/newsfirstlive-kannada/media/post_attachments/wp-content/uploads/2024/08/rashmi3.jpg)
ಹಿಂದಿ ಕಿರುತೆರೆಯ ಖ್ಯಾತ ನಟಿ ಹಾಗೂ ಹಿಂದಿ ಬಿಗ್​ಬಾಸ್​ 13ರ ಮಾಜಿ ಸ್ಪರ್ಧಿ ರಶ್ಮಿ ದೇಸಾಯಿ ಶಾಕಿಂಗ್​ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ. ರಶ್ಮಿ ದೇಸಾಯಿ ಅವರು ಬಿಗ್​ಬಾಸ್​ ಮೂಲಕ ಅಪಾರ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಬಿಗ್​ಬಾಸ್ ಫೈನಲ್​ನಲ್ಲಿ​ ನಾಲ್ಕನೇ ಫೈನಲಿಸ್ಟ್​ ಆಗಿ ಆಚೆ ಬಂದಿದ್ದರು. ಬಿಗ್​ಬಾಸ್​ ಟ್ರೋಫಿ ಗೆದ್ದುಕೊಂಡಿಲ್ಲವಾದರೂ ಸಾಕಷ್ಟು ಅಭಿಮಾನಿಗಳ ಮನಸ್ಸನ್ನು ಗೆದ್ದುಕೊಂಡಿದ್ದಾರೆ. ಆದರೆ ನಟಿ ರಶ್ಮಿ ದೇಸಾಯಿ ಅವರ ಅದೊಂದು ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಹಲ್​ಚಲ್​ ಎಬ್ಬಿಸಿದೆ.
/newsfirstlive-kannada/media/post_attachments/wp-content/uploads/2024/08/rashmi1.jpg)
ಇದನ್ನೂ ಓದಿ: ಒಬ್ಬಂಟಿಯಾದ ನೌಫಲ್​.. ಪತ್ನಿ, ಮಕ್ಕಳು ಸೇರಿ ಕುಟುಂಬದ 11 ಜನರು ನಾಪತ್ತೆ.. ಸಿಗದ ಮೃತದೇಹ, ತಡೆಯಲಾರದ ದುಃಖ
ಹೌದು, ಕಿರುತೆರೆಯ ಖ್ಯಾತ ನಟಿಯಾಗಿರೋ ರಶ್ಮಿ ದೇಸಾಯಿ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಡಿವೋರ್ಸ್ ಮತ್ತು ಬಾಯ್‌ಫ್ರೆಂಡ್ ಜೊತೆಗಿನ ಬ್ರೇಕಪ್ ಬಗ್ಗೆ ನೋವನ್ನು ಹಂಚಿಕೊಂಡಿದ್ದಾರೆ. ನಟಿ ರಶ್ಮಿ ದೇಸಾಯಿ ಅವರು ನಂದೀಶ್ ಸಿಂಗ್ ಸಂಧು ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದಾದ ಮೂರು ವರ್ಷದ ನಂತರ ನಂದೀಶ್ ಸಿಂಗ್ ಸಂಧು ಅವರಿಂದ ನಟಿ ಡಿವೋರ್ಸ್ ಪಡೆದುಕೊಂಡರು. ಅದಾದ ಬಳಿಕ ಬಾಯ್‌ಫ್ರೆಂಡ್ ಉದ್ಯಮಿ ಅರ್ಹಾನ್ ಖಾನ್ ಜೊತೆಗಿದ್ದರಂತೆ. ಆ ಸಂಬಂಧದಲ್ಲಿ ಅಷ್ಟಾಗಿ ಹೊಂದಿಕೊಂಡು ಇರಲು ಆಗಲಿಲ್ಲ ಅಂತ ಬ್ರೇಕಪ್ ಮಾಡಿಕೊಂಡರು.
/newsfirstlive-kannada/media/post_attachments/wp-content/uploads/2024/08/rashmi.jpg)
ಆದರೆ ನಂದೀಶ್ ಸಿಂಗ್ ಸಂಧು ಅವರಿಗೆ ಡಿವೋರ್ಸ್ ಕೊಟ್ಟ ನಂತರ ತಮ್ಮ ಜೀವನದಲ್ಲಿ ಏನೆಲ್ಲಾ ಆಯ್ತು ಎಂಬುವುದರ ಬಗ್ಗೆ ಸಂದರ್ಶನದಲ್ಲಿ ಭಾವುಕರಾಗಿ ಮಾತಾಡಿದ್ದಾರೆ. ಡಿವೋರ್ಸ್ ಪಡೆದ ನಂತರ ನಾಲ್ಕು ದಿನ ನಾನು ರಸ್ತೆ ಬದಿಯಲ್ಲಿ ಮಲಗುವ ಪರಿಸ್ಥಿತಿ ಎದುರಾಗಿತ್ತು. ನನ್ನ ಬಳಿ ಇದ್ದ ಆಡಿ 6 ಕಾರಿನಲ್ಲಿ ಮಲಗಿಕೊಂಡಿದ್ದೆ. ಅಲ್ಲದೆ ಊಟ ಇಲ್ಲ, ಹಣ ಕೂಡ ಇಲ್ಲದ ಕಾರಣ ರಸ್ತೆಯಲ್ಲಿ ಸಿಗುವ 20 ರೂಪಾಯಿ ಊಟವನ್ನು ತಿನ್ನುತ್ತಿದ್ದೆ. ಆಟೋ ಡ್ರೈವರ್‌ಗಳು ತಿನ್ನುತ್ತಿದ್ದ ಜಾಗದಲ್ಲಿ ನಾನಿದ್ದೆ. ನನ್ನ ಬಟ್ಟೆಗಳಿಗೆ ಜಾಗವಿಲ್ಲದ ಕಾರಣ ನನ್ನ ಮ್ಯಾನೇಜರ್ ಮನೆಯಲ್ಲಿ ಇಟ್ಟಿದೆ. ವಿಚ್ಛೇದನದ ಸಮಯದಲ್ಲಿ 3 ರಿಂದ 3.5 ಕೋಟಿ ರೂಪಾಯಿ ಸಾಲವಿತ್ತು ಅದನ್ನು ತೀರಿಸಲು ಸಹಾಯ ಮಾಡಿದ್ದು ದಿಲ್ ಸೇ ದಿಲ್ ತಕ್ ಎನ್ನುವ ಧಾರಾವಾಹಿ. ಅಲ್ಲಿಂದ ನನ್ನ ಜರ್ನಿ ಅದ್ಭುತವಾಗಿ ಇತ್ತು. ಸದ್ಯ ಬಿಗ್​ಬಾಸ್‌ವರೆಗೂ ಬಂದು ನಿಂತಿದೆ ಎಂದು ನಟಿ ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us