/newsfirstlive-kannada/media/post_attachments/wp-content/uploads/2025/06/samantha.jpg)
ನಟಿ ಸಮಂತಾ ರುತ್ ಪ್ರಭು ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟಿ. ತಮ್ಮ ನಟನೆ ಮತ್ತು ಸೌಂದರ್ಯದಿಂದ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಸದ್ಯ ಭಾರತದಲ್ಲಿ ಸಖತ್ ಸ್ಟಾರ್ ಡಮ್ ಹೊಂದಿರುವ ನಟಿಯಾಗಿದ್ದಾರೆ.
ಇದನ್ನೂ ಓದಿ: ಲವರ್ ಬಾಯ್ ಆಗಿ ಬದಲಾದ ರಕ್ಷಕ್ ಬುಲೆಟ್; ರಮೋಲ ಜೊತೆ ಪ್ರೀತಿಯಲ್ಲಿ ಬಿದ್ದೇ ಬಿಟ್ನಾ..?
ಆದ್ರೆ, ಮುಂಬೈನ ಬೀದಿಯಲ್ಲಿ ನಟಿ ಸಮಂತಾ ಗರಂ ಆಗಿದ್ದಾರೆ. ಹೌದು, ಮುಂಬೈನಲ್ಲಿರೋ ನಟಿ ಸಮಂತಾ ರುತ್ ಪ್ರಭು ಆಗಾಗ ಕ್ಯಾಮೆರಾ ಕಣ್ಣಿಗೆ ಕಾಣಸಿಗುತ್ತಾರೆ. ಹೀಗೆ ನಿನ್ನೆ ಮುಂಬೈನಲ್ಲಿ ಜಿಮ್ನಲ್ಲಿ ವರ್ಕೌಟ್ ಮುಗಿಸಿಕೊಂಡು ಹೊರಗೆ ಬಂದರು. ಆದರೆ ಅವರ ಕಾರು ಇನ್ನೂ ಬಂದಿರಲಿಲ್ಲ. ಹೀಗಾಗಿ ಫೋನಿನಲ್ಲಿ ಮಾತನಾಡುತ್ತಾ ರಸ್ತೆಗೆ ಬಂದ ಸಮಂತಾ ಅವರನ್ನು ನೋಡ ನೋಡುತ್ತಿದ್ದಂತೆ ಪಾಪರಾಜಿಗಳು ಫೋಟೋ ಮತ್ತು ವಿಡಿಯೋ ಮಾಡಲು ಮುಂದಾಗಿದ್ದಾರೆ.
ಇದರಿಂದ ಮುಜುಗರಕ್ಕೆ ಒಳಗಾದ ಸಮಂತಾ ಏಕಾಏಕಿ ಪಾಪರಾಜಿಗಳ ಮೇಲೆ ರೇಗಾಡಿದ್ದಾರೆ. ಮೊದಲು ಬೇಡ ಎಂದಿದ್ದಾರೆ. ಆದ್ರೆ ನಟಿ ಬೇಡ ಅಂತ ಹೇಳಿದ ಮೇಲು ಅವರ ಫೋಟೋ ತೆಗೆಯಲು ಪಾಪರಾಜಿಗಳು ಮುಂದಾಗಿದ್ದಾರೆ. ಆಗ ನೋಡಿ ಸಮಂತಾ ಏಕಾಏಕಿ ಗರಂ ಆಗಿದ್ದಾರೆ. ಇದೇ ಕೋಪದಲ್ಲಿ ದಯವಿಟ್ಟು ಇದನ್ನೆಲ್ಲ ನಿಲ್ಲಿಸಿ ಅಂತ ಕೂಗಾಡಿದ್ದಾರೆ. ಆದರೂ ಸಹ ಅವರ ಮಾತಿಗೆ ಪಾಪರಾಜಿಗಳು ವಿಡಿಯೋ ಮಾಡಿದ್ದಾರೆ.
View this post on Instagram
ಇನ್ನೂ, ಇದೇ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದೇ ವಿಡಿಯೋ ನೋಡಿದ ನೆಟ್ಟಿಗರು, ಪಾಪರಾಜಿಗಳ ಈ ವರ್ತನೆಯನ್ನು ಕಿರುಕುಳ ಅಂತ ಕಾಮೆಂಟ್ಸ್ ಹಾಕಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಅಲ್ಲದೇ ಸೆಲೆಬ್ರಿಟಿಗಳ ಖಾಸಗಿತನಕ್ಕೆ ಗೌರವ ಕೊಡಿ ಅಂತ ಸಿಟ್ಟಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ