ನಾಗ​ ಚೈತನ್ಯ ಎಂಗೇಜ್ಮೆಂಟ್​​ನಿಂದ ನೊಂದ ಸಮಂತಾ; ಸ್ಯಾಮ್​​ ತೆಗೆದುಕೊಂಡ ಶಾಕಿಂಗ್​ ನಿರ್ಧಾರವೇನು..?

author-image
Ganesh Nachikethu
Updated On
ನಾಗ​ ಚೈತನ್ಯ ಎಂಗೇಜ್ಮೆಂಟ್​​ನಿಂದ ನೊಂದ ಸಮಂತಾ; ಸ್ಯಾಮ್​​ ತೆಗೆದುಕೊಂಡ ಶಾಕಿಂಗ್​ ನಿರ್ಧಾರವೇನು..?
Advertisment
  • ಸ್ಟಾರ್​ ನಟಿ ಸಮಂತಾಗೆ ಡಿವೋರ್ಸ್​ ನೀಡಿದ್ದ ನಟ ನಾಗ ಚೈತನ್ಯ!
  • ಇತ್ತೀಚೆಗಷ್ಟೇ ಶೋಭಿತಾ ಧುಲಿಪಾಲಾ ಜತೆ ನಾಗ ಚೈತನ್ಯ ನಿಶ್ಚಿತಾರ್ಥ
  • ಚೈತು ಎಂಗೇಜ್ಮೆಂಟ್​ನಿಂದ ನೊಂದ ಸಮಂತಾ ಶಾಕಿಂಗ್​ ನಿರ್ಧಾರ

ಸ್ಟಾರ್​ ನಟಿ ಸಮಂತಾಗೆ ಡಿವೋರ್ಸ್​ ನೀಡಿದ್ದ ನಟ ನಾಗ ಚೈತನ್ಯ 2ನೇ ಮದುವೆಗೆ ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಬಹುಭಾಷಾ ನಟಿ ಶೋಭಿತಾ ಧುಲಿಪಾಲಾ ಅವರೊಂದಿಗೆ ನಾಗ ಚೈತನ್ಯ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಾಗ ಚೈತನ್ಯ ಹಾಗೂ ಶೋಭಿತಾ ಎಂಗೇಜ್ಮೆಂಟ್​​​​ ಬೆನ್ನಲ್ಲೇ ನಟಿ ಸಮಂತಾ ಶಾಕಿಂಗ್​​ ನಿರ್ಧಾರವೊಂದು ತೆಗೆದುಕೊಂಡಿದ್ದಾರಂತೆ. ಈ ನಿರ್ಧಾರದ ಬಗ್ಗೆ ಟಾಲಿವುಡ್ ಅಂಗಳದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

ಸಮಂತಾ ಈಗ ಪ್ಯಾನ್ ಇಂಡಿಯಾ ಹೀರೋಯಿನ್​​​. ಕೇವಲ ತೆಲುಗು ಮತ್ತು ತಮಿಳು ಮಾತ್ರವಲ್ಲ ಹಿಂದಿಯಲ್ಲೂ ಮಿಂಚುತ್ತಿದ್ದಾರೆ. ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಫುಲ್​ ಬ್ಯುಸಿ ಆಗಿದ್ದಾರೆ. ಇವರು ನಟಿಸಿರೋ ಬಹುನಿರೀಕ್ಷಿತ ವೆಬ್ ಸೀರಿಸ್ 'ಸಿಟಾಡೆಲ್ ಹನಿ ಬನ್ನಿ' ಇನ್ನೇನು ರಿಲೀಸ್ ಆಗಬೇಕಿದೆ. ಇದರ ಮಧ್ಯೆ ಸ್ಯಾಮ್​ ತೆಗೆದುಕೊಂಡ ಖಡಕ್ ನಿರ್ಧಾರ ಟಾಲಿವುಡ್‌ನಲ್ಲಿ ಹಲ್‌ಚಲ್ ಎಬ್ಬಿಸಿದೆ.

publive-image

ನಟಿ ಸ್ಯಾಮ್​ಗೆ ಏನಾಯ್ತು?

ಕಳೆದ ಕೆಲವು ದಿನಗಳಿಂದ ಸ್ಯಾಮ್​ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮಯೋಸೈಟಿಸ್ ಎಂಬ ಖಾಯಿಲೆಯಿಂದ ಬಳಲುತ್ತಿರೋ ಇವರು ಸಿನಿಮಾದಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದಾರೆ. ಇನ್ನೊಂದು ಕಡೆ ನಾಗ ಚೈತನ್ಯ ಎಂಗೇಜ್ಮೆಂಟ್​ ಮಾಡಿಕೊಂಡಿದ್ದು ಸ್ಯಾಮ್​​ಗೆ ಬೇಸರ ತರಿಸಿದೆ. ಹಾಗಾಗಿ ಲಾಂಗ್ ಬ್ರೇಕ್ ಬಳಿಕ ತೆಲುಗು ಚಿತ್ರರಂಗಕ್ಕೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಡಬೇಕು ಎಂದಿದ್ದ ನಿರ್ಧಾರದಿಂದ ಸ್ಯಾಮ್​ ಹಿಂದೆ ಸರಿದಿದ್ದಾರೆ. ಮುಂದಿನ ದಿನಗಳಲ್ಲಿ ತೆಲುಗು ಚಿತ್ರರಂಗದಿಂದಲೇ ದೂರ ಉಳಿಯಬೇಕು ಅನ್ನೋ ನಿರ್ಧಾರಕ್ಕೆ ಸ್ಯಾಮ್​ ಬಂದಿದ್ದಾರಂತೆ.

ಇದನ್ನೂ ಓದಿ:ಸಮಂತಾ ಸಹೋದರಿ ಜೊತೆ 2ನೇ ಮದುವೆ.. ನಾಗಚೈತನ್ಯ ಕೈ ಹಿಡಿದ ಶೋಭಿತಾ ಧೂಳಿಪಾಲ ಯಾರು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment