newsfirstkannada.com

ಅಮೀರ್ ಖಾನ್ ಮಗನ ಜೊತೆ ಕಾಣಿಸಿಕೊಂಡ ನಟಿ ಸಾಯಿ ಪಲ್ಲವಿ; ಏನಿದರ ಗುಟ್ಟು?

Share :

Published February 12, 2024 at 9:29pm

    ಜುನೈದ್ ಖಾನ್ ಜೊತೆ ದಿಢೀರ್ ಕಾಣಿಸಿಕೊಂಡ ಸಾಯಿ ಪಲ್ಲವಿ

    ಜಪಾನ್‌ನ ಸ್ನೋ ಫೆಸ್ಟಿವಲ್‌ನಲ್ಲಿ ಕಾಣಿಸಿಕೊಂಡ ಫೋಟೋ ವೈರಲ್‌

    ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಟ್‌ ಅಮೀರ್ ಖಾನ್ ಸಖತ್ ಪ್ಲಾನ್‌!

ಬಹುಭಾಷಾ ನಟಿ ಸಾಯಿ ಪಲ್ಲವಿ ಅವರು ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಟ್‌ ಅಮೀರ್ ಖಾನ್ ಪುತ್ರ ಜುನೈದ್ ಖಾನ್ ಅವರ ಜೊತೆ ಶೂಟಿಂಗ್‌ನಲ್ಲಿ ಭಾಗಿಯಾಗಿರುವ ಫೋಟೋಗಳು ವೈರಲ್ ಆಗಿದೆ. ಅಮೀರ್ ಖಾನ್ ಪುತ್ರ ಜುನೈದ್ ಖಾನ್ ಅವರು ಬಾಲಿವುಡ್‌ಗೆ ಪ್ರವೇಶಿಸುತ್ತಿದ್ದು, ಇನ್ನೂ ಹೆಸರಿಡದ ಚಿತ್ರದ ಶೂಟಿಂಗ್ ಜಪಾನ್‌ನಲ್ಲಿ ನಡೆಯುತ್ತಿದೆ. ಜುನೈದ್ ಖಾನ್ ಅವರ ಮೊದಲ ಸಿನಿಮಾಗೆ ಸಾಯಿ ಪಲ್ಲವಿ ಅವರು ಜೊತೆಯಾಗಿದ್ದು, ಸಪೊರೋ ಸ್ನೋ ಫೆಸ್ಟಿವಲ್‌ನಲ್ಲಿ ಶೂಟಿಂಗ್ ಬರದಿಂದ ಸಾಗಿದೆ.

ಜುನೈದ್ ಖಾನ್ ಹಾಗೂ ಸಾಯಿ ಪಲ್ಲವಿ ಅವರು ಅಭಿನಯಿಸುತ್ತಿರುವ ಚಿತ್ರದ ಶೂಟಿಂಗ್ ಸೈಲೆಂಟ್ ಆಗಿ ಸೆಟ್ಟೇರಿದೆ. ಜುನೈದ್ ಖಾನ್ ಹಾಗೂ ಸಾಯಿ ಪಲ್ಲವಿ ಅವರು ಶೂಟಿಂಗ್‌ನಲ್ಲಿ ಭಾಗಿಯಾದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಗಿದ್ದು ಸಖತ್ ವೈರಲ್ ಆಗಿದೆ.

ಸಾಯಿ ಪಲ್ಲವಿ, ಜುನೈದ್ ಖಾನ್ ಅವರ ಚಿತ್ರವನ್ನು ಅಮೀರ್ ಖಾನ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದ ಮೇಲೆ ಇಡೀ ಬಾಲಿವುಡ್‌ನ ಕಣ್ಣು ಬಿದ್ದಿದ್ದು, ಇದೀಗ ಲೀಕ್ ಆಗಿರೋ ಫೋಟೋಗಳು ಹೊಸ ಭರವಸೆಯನ್ನು ಮೂಡಿಸಿದೆ. ಸದ್ಯ ಶೂಟಿಂಗ್ ಆರಂಭಿಸಿರೋ ಚಿತ್ರತಂಡ ಇದೇ ವರ್ಷ ಸಿನಿಮಾವನ್ನು ಅದ್ಧೂರಿಯಾಗಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮೀರ್ ಖಾನ್ ಮಗನ ಜೊತೆ ಕಾಣಿಸಿಕೊಂಡ ನಟಿ ಸಾಯಿ ಪಲ್ಲವಿ; ಏನಿದರ ಗುಟ್ಟು?

https://newsfirstlive.com/wp-content/uploads/2024/02/Sai-Pallavi.jpg

Load More