ಫ್ಯಾನ್ಸ್​ಗೆ ಶಾಕ್​ ಕೊಟ್ಟ ಬಿಗ್​ಬಾಸ್​ ಖ್ಯಾತಿಯ ಶೋಭಾ ಶೆಟ್ಟಿ.. ದಿಢೀರ್​ ಈ ನಿರ್ಧಾರವೇಕೆ?

author-image
Veena Gangani
Updated On
ಫ್ಯಾನ್ಸ್​ಗೆ ಶಾಕ್​ ಕೊಟ್ಟ ಬಿಗ್​ಬಾಸ್​ ಖ್ಯಾತಿಯ ಶೋಭಾ ಶೆಟ್ಟಿ.. ದಿಢೀರ್​ ಈ ನಿರ್ಧಾರವೇಕೆ?
Advertisment
  • ಏಕಾಏಕಿ ಫ್ಯಾನ್ಸ್​ಗೆ ಶಾಕ್​ ಕೊಟ್ಟ ಕನ್ನಡದ ನಟಿ ಶೋಭಾ ಶೆಟ್ಟಿ
  • ಸೋಷಿಯಲ್​ ಮೀಡಿಯಾದಲ್ಲಿ ಌಕ್ಟೀವ್​ ಆಗಿದ್ದ ಶೋಭಾ ಶೆಟ್ಟಿ
  • ಬಿಗ್​ಬಾಸ್​ ಬಳಿಕ ‘ಬಾಯ್ಸ್ vs ಗರ್ಲ್ಸ್’ ಕಾರ್ಯಕ್ರಮ ನಟಿ ಭಾಗಿ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್​ 11ಕ್ಕೆ ರಾಕ್​ ಆಗಿ ಎಂಟ್ರಿ ಕೊಟ್ಟಿದ್ದ ಶೋಭಾ ಶೆಟ್ಟಿ ಅಭಿಮಾನಿಗೆ ಶಾಕ್​ ಕೊಟ್ಟಿದ್ದಾರೆ. ಈ ಹಿಂದೆ ಬಿಗ್​ಬಾಸ್​ ಸೀಸನ್ 11ಕ್ಕೆ ಖಡಕ್​ ಆಗಿ ಎಂಟ್ರಿ ಕೊಟ್ಟಿದ್ದ ನಟಿ ದಿಢೀರ್ ಅಂತ ಆಚೆ ಬಂದಿದ್ದರು. ಕಿಚ್ಚ ಸುದೀಪ್​ ಅವರ ಮುಂದೆ ನನಗೆ ಇಲ್ಲಿ ಇರೋದಕ್ಕೆ ಆಗುತ್ತಿಲ್ಲ ಸರ್​ ದಯಮಾಡಿ ನನಗೆ ಆಚೆ ಕಳುಹಿಸಿ ಕೊಡಿ ಅಂತ ಬಿಕ್ಕಿ ಬಿಕ್ಕಿ ಅತ್ತಿದ್ದರು.

ಇದನ್ನೂ ಓದಿ:ಮದುವೆಗೆ ಹುಡುಗಿನ ನೋಡಿದ್ವಿ.. RCB ಅಂತ ಬೆಂಗಳೂರಿಗೆ ಹೋಗಿದ್ದು ಗೊತ್ತಿಲ್ಲ- ಮಗನಿಗಾಗಿ ತಾಯಿಯ ಆಕ್ರಂದನ

ಆದ್ರೆ ಇದೀಗ ನಟಿ ಶೋಭಾ ಶೆಟ್ಟಿ ಮತ್ತೊಂದು ನಿರ್ಧಾರಕ್ಕೆ ಬಂದಿದ್ದಾರೆ. ಹೌದು, ಶೋಭಾ ಶೆಟ್ಟಿ, ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ವೀಕ್ಷಕರ ಗಮನ ಸೆಳೆದಿದ್ದರು. ಕನ್ನಡ ಸೀರಿಯಲ್​ನಲ್ಲಿ ಮಿಂಚಿದ್ದ ಶೋಭಾ ಅವರು ತೆಲುಗಿನ ಸೀರಿಯಲ್​ನಲ್ಲಿ ನಟಿಸಿ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.

ಅಲ್ಲದೇ ಬಿಗ್​​ಬಾಸ್ ಸೀಸನ್ 7 ತೆಲುಗಿನಲ್ಲಿ ಸ್ಪರ್ಧಿಯಾಗಿ ಇನ್ನೂ ಹೆಚ್ಚು ಫ್ಯಾನ್ಸ್​ಗಳ ಮನಸ್ಸನ್ನು ಗೆದ್ದುಕೊಂಡಿದ್ದಾರೆ. ಕನ್ನಡ ಬಿಗ್​ಬಾಸ್​ ಬಳಿಕ ‘ಬಾಯ್ಸ್ vs ಗರ್ಲ್ಸ್’ ಕಾರ್ಯಕ್ರಮ ಭಾಗವಹಿಸಿದರು.

ಆದ್ರೆ ಇದೀಗ ದಿಢೀರ್ ಅಂತ ಸಾಮಾಜಿಕ ಜಾಲತಾಣಗಳಿಂದ ವಿರಾಮ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಖುದ್ದು ನಟಿ ಶೋಭಾ ಶೆಟ್ಟಿ ಅವರೇ ತಮ್ಮ ಇನ್​ಸ್ಟಾಗ್ರಾಮ್​​ನಲ್ಲಿ ಪೋಸ್ಟ್​ ಶೇರ್ ಮಾಡಿಕೊಂಡಿದ್ದಾರೆ. ‘ನಾನು ಕೆಲವು ದಿನಗಳವರೆಗೆ ಸಾಮಾಜಿಕ ಜಾಲತಾಣದಿಂದ ದೂರವಿರುತ್ತೇನೆ’ ಅಂತ ಪೋಸ್ಟ್​ ಶೇರ್ ಮಾಡಿ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment