/newsfirstlive-kannada/media/post_attachments/wp-content/uploads/2025/03/Ranya-roa-Gold-Case-9.jpg)
ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ಗೆ ಕೊನೆಗೂ ಮೇಜರ್ ಟ್ವಿಸ್ಟ್ ಸಿಕ್ಕಿದೆ. ತನಿಖೆ ನಡೆಸುತ್ತಿರುವ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳು ಸ್ಫೋಟಕ ಮಾಹಿತಿಯನ್ನು ಕಲೆ ಹಾಕಿದ್ದಾರೆ.
ರನ್ಯಾ ರಾವ್​ ಗೋಲ್ಡ್​​ ಕೇಸ್ ಜೊತೆಗೆ DRI ಅಧಿಕಾರಿಗಳು ಮತ್ತೊಬ್ಬ ಆರೋಪಿ A3 ಸಾಹಿಲ್ ಅನ್ನು ವಶಕ್ಕೆ ಪಡೆದಿದ್ದರು. ಸಾಹಿಲ್ ವಿಚಾರಣೆ ವೇಳೆ ಚಿನ್ನದ ರಹಸ್ಯ ಬಯಲಾಗಿದೆ. ನಟಿ ರನ್ಯಾ ರಾವ್ ಅವರು ಕಳೆದ ಜನವರಿಯಲ್ಲಿ 14.56 ಕೆಜಿ ಅಕ್ರಮ ಚಿನ್ನ ಸಾಗಿಸಿದ್ದರು. ಅಲ್ಲದೇ ಚಿನ್ನ ಮಾರಾಟ ಮಾಡಿದ್ದು ವಾಟ್ಸಾಪ್​ ಚಾಟ್​ನಿಂದ ರಿವೀಲ್​ ಆಗಿದೆ.
/newsfirstlive-kannada/media/post_attachments/wp-content/uploads/2025/03/Ranya-rao.jpg)
ರನ್ಯಾ ಚಿನ್ನದ ರಹಸ್ಯ ಏನು?
3ನೇ ಆರೋಪಿ ಸಾಹಿಲ್ ವಿಚಾರಣೆ ವೇಳೆ ಸ್ಫೋಟಕ ವಿಚಾರ ಬಯಲಾಗಿದೆ. ಆರೋಪಿ ಸಾಹಿಲ್ ಅವರು ಚಿನ್ನ ಮಾರಾಟ ಮಾಡಲು ರನ್ಯಾಗೆ ಸಹಾಯ ಮಾಡಿದ್ದರು. DRIಗೆ ಸಿಕ್ಕ ಡಿಜಿಟಲ್ ಸಾಕ್ಷಿಯಲ್ಲಿ ಆರೋಪಿಗಳು ಹಲವು ಬಾರಿ ಚಿನ್ನ ಕಳ್ಳಸಾಗಣೆ ಮಾಡಿರೋ ರಹಸ್ಯ ಬಯಲಾಗಿದೆ.
ಇದನ್ನೂ ಓದಿ: ರನ್ಯಾ ರಾವ್ ಪ್ರಕರಣದಲ್ಲಿ ಮತ್ತೊಬ್ಬ ಅರೆಸ್ಟ್; ಯಾರು ಸಾಹಿಲ್ ಜೈನ್..?
ಸಾಹಿಲ್ ಜೈನ್​ ವಾಟ್ಸಾಪ್ ಚಾಟ್​​ನಲ್ಲಿ ಹಣ ವರ್ಗಾಯಿಸಿದ್ದು, ಅಕ್ರಮ ಚಿನ್ನ ಮಾರಾಟ ಮಾಡಿದ್ದು ಬಹಿರಂಗ ಆಗಿದೆ. ಮಾರ್ಚ್ 3ರಂದು ರನ್ಯಾ ರಾವ್ ದುಬೈನ ನಂಬರ್​ನಿಂದ ಸಾಹಿಲ್​ಗೆ ಕರೆ ಮಾಡಲಾಗಿತ್ತು.
ಆರೋಪಿಗಳು ಫೋನ್​ನಲ್ಲಿ ಚಿನ್ನ ವಿಲೇವಾರಿ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದರು. ವಿಚಾರಣೆಯಲ್ಲಿ ತಾನು ಹವಾಲ ದಂಧೆಯಲ್ಲಿ ತೊಡಿಸಿಕೊಂಡಿದ್ದಾಗಿ ಸಾಹಿಲ್ ಹೇಳಿಕೆ ನೀಡಿದ್ದಾರೆ. ರನ್ಯಾಗೆ ಚಿನ್ನ ಖರೀದಿಗೆ ಹವಾಲ ಹಣ ನೀಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಡಿಆರ್​ಐ ಅಧಿಕಾರಿಗಳು A3 ಸಾಹಿಲ್ ವಿಚಾರಣೆಯನ್ನು ಮುಂದುವರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us