/newsfirstlive-kannada/media/post_attachments/wp-content/uploads/2025/05/ruchi-gujjar-modi-necklace.jpg)
78ನೇ ವಾರ್ಷಿಕ ಕೇನ್ಸ್ ಫಿಲ್ಮ್ ಫೆಸ್ಟಿವಲ್ ಫ್ರಾನ್ಸ್‌ನಲ್ಲಿ ಆಯೋಜಿಸಲಾಗಿದೆ. 2025ರ ಕೇನ್ಸ್ ಫೆಸ್ಟಿವಲ್ ಮೇ 13ರಿಂದ ಮೇ 24ರವರೆಗೆ ನಡೆಯುತ್ತಿದೆ.
2025ರ ಕೇನ್ಸ್‌ನಲ್ಲಿ ಈ ಬಾರಿಯೂ ಹಲವು ಸ್ಟಾರ್ ನಟಿಯರು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುತ್ತಿದ್ದಾರೆ.
ಭಾರತೀಯ ನಟಿ ರುಚಿ ಗುಜ್ಜರ್ ಅವರು ಕೇನ್ಸ್ ರೆಡ್ ಕಾರ್ಪೆಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ಸಲ್ಲಿಸಿದ್ದಾರೆ.
ನಟಿ ರುಚಿ ಗುಜ್ಜರ್ ಅವರ ನೆಕ್ಲೇಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಹಾಕಿದ್ದಾರೆ.
ಪ್ರಧಾನಿ ಮೋದಿ ಅವರ ಫೋಟೋ ನೆಕ್ಲೆಸ್ ಬಗ್ಗೆ ಮಾತನಾಡಿದ ರುಚಿ ಗುಜ್ಜರ್ ಅವರು ಇದು ಬರೀ ಗ್ಲಾಮರ್‌ಗೋಸ್ಕರ ನಾನು ಧರಿಸಿಲ್ಲ. ಹೃದಯಪೂರ್ವಕವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ಸಮರ್ಪಿಸುತ್ತಿದ್ದೇನೆ ಎಂದಿದ್ದಾರೆ.
ರಾಜಸ್ಥಾನದ ಸಾಂಪ್ರದಾಯಿಕ ಲೆಹಂಗಾದಲ್ಲಿ ಕಾಣಿಸಿಕೊಂಡಿರುವ ರುಚಿ ಗುಜ್ಜರ್ ಅವರು ನರೇಂದ್ರ ಮೋದಿ ಅವರು ನಮ್ಮ ದೇಶದ ಸಾಂಸ್ಕೃತಿಕ ಹೆಮ್ಮೆ ಮತ್ತು ಅವರ ನಾಯಕತ್ವಕ್ಕೆ ಗೌರವಪೂರ್ವಕವಾಗಿ ಈ ರೀತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹುಡುಗರ ಹಾರ್ಟ್ಗೆ ಸಂಚಕಾರ.. ಯುವಕರೇ ‘ಬ್ರೋಕನ್ ಹಾರ್ಟ್ ಸಿಂಡ್ರೋಮ್’ ಬಗ್ಗೆ ಇರಲಿ ಎಚ್ಚರ..!
ನಟಿ ರುಚಿ ಗುಜ್ಜರ್ ಅವರು ರೆಡ್ ಕಾರ್ಪೆಟ್‌ನಲ್ಲಿ ಕಾಣಿಸಿಕೊಂಡ ಈ ಫೋಟೋಗಳು ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ