/newsfirstlive-kannada/media/post_attachments/wp-content/uploads/2025/05/Reeshma-Nanaiah1.jpg)
ಸ್ಯಾಂಡಲ್ವುಡ್ ನಟಿ ರೀಷ್ಮಾ ನಾಣಯ್ಯ ನಿವಾಸದಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಇಂದು ನಟಿ ರೀಷ್ಮಾ ನಾಣಯ್ಯ ಅವರ ಅಕ್ಕ ವಿಷ್ಮಾ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಸಂತನಗರದ ಕೊಡವ ಸಮಾಜದಲ್ಲಿ ಮದುವೆ ಸಮಾ
ಇದನ್ನೂ ಓದಿ: ‘ನನ್ನ ಮಗಳು..’ ಬೇಹುಗಾರಿಕೆ ಆರೋಪ ಹೊತ್ತ ಜ್ಯೋತಿ ಮಲ್ಹೋತ್ರ ಬಗ್ಗೆ ತಂದೆ ಏನಂದ್ರು..?
ವಿಶೇಷ ಏನೆಂದರೆ ರೀಷ್ಮಾ ನಾಣಯ್ಯ ಅಕ್ಕ ಮಾಜಿ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಅವರ ಪುತ್ರ ಅನಿರುದ್ಧ್ ಜೊತೆಗೆ ಮದುವೆಯಾಗಿದ್ದಾರೆ. ಅಕ್ಕನ ಅದ್ಧೂರಿ ಮದುವೆಯಲ್ಲಿ ತಂಗಿ ರೀಷ್ಮಾ ನಾಣಯ್ಯ ಲಕ ಲಕ ಅಂತ ಮಿಂಚಿದ್ದಾರೆ.
ಹಳದಿ ಬಣ್ಣದ ಸೀರೆಯನ್ನು ತೊಟ್ಟು ಕ್ಯೂಟ್ ಆಗಿ ನಗುತ್ತಿದ್ದಾರೆ. ಸದ್ಯ ಅಕ್ಕನ ಮದುವೆ ಸಂಭ್ರಮದಲ್ಲಿ ರೀಷ್ಮಾ ನಾಣಯ್ಯ ಬ್ಯುಸಿಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಕೊಡಗಿ ಕುವರಿಯಾಗಿರೋ ನಟಿ ರೀಷ್ಮಾ ನಾಣಯ್ಯ ಜೋಗಿ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಸಿನಿಮಾ ಮೂಲಕ ರೀಷ್ಮಾ ನಾಣಯ್ಯ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಈ ಸಿನಿಮಾದಲ್ಲಿ ಅದ್ಭುತವಾಗಿ ನಟಿಸುವ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು.
ಸದ್ಯ ಪ್ರೀತಿಯ ಅಕ್ಕನನ್ನು ಭಾಸ್ಕರ್ ರಾವ್ ಪುತ್ರನಿಗೆ ಕೊಟ್ಟು ಮದುವೆ ಮಾಡಿಸಿ ಖುಷಿಪಟ್ಟಿದ್ದಾರೆ. ಭಾರತೀಯ ರಾಜಕಾರಣಿ ಮತ್ತು ಮಾಜಿ ಪೊಲೀಸ್ ಅಧಿಕಾರಿಯಾಗಿದ್ದು, ಅವರು 2 ಆಗಸ್ಟ್ 2019 ರಿಂದ 1 ಆಗಸ್ಟ್ 2020 ರವರೆಗೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ