/newsfirstlive-kannada/media/post_attachments/wp-content/uploads/2024/08/Samantha_Nag.jpg)
ತೆಲುಗು ಸ್ಟಾರ್ ನಟಿ ಸಮಂತಾ ಮತ್ತು ನಾಗ ಚೈತನ್ಯ ಮದುವೆ ಆಗಿ 4 ವರ್ಷಗಳ ನಂತರ ಡಿವೋರ್ಸ್ ಮಾಡಿಕೊಂಡರು. 2017ರಲ್ಲಿ ಮದುವೆ ಆದ ಈ ಜೋಡಿ 2021ರಲ್ಲಿ ಬೇರೆಯಾಗಲು ನಿರ್ಧರಿಸಿದರು. ಡಿವೋರ್ಸ್ ನಂತರ ನಟಿ ಸಮಂತಾ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದವು. ಆ ಒಂದು ಕಾರಣದಿಂದಲೇ ಸಂಬಂಧ ಮುರಿದು ಬಿದ್ದಿತ್ತು ಎಂದು ನೆಟ್ಟಿಗರು ಆರೋಪ ಮಾಡಿದ್ದರು. ನಾಗ ಚೈತನ್ಯ ಬಳಿ ಸ್ಯಾಮ್ ಬರೋಬ್ಬರಿ 200 ಕೋಟಿ ಜೀವನಾಂಶಕ್ಕೆ ಪಡೆದಿದ್ದರು ಎಂಬ ಮಾತು ಕೇಳಿ ಬಂದಿತ್ತು. ಈ ಬಗ್ಗೆ ನಟಿ ಸಮಂತಾ ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚೆಗೆ ನಡೆದ ಖಾಸಗಿ ಶೋ ಒಂದರಲ್ಲಿ ಭಾಗಿಯಾಗಿದ್ದ ನಟಿ ಸ್ಯಾಮ್ಗೆ ಜೀವನಾಂಶದ ಬಗ್ಗೆ ಕೇಳಲಾಯ್ತು. ಇದಕ್ಕೆ ಖಡಕ್ ಉತ್ತರ ನೀಡಿರೋ ಸಮಂತಾ, ‘ನಾನು 250 ಕೋಟಿ ರೂ ಜೀವನಾಂಶ ತೆಗೆದುಕೊಂಡಿದ್ದೇನೆ. ಹಾಗಾಗಿ ಪ್ರತಿ ದಿನ ಬೆಳಿಗ್ಗೆ ನನ್ನ ಮನೆ ಹೊರಗೆ ಆದಾಯ ತೆರಿಗೆ ಅಧಿಕಾರಿಗಳು ಬರುತ್ತಾರಾ? ಎಂದು ಕಾಯುತ್ತಿದ್ದೇನೆ ಎಂದು ವ್ಯಂಗ್ಯವಾಡಿದ್ರು.
ಸ್ಟಾರ್ ನಟಿ ಸಮಂತಾಗೆ ಡಿವೋರ್ಸ್ ನೀಡಿದ್ದ ನಟ ನಾಗ ಚೈತನ್ಯ 2ನೇ ಮದುವೆಗೆ ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಬಹುಭಾಷಾ ನಟಿ ಶೋಭಿತಾ ಧುಲಿಪಾಲಾ ಅವರೊಂದಿಗೆ ನಾಗ ಚೈತನ್ಯ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಾಗ ಚೈತನ್ಯ ಹಾಗೂ ಶೋಭಿತಾ ಎಂಗೇಜ್ಮೆಂಟ್ ಬೆನ್ನಲ್ಲೇ ನಟಿ ಸಮಂತಾ ಶಾಕಿಂಗ್ ನಿರ್ಧಾರವೊಂದು ತೆಗೆದುಕೊಂಡಿದ್ದಾರಂತೆ. ಈ ನಿರ್ಧಾರದ ಬಗ್ಗೆ ಟಾಲಿವುಡ್ ಅಂಗಳದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
ನಟಿ ಸ್ಯಾಮ್ ಶಾಕಿಂಗ್ ನಿರ್ಧಾರ?
ಕಳೆದ ಕೆಲವು ದಿನಗಳಿಂದ ಸ್ಯಾಮ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮಯೋಸೈಟಿಸ್ ಎಂಬ ಖಾಯಿಲೆಯಿಂದ ಬಳಲುತ್ತಿರೋ ಇವರು ಸಿನಿಮಾದಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದಾರೆ. ಇನ್ನೊಂದು ಕಡೆ ನಾಗ ಚೈತನ್ಯ ಎಂಗೇಜ್ಮೆಂಟ್ ಮಾಡಿಕೊಂಡಿದ್ದು ಸ್ಯಾಮ್ಗೆ ಬೇಸರ ತರಿಸಿದೆ. ಹಾಗಾಗಿ ಲಾಂಗ್ ಬ್ರೇಕ್ ಬಳಿಕ ತೆಲುಗು ಚಿತ್ರರಂಗಕ್ಕೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಡಬೇಕು ಎಂದಿದ್ದ ನಿರ್ಧಾರದಿಂದ ಸ್ಯಾಮ್ ಹಿಂದೆ ಸರಿದಿದ್ದಾರೆ. ಮುಂದಿನ ದಿನಗಳಲ್ಲಿ ತೆಲುಗು ಚಿತ್ರರಂಗದಿಂದಲೇ ದೂರ ಉಳಿಯಬೇಕು ಅನ್ನೋ ನಿರ್ಧಾರಕ್ಕೆ ಸ್ಯಾಮ್ ಬಂದಿದ್ದಾರಂತೆ.
ಇದನ್ನೂ ಓದಿ: ನಾಗ ಚೈತನ್ಯ ಎಂಗೇಜ್ಮೆಂಟ್ನಿಂದ ನೊಂದ ಸಮಂತಾ; ಸ್ಯಾಮ್ ತೆಗೆದುಕೊಂಡ ಶಾಕಿಂಗ್ ನಿರ್ಧಾರವೇನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ