/newsfirstlive-kannada/media/post_attachments/wp-content/uploads/2024/04/Rashmika-Mandanna-Pushpa.jpg)
ಕೊಡಗಿನ ಬೆಡಗಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಎಂದರೆ ಅದೆಷ್ಟೋ ಜನರಿಗೆ ತುಂಬಾ ಇಷ್ಟ. ಅದ್ಭುತ ನಟನೆಯ ಮೂಲಕವೇ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡ ನಟಿ ಇವರು. ಕಿರಿಕ್ ಪಾರ್ಟಿ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದ ರಶ್ಮಿಕಾ ಮಂದಣ್ಣ ದೊಡ್ಡ ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ.
ಇದನ್ನೂ ಓದಿ:ಅಬ್ಬಬ್ಬಾ.. ನ್ಯಾಷನಲ್ ಕ್ರಶ್ ರಶ್ಮಿಕಾ ಬೈಸೆಪ್ಸ್ ಕಂಡು ದಂಗಾದ ಫ್ಯಾನ್ಸ್; ಏನಂದ್ರು ಗೊತ್ತಾ? VIDEO
ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ಫೇಮಸ್ ನಟಿಯಾಗಿದ್ದಾರೆ. ದಿನ ಕಳೆದಂತೆ ರಶ್ಮಿಕಾ ಮಂದಣ್ಣ ಖ್ಯಾತಿ ಹೆಚ್ಚತಲೇ ಇದೆ. ಆದರೆ ನಟಿ ರಶ್ಮಿಕಾ ಮಂದಣ್ಣ ಅವರು ಒಂದೇ ಬಾರಿಗೆ ಆಯ್ಕೆಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರಲ್ಲ. ಬದಲಾಗಿ ರಶ್ಮಿಕಾ ಕೂಡ ಆರಂಭದಲ್ಲಿ ಸಾಕಷ್ಟು ಕಷ್ಟ ಅನುಭವಿಸಿ ಬಂದಿದ್ದಾರೆ.
ಸಾಕಷ್ಟು ಜನರು ಕಿರಿಕ್ ಪಾರ್ಟಿಯಲ್ಲಿ ನಟಿಗೆ ಬೇಗನೇ ಅವಕಾಶ ಸಿಕ್ಕಿತು ಅಂತ ಎಂದುಕೊಂಡಿದ್ದರು. ಆದರೆ ಆ ಹಿಂದೆ ಕೂಡ ನಟಿ ರಶ್ಮಿಕಾ ಸಾಕಷ್ಟು ಕಷ್ಟಪಟ್ಟಿದ್ದಾರಂತೆ. ಈ ಬಗ್ಗೆ ಖುದ್ದು ನ್ಯಾಷನಲ್ ಕ್ರಶ್ ಅವರೇ ಹೇಳಿಕೊಂಡಿದ್ದಾರೆ. ಹೌದು, ಅವರು ಭಾರತದ ಕ್ರಶ್ ಎಂಬ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ. ಅವರ ಯಶಸ್ಸಿನ ಹಿಂದೆ ಒಂದು ಹೋರಾಟ ಇದೆ. ಆ ಬಗ್ಗೆ ರಶ್ಮಿಕಾ ಮಾತನಾಡಿದ್ದಾರೆ.
ಇದನ್ನೂ ಓದಿ:ಡಿಫರೆಂಟ್ ಲುಕ್ನಲ್ಲಿ ಕಾಣಿಸಿಕೊಂಡ ಬಿಗ್ಬಾಸ್ ಮಾಜಿ ಸ್ಪರ್ಧಿ; ‘ನಮ್ಮು’ ಏನಾದ್ರೂ ವಿಶೇಷ ಉಂಟಾ?
ನಾನು ಆಡಿಷನ್ನಲ್ಲಿ ರಿಜೆಕ್ಟ್ ಆದ ಬಳಿಕ ಅಳುತ್ತಾ ಮನೆಗೆ ಹೋಗಿದ್ದೆ. ಸಿನಿಮಾ ಒಂದಕ್ಕೆ ನಿರಂತರವಾಗಿ ಆಡಿಷನ್ ನೀಡಿ ಕೊನೆಯಲ್ಲಿ ಆಯ್ಕೆ ಆದೆ. 2-3 ತಿಂಗಳು ತರಬೇತಿ ಪಡೆದ ನಂತರ ಸಿನಿಮಾ ಕ್ಯಾನ್ಸಲ್ ಆಯಿತು. ಸಿನಿಮಾದಿಂದ ಸಿನಿಮಾಗೆ ಉತ್ತಮ ಆಗಬೇಕು ಎನ್ನುವ ಆಸೆ ನಮ್ಮ ಕೈಯಲ್ಲೇ ಇರುತ್ತದೆ. ನಾನು ನನ್ನ ಸಿನಿಮಾಗಳನ್ನು ನೋಡಿದಾಗ ಇನ್ನೂ ಉತ್ತಮವಾಗಿ ನಟಿಸಬಹುದು ಎಂದೆನಿಸುತ್ತದೆ ಅಂತ ಹೇಳಿಕೊಂಡಿದ್ದಾರೆ.
ಸದ್ಯ ನಟಿ ರಶ್ಮಿಕಾ ಮಂದಣ್ಣ ಹಾಗೂ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’ ಸಿನಿಮಾ ಡಿಸೆಂಬರ್ 6ರಂದು ರಿಲೀಸ್ ಆಗಲಿದೆ. ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ. ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಸಿನಿಮಾದಲ್ಲೂ ರಶ್ಮಿಕಾ ನಟಿಸುತ್ತಿದ್ದಾರೆ. ಈ ಮೂಲಕ ಅವರ ಖ್ಯಾತಿ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.