹಿನ್ನೆಲೆ ಬಂದಿದ್ದಾಗಿ ಕಾನ್ಟ್​ಟೇಬಲ್ ಹೇಳಿಕೆ ನೀಡಿದ್ದಾರೆ. ಕಾನ್ಸ್​ಟೇಬಲ್​ಗೆ ಸೂಚನೆ ಕೊಟ್ಟ ಹಿರಿಯ ಅಧಿಕಾರಿ ಯಾರು? ಪೊಲೀಸ್​ ಅಧಿಕಾರಿಗಳು ಸ್ಮಗ್ಲಿಂಗ್​ನಲ್ಲಿ ಭಾಗಿಯಾಗಿರೋ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಹಿರಿಯ ಪೊಲೀಸ್ ಅಧಿಕಾರಿಗೂ DRI ವಿಚಾರಣೆ ಮಾಡುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment