ನಟಿ ರೋಜಾ ಸೆಲ್ವಮಣಿ ಆಸ್ಪತ್ರೆಗೆ ದಾಖಲು; ಅಂಥದೇನಾಯ್ತ?

author-image
Harshith AS
Updated On
ನಟಿ ರೋಜಾ ಸೆಲ್ವಮಣಿ ಆಸ್ಪತ್ರೆಗೆ ದಾಖಲು; ಅಂಥದೇನಾಯ್ತ?
Advertisment
  • ಆಸ್ಪತ್ರೆ ಸೇರಿದ ಆಂಧ್ರ ಸಚಿವೆ
  • ರೋಜಾ ಸೆಲ್ವಮಣಿಗೆ ಏನಾಯ್ತು?
  • ಕನ್ನಡದಲ್ಲೂ ನಟಿಸಿದ್ದಾರೆ ನಟಿ ರೋಜಾ

ಕನ್ನಡ, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದ ಹಿರಿಯ ನಟಿ, ಆಂಧ್ರ ಪ್ರದೇಶ ರಾಜ್ಯ ಪ್ರವಾಸೋದ್ಯಮ ಸಚಿವೆ ರೋಜಾ ಸೆಲ್ವಮಣಿ ಅವರು ಅಸೌಖ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚೆನ್ನೈನ ಕ್ರಿಮ್ಸ್​ ರಸ್ತೆಯಲ್ಲಿರುವ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

publive-image

ಇತ್ತೀಚೆಗೆ ರೋಜಾ ಅವರಿಗೆ ಕಾಲು ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಒಂದು ವಾರಗಳ ಕಾಲ ಫಿಸಿಯೋಥೆರಪಿ ಮಾಡಲಾಗಿತ್ತು. ಆದರೆ ನೋವು ಕಡಿಮೆಯಾಗಿರಲಿಲ್ಲ. ಬಳಿಕ ಅವರನ್ನು ಚೆನ್ನೈನ ಥೌಸಂಡ್​​ ಲೈಟ್ಸ್​ನಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ರೋಜಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ರೋಜಾ ಅವರು ಕನ್ನಡದ ಅನೇಕ ಸಿನಿಮಾಗಲ್ಲಿ ನಟಿಸಿದ್ದ ನಟಿ. ಮಾತ್ರವಲ್ಲ, ರಾಷ್ಟ್ರೀಯ ಪ್ರಶಸ್ತಿ ವಿಜೇತ ಕೂಡ ಹೌದು. 2000ರಲ್ಲಿ ಖ್ಯಾತ ನಿರ್ದೇಶಕ ಆರ್​ಕೆ ಸೆಲ್ವಮಣಿ ಅವರನ್ನು ವಿವಾಹವಾದರು. ಈ ನಟಿಗೆ ಒಬ್ಬ ಮಗ ಮತ್ತ ಮಗಳು ಇದ್ದಾರೆ. ಸದ್ಯ ರೋಜಾ ಆಂಧ್ರಪ್ರದೇಶದ ರಾಜ್ಯ ಪ್ರವಾಸೋದ್ಯಮ ಸಚಿವೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment