ನಟಿ ರನ್ಯಾ ರಾವ್ ಅರ್ಜಿ ಜಾಮೀನು ಅರ್ಜಿ ವಜಾ! ತರುಣ್​ ಅರ್ಜಿ ವಿಚಾರಣೆ ಮುಂದೂಡಿದ ನ್ಯಾಯಾಲಯ

author-image
Gopal Kulkarni
Updated On
ನಟಿ ರನ್ಯಾ ರಾವ್ ಅರ್ಜಿ ಜಾಮೀನು ಅರ್ಜಿ ವಜಾ! ತರುಣ್​ ಅರ್ಜಿ ವಿಚಾರಣೆ ಮುಂದೂಡಿದ ನ್ಯಾಯಾಲಯ
Advertisment
  • ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ನಟಿಗೆ ಶಾಕ್​
  • ರನ್ಯಾಳ ಜಾಮೀನು ಅರ್ಜಿ ವಜಾಗೊಳಿಸಿದ ನ್ಯಾಯಾಲಯ
  • ರನ್ಯಾ ರಾವ್ ಜಾಮೀನು ಅರ್ಜಿ ವಜಾ ಆಗಲು ಕಾರಣಗಳೇನು?

ಗೋಲ್ಡ್​ ಸ್ಮಗ್ಲಿಂಗ್​ ಪ್ರಕರಣದಲ್ಲಿ ಬಂಧನದಲ್ಲಿರುವ ನಟಿ ರನ್ಯಾ ರಾವ್ ಅವರ ಜಾಮೀನು ಅರ್ಜಿಯನ್ನು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ. ನ್ಯಾಯಾಧೀಶರಾದ ವಿಶ್ವನಾಥ್ ಸಿ ಗೌಡರ್ ಅವರಿಂದ ಆದೇಶ ನೀಡಿದ್ದು. ಆರೋಪಿ ತರುಣ್​ ಕೊಂಡೂರು ಜಾಮೀನು ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ

ಇನ್ನು ನಟಿ ರನ್ಯಾ ಜಾಮೀನು ಅರ್ಜಿ ವಜಾ ಆಗಲು ಪ್ರಮುಖ ಕಾರಣಗಳೇನು ಎಂದು ನೋಡುವುದಾದ್ರೆ. ಕಸ್ಟಮ್​ ಬ್ಯಾಗೇಜ್ ನಿಯಮವನ್ನು ಅವರು ಉಲ್ಲಂಘಿಸಿದ್ದು ಗಂಭೀರವಾದ ಕಾರಣ. ಒಂದು ವೇಳೆ ಹೊರ ಬಂದಿದ್ದೆ ಆದಲ್ಲಿ ಸಾಕ್ಷಿ ನಾಶ ಮಾಡಬಹುದು ಹಾಗೂ ತನಿಖೆಯ ದಿಕ್ಕು ತಪ್ಪಿಸುವಂತಹ ಕೆಲಸ ಮಾಡಬಹುದು ಎಂಬುದು ಇನ್ನೊಂದು ಕಾರಣ.

ಇದನ್ನೂ ಓದಿ:ರನ್ಯಾ ರಾವ್​ ಗೋಲ್ಡ್​ ಸ್ಮಗ್ಲಿಂಗ್ ಪ್ರಕರಣ.. 3 ಆಯಾಮಗಳಲ್ಲಿ ಶುರುವಾಗಿದೆ ಪ್ರತ್ಯೇಕ ತನಿಖೆ!

ಆಕೆ ಒಂದು ವರ್ಷದ ಅವಧಿಯಲ್ಲಿ 27 ಬಾರಿ ವಿದೇಶ ಪ್ರಯಾಣ ಮಾಡಿದ್ದಾಳೆ ಇದರಿಂದ ಶೇಕಡಾ 38ರಷ್ಟು ಕಸ್ಟಮ್ಸ್ ಸುಂಕ ವಂಚನೆಯಾಗಿದೆ. ಇದರಿಂದ ಒಟ್ಟು 4 ಕೋಟಿ 82 ಲಕ್ಷ 72 ಸಾವಿರದ 694 ರೂಪಾಯಿ ಸುಂಕ ವಂಚನೆಯಾಗಿದ್ದು, ಆಕೆಯ ಬಳಿ ದುಬೈ ರೆಸಿಡೆಂಟ್ ಐಡೆಂಟಿಟಿ ಕಾರ್ಡ್​ ಕೂಡ ಇರುವುದರಿಂದ ಜಾಮೀನು ಅರ್ಜಿ ವಜಾ ಆಗಲು ಪ್ರಮುಖ ಕಾರಣಗಳಾಗಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment