/newsfirstlive-kannada/media/post_attachments/wp-content/uploads/2025/03/Ranya-roa-Gold-Case.jpg)
ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ಗೆ ಹೊಸ, ಹೊಸ ಟ್ವಿಸ್ಟ್ ಸಿಗುತ್ತಿದೆ. ಬೆಂಗಳೂರು ಏರ್ಪೋರ್ಟ್ ಇತಿಹಾಸದಲ್ಲೆೇ ಅತಿ ಹೆಚ್ಚು ಚಿನ್ನ ರನ್ಯಾ ರಾವ್ ಅವರ ಬಳಿ ಸಿಕ್ಕಿದ್ದು ಹಲವು ಅನುಮಾನಗಳನ್ನು ಸೃಷ್ಟಿಸಿದೆ.
ಇದಿಷ್ಟೇ ಅಲ್ಲ ರನ್ಯಾ ಮನೆಯಲ್ಲೂ 2 ಕೋಟಿ 67 ಲಕ್ಷ ರೂಪಾಯಿ ನಗದು ಸಿಕ್ಕಿದೆ. ಆ ಚಿನ್ನ, ನಗದು ಸೇರಿ ಒಟ್ಟು 17.29 ಕೋಟಿ ಮೌಲ್ಯದ ಖಚಾನೆ ಕಂಡು ಡಿಆರ್ಐ ಅಧಿಕಾರಿಗಳು ದಂಗಾಗಿದ್ದಾರೆ.
ಕೈದಿ ನಂಬರ್ 2198/25!
ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಬಂಧಿಸಲಾದ ನಟಿ ರನ್ಯಾ ರಾವ್ ಅವರನ್ನು ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದೆ. ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ರನ್ಯಾ ರಾವ್ ಅವರಿಗೆ ಕೈದಿ ನಂಬರ್ 2198/25 (UTP) ನೀಡಲಾಗಿದೆ. 14 ದಿನಗಳ ಕಾಲ ನಟಿ ರನ್ಯಾಗೆ ಜೈಲೂಟವೇ ಗತಿಯಾಗಿದ್ದು, ಸೊಳ್ಳೆ ಕಾಟ.. ಮುದ್ದೆ ಊಟಕ್ಕೆ ರನ್ಯಾ ರಾವ್ ಪರದಾಡುವಂತಾಗಿದೆ.
ಇದನ್ನೂ ಓದಿ: ಆಭರಣ ಪ್ರಿಯರಿಗೆ ಬಿಗ್ ಶಾಕ್; ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ.. 10 ಗ್ರಾಂಗೆ ಎಷ್ಟು ಹೆಚ್ಚಳ ಆಗಿದೆ?
14.8 ಕೆಜಿ ಚಿನ್ನ ಸಾಗಿಸಿದ್ದು ಹೇಗೆ?
ದುಬೈನಿಂದ ಬೆಂಗಳೂರಿಗೆ ಬಂದಿದ್ದ ನಟಿ ರನ್ಯಾ ರಾವ್ ಅವರು ತನ್ನ ಬಟ್ಟೆಯಲ್ಲೇ 14.8 ಕೆಜಿ ಚಿನ್ನವನ್ನು ಸಾಗಿಸಲು ಪ್ರಯತ್ನಿಸಿದ್ದರು. ಇವರು ಚಿನ್ನ ಅಡಗಿಸಿಟ್ಟಿದ್ದ ಪರಿ ಕಂಡು DRI ಅಧಿಕಾರಿಗಳೇ ಶಾಕ್ ಆಗಿದ್ದರು.
ರನ್ಯಾ ರಾವ್ ಧರಿಸಿದ್ದ ಬಟ್ಟೆಯಲ್ಲೇ ಮುಕ್ಕಾಲು ಪಾಲು ಚಿನ್ನ ಇತ್ತು. ಒಂದಷ್ಟು ಬಟ್ಟೆಯಲ್ಲಿ, ಉಳಿದಷ್ಟು ಚಿನ್ನ ಬ್ಯಾಗ್ನಲ್ಲಿ ಪತ್ತೆಯಾಗಿದೆ. ಎಲ್ಲಾ ಚಿನ್ನದ ಗಟ್ಟಿ ರೂಪದಲ್ಲಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ