ಸ್ಯಾಂಡಲ್‌ವುಡ್‌ನಲ್ಲೂ ನಟಿಯರು ಸೇಫ್ ಇಲ್ಲ? ಮೀಟೂಗೆ ಸಂಗೀತಾ ಭಟ್ ಹೊಸ ಟ್ವಿಸ್ಟ್; ಏನಂದ್ರು?

author-image
Bheemappa
Updated On
ಮಾಲಿವುಡ್ ಬೆನ್ನಲ್ಲೇ ಸ್ಯಾಂಡಲ್​ವುಡ್​ಗೂ #MeToo; ದಿಟ್ಟ ಹೆಜ್ಜೆಯಿಟ್ಟ ಫೈರ್, ಇಂದು ಮಹತ್ವದ ಬೆಳವಣಿಗೆ
Advertisment
  • ಸುಮಾರು ವರ್ಷಗಳ ಹಿಂದೆಯೇ ಮೀಟೂ ಕೇಸ್ ಹೊರಗೆ ಬಂದಿತ್ತು
  • ಸರ್ಕಾರ ಜಾರಿಗೆ ತಂದ್ರೆ ಮುಂದಿನ ನಟ, ನಟಿಯರು ಸೇಫ್ ಇರ್ತಾರೆ
  • ಸರ್ಕಾರ ದಯವಿಟ್ಟು ಇದನ್ನು ಮಾಡಿಕೊಡಬೇಕು ಎಂದ ಕನ್ನಡ ನಟಿ

ನೆರೆಯ ರಾಜ್ಯ ಕೇರಳದ ಮಲೆಯಾಳಂ ಚಿತ್ರರಂಗದಲ್ಲಿ ಸದ್ಯ ಮೀಟೂ ಪ್ರಕರಣಗಳು ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿವೆ. ನಟ, ನಿರ್ದೇಶಕ ಸೇರಿದಂತೆ ಸಿನಿಮಾ ರಂಗದ ಇತರ ಕಲಾವಿದರನ್ನು ಲೈಂಗಿಕ ಕಿರುಕುಳದ ಆರೋಪ ತಳುಕು ಹಾಕಿಕೊಳ್ಳುತ್ತಿವೆ. ಮಲೆಯಾಳಂ ಬಳಿಕ ಕನ್ನಡ ಚಲನಚಿತ್ರರಂಗದಲ್ಲೂ ಅಂತಹದೇ ರೀತಿಯ ಕಮಿಟಿ ರಚನೆ ಆಗಬೇಕು ಅನ್ನೋ ಕೂಗು ಕೇಳಿ ಬರುತ್ತಿವೆ. ಕೇರಳದ ಸಿನಿಮಾ ಇಂಡಸ್ಟ್ರಿಯಲ್ಲಿ ಹೇಮಾ ಕಮಿಟಿ ಹೊರಗಡೆ ಬಂದ ಬೆನ್ನಲ್ಲೇ ಸ್ಯಾಂಡಲ್​ವುಡ್​ನ ನಟಿ ಸಂಗೀತಾ ಭಟ್ ಸುದರ್ಶನ್ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಫಿಲಂ ಇಂಡಸ್ಟ್ರಿ ಆ್ಯಂಡ್ ರೈಟ್ಸ್​ ಫಾರ್ ಈಕ್ವಾಲಿಟಿ ವತಿಯಿಂದ ನಟಿ ಸಂಗೀತಾ ಭಟ್ ಮಾತನಾಡಿ, ಸಿನಿಮಾ ನಟರು, ಬರಹಗಾರರು, ಪತ್ರಕರ್ತರು, ಟೆಕ್ನಿಷಿಯನ್ಸ್, ನಿರ್ದೇಶಕರು ಸೇರಿದಂತೆ ಸುಮಾರು ಜನರ ಸಹಿ ಇರುವ ಮನವಿಯನ್ನು ಸಿಎಂ ಸಿದ್ದರಾಮಯ್ಯರಿಗೆ ನೀಡಲಾಗಿದೆ. ಮಲೆಯಾಳಂ ಇಂಡಸ್ಟ್ರಿಯಲ್ಲಿ ಜಸ್ಟೀಸ್ ಹೇಮಾ ಕಮಿಟಿ ರಿಪೋರ್ಟ್​ ಹೊರಗಡೆ ಬಂದಿದೆ. ಇದಕ್ಕಾಗಿಯೇ ಇದನ್ನು ಮಾಡುತ್ತಿಲ್ಲ. ಹಲವು ವರ್ಷಗಳ ಹಿಂದೆಯೇ ಕನ್ನಡ ಸಿನಿ ರಂಗದಲ್ಲಿ ಮೀಟೂ ಬಗ್ಗೆ ಈ ಹಿಂದೆ ಹಲವಾರು ಜನ ಹೇಳಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕನ್ನಡ ಚಿತ್ರರಂಗದ ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಟ.. ಚೇತನ್ ಜೊತೆ ಕೈ ಜೋಡಿಸಿದ ಸುದೀಪ್, ರಮ್ಯಾ!

publive-image

ಇದನ್ನು ತಡೆಗಟ್ಟಬೇಕೆಂದು ಫೈರ್​ ಸಂಸ್ಥೆ ಆಗಿನಿಂದಲೂ ಕೆಲಸ ಮಾಡುತ್ತಿದೆ. ಮೀಟೂ ಮೊದಲು ಪ್ರಭಾವ ಬೀರದಿದ್ದರೂ ಆ ಬಗ್ಗೆ ಅವೇರ್​ನೆಸ್ ಕ್ರಿಯೇಟ್ ಮಾಡಿತ್ತು. ಈಗ ಜಸ್ಟೀಸ್ ಹೇಮಾ ಕಮಿಟಿ ಬಂದ ನಂತರ ನಮಗೂ, ನಮ್ಮ ಇಂಡಸ್ಟ್ರಿ, ನಮ್ಮ ಮಹಿಳೆಯರಿಗೆ ಸೇಫ್ ಎನ್ವಿವರ್​ಮೆಂಟ್ ಕ್ರಿಯೇಟ್ ಆಗಬೇಕು ಎನ್ನೋದು ಉದ್ದೇಶವಾಗಿದೆ. ಕನ್ನಡ ಸಿನಿ ರಂಗದಲ್ಲೂ ಕೂಡ ಸರ್ಕಾರ ಕಮಿಟಿ ಮಾಡಿಕೊಂಟ್ಟರೇ ಎಲ್ಲರಿಗೂ ಸಹಾಯ ಆಗುತ್ತದೆ. ಮುಂದೆ ಬರುವ ನಟ, ನಟಿಯರಿಗೆ ಇದು ಸೇಫ್ ಆಗಲಿದೆ ಎನ್ನುವುದು ಇದರ ಮುಖ್ಯವಾದ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಜೈಲಲ್ಲಿ ದರ್ಶನ್ ಭೇಟಿ ಮಾಡಿದ್ದೇಕೆ? ಪೊಲೀಸರಿಗೆ ಸಿನಿಮಾ ಡೈಲಾಗ್ ಹೊಡೆದ ಚಿಕ್ಕಣ್ಣ; ಆಮೇಲೇನಾಯ್ತು?

ನಮ್ಮ ಇಂಡಸ್ಟ್ರಿಯಲ್ಲಿ ಸುರಕ್ಷತೆ ಬೇಕೆ, ಬೇಕು. ಇದರ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು. ನಮಗೆ ಏನಾದರೂ ಆದರೆ ಯಾವ ರೀತಿ ಹೋಗಿ ದೂರು ಕೊಟಬೇಕು. ಅದನ್ನು ಹೇಗೆ ಮುಂದುವರೆಸಬೇಕು ಎನ್ನುವುದು ಮೊದಲೇ ಎಲ್ಲರಿಗೂ ಹೇಳಿ ಕೊಡಬೇಕು. ಮಹಿಳೆಯರ ಮೇಲೆ ಆಗುವ ದೌರ್ಜನ್ಯವನ್ನು ತಡೆಯಬಹುದು. ನಾವು ಕೊಟ್ಟ ಮನವಿ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment