/newsfirstlive-kannada/media/post_attachments/wp-content/uploads/2025/07/Rashmika_Mandanna-1.jpg)
ಸದಾ ವಿವಾದಗಳಿಂದಲೇ ಸುದ್ದಿಯಾಗುವ ನಟಿ ರಶ್ಮಿಕಾ ಮಂದಣ್ಣ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾರೆ. ಕೊಡವ ಸಮುದಾಯದಿಂದ ಸಿನಿಮಾಗೆ ಬಂದವರಲ್ಲಿ ನಾನೇ ಮೊದಲು ಎಂದು ಹೇಳುವ ಮೂಲಕ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ.
/newsfirstlive-kannada/media/post_attachments/wp-content/uploads/2024/11/rashmika1.jpg)
ಸಂದರ್ಶನವೊಂದರಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ಮಾತನಾಡಿದ್ದು, ಸಿನಿಮಾದಲ್ಲಿ ನಟಿಸಿ, ನನ್ನ ಮೊದಲ ಚೆಕ್ ಸಿಕ್ಕಾಗ, ಮನೆಯಲ್ಲಿ ಏನೆಲ್ಲಾ ಮಾತಾಡುತ್ತಿದ್ದರು ಅಂತ ನನಗೆ ನೆನಪಿದೆ. ಅದು ಸುಲಭವೂ ಆಗಿರಲಿಲ್ಲ. ಯಾಕಂದ್ರೆ ಕೂರ್ಗ್ ಸಮುದಾಯದಲ್ಲಿ, ಯಾರೂ ಸಿನಿಮಾ ಜಗತ್ತಿಗೆ ಬಂದಿರಲಿಲ್ಲ ಅಂತ ನನಗನಿಸುತ್ತೆ. ಇಡೀ ಕೂರ್ಗ್​ ಸಮುದಾಯದಲ್ಲಿ ನಾನೇ ಮೊದಲು ಸಿನಿಮಾ ಇಂಡಸ್ಟ್ರಿಗೆ ಬಂದಿದ್ದು ಎಂದು ಹೇಳಿದ್ದಾರೆ.
ಸಿನಿಮಾ ಕ್ಷೇತ್ರ ಕುರಿತು ರಶ್ಮಿಕಾ ಮಂದಣ್ಣಗೆ ಅಷ್ಟೊಂದು ತಿಳುವಳಿಕೆ ಇದೆಯೋ, ಇಲ್ಲವೋ ಗೊತ್ತಿಲ್ಲ. ಏಕೆಂದರೆ ಈಗಾಗಲೇ ಕೂರ್ಗಾ ಸಮುದಾಯದಿಂದ ಸಿನಿ ರಂಗಕ್ಕೆ ಬಂದು ಅದ್ಭುತವಾಗಿ ಅಭಿನಯ ಮಾಡಿದ್ದಾರೆ. ನಟಿ ಪ್ರೇಮಾ ಅವರ ನಟನೆ, ಮಾತುಗಳು ಈಗಲೂ ಕರ್ನಾಟಕದ ಮನೆ ಮನಗಳಲ್ಲೂ ತುಂಬಿವೆ. ಪ್ರೇಮಾ ಅವರು ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿ ಯಶಸ್ವಿ ಕಂಡಿದ್ದಾರೆ. ನಮ್ಮೂರ ಮಂದಾರ ಹೂವೆ, ಚಂದ್ರಮುಖಿ ಪ್ರಾಣಸಖಿ, ಯಜಮಾನ ಮತ್ತು ಆಪ್ತಮಿತ್ರ ಕರ್ನಾಟಕದಲ್ಲೇ ಅತ್ಯಂತ ಹೆಸರು ಪಡೆದ ಸಿನಿಮಾಗಳು.
ಪ್ರೇಮಾ ಅವರು ವಿಷ್ಣುವರ್ಧನ್ ಅವರೊಂದಿಗೆ 7 ಮೂವಿಗಳಲ್ಲಿ ಅಭಿನಯ ಮಾಡಿದ್ದಾರೆ. ಅವುಗಳಲ್ಲಿ ಯಜಮಾನ, ಆಪ್ತಮಿತ್ರ, ಜಮಿಂದಾರು, ಕ್ಷಣ ಕ್ಷಣ, ಏಕದಂತ, ಪರ್ವ, ಮತ್ತು ಎಲ್ಲರಂತಲ್ಲ ನನ್ನ ಗಂಡ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ಕ್ರೇಜಿಸ್ಟಾರ್ ರವಿಚಂದ್ರ ಜೊತೆ ಕನಸುಗಾರ ಸಿನಿಮಾದಲ್ಲಿ ಪ್ರೇಮಾ ಅವರ ಅಭಿನಯ ಈಗಲೂ ಎಲ್ಲರ ಮನದಲ್ಲಿ ಅಚ್ಚಳಿಯದೇ ಉಳಿದಿದೆ. ಈ ಸಿನಿಮಾಗಳನ್ನು ರಶ್ಮಿಕಾ ಮಂದಣ್ಣ ಕೂಡ ನೋಡಿರಬಹುದು. ಏಕೆಂದರೆ ರಶ್ಮಿಕಾ ಆಡಿ ಬೆಳೆಯುವಾಗಲೇ ಕರ್ನಾಟಕದ ಎಲ್ಲ ಕಡೆ ಈ ಸಿನಿಮಾಗಳು ಹಾಗೂ ಈ ಸಿನಿಮಾ ಸಾಂಗ್​ಗಳು ಎಲ್ಲರ ಬಾಯಲ್ಲೂ ಗುಣುಗುಟ್ಟುತ್ತಿದ್ದವು.
/newsfirstlive-kannada/media/post_attachments/wp-content/uploads/2025/07/PREMA_MOVIES.jpg)
ಕನ್ನಡದಲ್ಲಿ ಪ್ರೇಮಾ ಅವರಂತೆಯೇ ನಿಧಿ ಸುಬ್ಬಯ್ಯ, ಹರ್ಷಿಕಾ ಪೂಣಚ್ಚ, ತಪಸ್ವಿನಿ ಪೂಣಚ್ಚ, ಶುಭ್ರ ಅಯ್ಯಪ್ಪ ಇವರೆಲ್ಲರೂ ಕೂರ್ಗ ಸಮುದಾಯದಿಂದಲೇ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬಂದು ಸಕ್ಸಸ್​ ಕಂಡವರು. ಈ ಎಲ್ಲರನ್ನು ಬಿಟ್ಟು ನಾನೇ ಮೊದಲು ಕೂರ್ಗ್​ ಸಮುದಾಯದಿಂದ ಸಿನಿಮಾ ಕ್ಷೇತ್ರಕ್ಕೆ ಬಂದಿದ್ದು ಎಂದು ರಶ್ಮಿಕಾ ಅವರು ಹೇಳಿರುವುದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us