newsfirstkannada.com

ಸೈಬರ್ ಕ್ರೈಮ್ಸ್‌ ಕಾನ್​​ಕ್ಲೇವ್‌ನಿಂದ ತುಂಬಾ ವಿಷಯ ಗೊತ್ತಾಯ್ತು.. ನ್ಯೂಸ್‌ ಫಸ್ಟ್‌ಗೆ ನಟ ಸಪ್ತಮಿ ಗೌಡ ಬಿಗ್‌ ಥ್ಯಾಂಕ್ಸ್‌

Share :

Published February 29, 2024 at 7:59pm

    ನಮ್ಮ ತಂದೆ ಪೊಲೀಸ್​ ಆಗಿರೋದ್ರಿಂದ ನನ್ನ ಡೀಪ್ ಫೇಕ್ ಮಾಡಿಲ್ಲ

    ಪಾಸ್‌ವರ್ಡ್‌ಗಳನ್ನ ಸುಲಭವಾದ ರೀತಿಯಲ್ಲಿ ಹಾಕೋದು ದೊಡ್ಡ ತಪ್ಪು

    ಸೈಬರ್‌ ಕ್ರೈಮ್ಸ್ ಕಾನ್‌ಕ್ಲೇವ್‌ನಲ್ಲಿ ಭಾಗಿಯಾದ ನಟಿ ಸಪ್ತಮಿ ಗೌಡ

ಬೆಂಗಳೂರು: ನ್ಯೂಸ್ ಫಸ್ಟ್ ಚಾನೆಲ್ ಆಯೋಜಿಸಿದ್ದ ಸೈಬರ್ ಕ್ರೈಮ್ಸ್ ಕಾನ್‌ಕ್ಲೇವ್‌ನಿಂದ ನನಗೆ ತುಂಬಾ ವಿಷಯ ಗೊತ್ತಾಯಿತು. ಡೀಪ್ ಫೇಕ್‌ ಹಾಗೂ ಸೈಬರ್ ವಂಚನೆಯಿಂದ ನಾವು ಹೇಗೆ ಎಚ್ಚರದಿಂದ ಇರಬೇಕು ಅನ್ನೋದನ್ನ ಕಲಿತುಕೊಂಡೆ ಎಂದು ಸ್ಯಾಂಡಲ್‌ವುಡ್ ನಟಿ ಸಪ್ತಮಿ ಗೌಡ ಅವರು ಹೇಳಿದ್ದಾರೆ.

ನ್ಯೂಸ್ ಫಸ್ಟ್ ಸೈಬರ್‌ ಕ್ರೈಮ್ಸ್ ಕಾನ್‌ಕ್ಲೇವ್‌ನಲ್ಲಿ ಭಾಗಿಯಾಗಿ ಮಾತನಾಡಿದ ಸಪ್ತಮಿ ಗೌಡ, ನಮಗೆ ಮೋಸ ಆಗಿದ್ದಲ್ಲಿ ಮೊದಲು ರಿಪೋರ್ಟ್‌ ಮಾಡಬೇಕು. ಆಮೇಲೆ ನಮ್ಮ ತಂದೆ, ತಾಯಿಗಳಿಗೂ ತಿಳಿಸಿ ಹೇಳಬೇಕು. ಮಕ್ಕಳಿಗೆ ಆಗುವ ಮೋಸದ ಬಗ್ಗೆ ಪೋಷಕರಿಗೂ ದೊಡ್ಡ ಚಿಂತೆ ಆಗಿರುತ್ತೆ. ಹೀಗಾಗಿ ಪೋಷಕರಿಗೆ ಸೈಬರ್ ಕ್ರಿಮಿನಲ್‌ಗಳ ಬಗ್ಗೆ ಮೊದಲು ಹೇಳಬೇಕು. ಇದರಲ್ಲಿ ಪೋಷಕರದ್ದೂ ಏನು ತಪ್ಪಿಲ್ಲ. ಎಲ್ಲೂ ಕೂತು ಬೇರೆ ಹೆಸರಲ್ಲಿ ಮೋಸ ಮಾಡೋರು ಇರ್ತಾರೆ.

ನ್ಯೂಸ್‌ ಫಸ್ಟ್ ಸೈಬರ್ ಕ್ರೈಮ್ಸ್‌ ಕಾನ್‌ಕ್ಲೇವ್‌ನಿಂದ ನನಗೆ ತುಂಬಾ ವಿಷಯ ಗೊತ್ತಾಯಿತು. ಡಾರ್ಕ್ ವೆಬ್‌ ಸೇರಿದಂತೆ ನಾವು ಹೇಗೆ ಎಚ್ಚರದಿಂದ ಇರಬೇಕು ಅನ್ನೋದನ್ನ ಕಲಿತುಕೊಂಡೆ. ಇವತ್ತಿನ ದಿನದಲ್ಲಿ ಪಾಸ್‌ವರ್ಡ್‌ ಅನ್ನೋದು ಎಷ್ಟು ಮುಖ್ಯ ಗೊತ್ತಾ? ಸಾಮಾನ್ಯವಾಗಿ ನಾವು ಪಾಸ್‌ವರ್ಡ್‌ಗಳನ್ನ ನಮಗೆ ಸುಲಭವಾದ ರೀತಿಯಲ್ಲಿ ಹಾಕುತ್ತೇವೆ. ಅದು ಅವರಿಗೆ ಸಿಕ್ಕ ಕೂಡಲೇ ನಮ್ಮ ವೈಯಕ್ತಿಕ ಮಾಹಿತಿಗಳೆಲ್ಲಾ ಅವರಿಗೆ ಗೊತ್ತಾಗುತ್ತೆ. ನಾವು ಎಷ್ಟು ವರ್ಷದಿಂದ ಕಷ್ಟಪಟ್ಟು ದುಡಿದ ದುಡ್ಡು ಎಲ್ಲಾ ಸೈಬರ್ ವಂಚಕರಗೆ ಹೋಗಿ ಬಿಡುತ್ತೆ. ಈ ಮೋಸದಿಂದ ಪಾರಾಗಲು ಯಾರಾದರೂ ನಮಗೆ ಹೇಳಿ ಕೊಡಬೇಕು. ಹೀಗಾಗಿ ನ್ಯೂಸ್‌ ಫಸ್ಟ್‌ಗೆ ನಾನು ಧನ್ಯವಾದ ತಿಳಿಸುತ್ತೇನೆ ಎಂದು ನಟಿ ಸಪ್ತಮಿ ಗೌಡ ಹೇಳಿದ್ದಾರೆ.

ಇನ್ನು ಇತ್ತೀಚೆಗೆ ಹೆಚ್ಚಾಗುತ್ತಿರುವ ಡೀಪ್ ಫೇಕ್‌ ವಿಡಿಯೋಸ್‌ ನನ್ನ ವಿಚಾರದಲ್ಲಿ ಆಗಿಲ್ಲ. ನಮ್ಮ ತಂದೆ ಪೊಲೀಸ್​ ಆಗಿರೋದ್ರಿಂದ ಆ ಘಟನೆ ನಡೆದಿಲ್ಲ. ಫೋಟೋಗಳಲ್ಲಿ ಬದಲಾವಣೆ ಆಗಿರೋದು ಅನುಭವಕ್ಕೆ ಬಂದಿದೆ. ಡೀಪ್ ಫೇಕ್‌ ವಿಡಿಯೋಗಳು ನನ್ನ ಸಿನಿಮಾ ಸ್ನೇಹಿತರಿಗೆ ಆಗಿರೋದನ್ನ ನೋಡಿದ್ದೇನೆ. ಡೀಪ್ ಫೇಕ್‌ ನೋಡೋದಕ್ಕೆ ಒರಿಜಿನಲ್ ತರಹನೇ ಕಾಣಿಸುತ್ತೆ. ಅಷ್ಟು ನೈಜವಾಗಿ ಇರುತ್ತೆ. ಇದನ್ನು ತಡೆಗಟ್ಟಬೇಕು ಎಂದು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೈಬರ್ ಕ್ರೈಮ್ಸ್‌ ಕಾನ್​​ಕ್ಲೇವ್‌ನಿಂದ ತುಂಬಾ ವಿಷಯ ಗೊತ್ತಾಯ್ತು.. ನ್ಯೂಸ್‌ ಫಸ್ಟ್‌ಗೆ ನಟ ಸಪ್ತಮಿ ಗೌಡ ಬಿಗ್‌ ಥ್ಯಾಂಕ್ಸ್‌

https://newsfirstlive.com/wp-content/uploads/2024/02/Saptami-Gowda-Cyber-Crimes.jpg

Load More