ನಾನು ಕರ್ನಾಟಕದವಳು, ಕರ್ನಾಟಕದಲ್ಲೇ ಬೆಳೆದಿದ್ದು.. ನಟಿ ರಶ್ಮಿಕಾ ಮಂದಣ್ಣ ಈಗ ಯಾಕಿಂಗೆ ಹೇಳಿದ್ರು?

author-image
admin
Updated On
ನಾನು ಕರ್ನಾಟಕದವಳು, ಕರ್ನಾಟಕದಲ್ಲೇ ಬೆಳೆದಿದ್ದು.. ನಟಿ ರಶ್ಮಿಕಾ ಮಂದಣ್ಣ ಈಗ ಯಾಕಿಂಗೆ ಹೇಳಿದ್ರು?
Advertisment
  • ರಶ್ಮಿಕಾ ಮಂದಣ್ಣ ಅಭಿನಯದ ಸಿಕಂದರ್ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್‌!
  • ನಾನು ಹೈದರಾಬಾದ್​ನಿಂದ ಬಂದವಳು ಎಂದು ಕೆಂಗಣ್ಣಿಗೆ ಗುರಿಯಾಗಿದ್ದರು
  • ನಿಮಗೆ ಹುಟ್ಟಿದ ಊರೇ ಮರೆತು ಹೋಯ್ತಾ ಎಂದು ಪ್ರಶ್ನಿಸಿದ್ದ ಕನ್ನಡಿಗರು

ನ್ಯಾಷನಲ್ ಕ್ರಶ್ ಖ್ಯಾತಿಯ ಬ್ಯಾಕ್‌ ಟು ಬ್ಯಾಕ್‌ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ನಟಿ ರಶ್ಮಿಕಾ ಮಂದಣ್ಣ ಅವರು ಸಿಕಂದರ್ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇಂದು ಬಿಡುಗಡೆಯಾಗಿರುವ ಸಿಕಂದರ್ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್‌ ಕೂಡ ಸಿಕ್ಕಿದೆ. ಈ ಖುಷಿ ಸುದ್ದಿಯ ಮಧ್ಯೆ ರಶ್ಮಿಕಾ ಮಂದಣ್ಣ ಅವರು ತನ್ನ ತಾಯ್ನಾಡಿನ ಭಾಷೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

publive-image

ಸಿಕಂದರ್ ಸಿನಿಮಾದ ಸಂದರ್ಶನದ ವೇಳೆ ನಟಿ ರಶ್ಮಿಕಾ ಅವರು ಭಾಷೆಗಳನ್ನು ಕಲಿಯುವುದರ ಬಗ್ಗೆ ಮಾತನಾಡಿದ್ದಾರೆ. ನಾನು ಕರ್ನಾಟಕದವಳು. ನಾನು ಬೆಳೆದಿದ್ದು ಕರ್ನಾಟಕದಲ್ಲಿ. ಅಲ್ಲಿ ನಾನು ಮಾತನಾಡುತ್ತಿದ್ದಿದ್ದು ಕನ್ನಡ ಮತ್ತು ಇಂಗ್ಲೀಷ್ ಎಂದಿದ್ದಾರೆ.

ಇದನ್ನೂ ಓದಿ: ನಂಬಲು ಅಸಾಧ್ಯ, ಹೃದಯ ವಿದ್ರಾವಕ -ರಶ್ಮಿಕಾ ಮಂದಣ್ಣ ಆಕ್ರೋಶ  

ಹೈದರಾಬಾದ್​ಗೆ​ ಬಂದ ಬಳಿಕ ನಾನು ತೆಲುಗು ಕಲಿಯುವುದು ಅನಿವಾರ್ಯವಾಯಿತು. ನನ್ನ ಮನೆ, ಕಚೇರಿಯ ಸಿಬ್ಬಂದಿ, ಸೆಕ್ಯೂರಿಟಿಯವರು ತೆಲುಗು ಭಾಷೆಯವರೇ ಇದ್ದಾರೆ. ನನ್ನ ಸಿಬ್ಬಂದಿ ಜೊತೆ ನಾನು ತೆಲುಗು ಭಾಷೆಯಲ್ಲೇ ಮಾತನಾಡಬೇಕು. ಹೀಗಾಗಿ ನಾನು ತೆಲುಗು ಭಾಷೆ ಕಲಿತಿದ್ದೇನೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

publive-image

ಹೈದರಾಬಾದ್‌ನವರು ಎಂದಿದ್ದ ರಶ್ಮಿಕಾ!
ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ ಅವರು ನಾನು ಹೈದರಾಬಾದ್​ನಿಂದ ಬಂದವಳು ಎಂದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಕನ್ನಡಿಗರು ರಶ್ಮಿಕಾ ಮಂದಣ್ಣ ಅವರ ಮಾತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ನಿಮಗೆ ಹುಟ್ಟಿದ ಊರೇ ಮರೆತು ಹೋಯ್ತಾ ಅಂತೆಲ್ಲಾ ಆಕ್ರೋಶದ ಮಾತನಾಡಿದ್ದರು. ಇದೀಗ ನಾನು ಕರ್ನಾಟಕದವಳು ಅನ್ನೋ ಮೂಲಕ ರಶ್ಮಿಕಾ ಮಂದಣ್ಣ ತನ್ನ ಹಳೆಯ ವಿವಾದಕ್ಕೆ ತೆರೆ ಎಳೆಯೋ ಪ್ರಯತ್ನ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment