/newsfirstlive-kannada/media/post_attachments/wp-content/uploads/2025/06/Shraddha-Rama-Srinath8.jpg)
‘ಯು ಟರ್ನ್’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರಂಗಭೂಮಿ ಕಲಾವಿದೆ ಶ್ರದ್ಧಾ ಶ್ರೀನಾಥ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ.
ಇದನ್ನೂ ಓದಿ:ಬಿಗ್ಬಾಸ್ಗೆ ಹೋಗಲು ಭರ್ಜರಿ ಆಫರ್.. ಈ ಚಾನ್ಸ್ ನೀವು ಮಿಸ್ ಮಾಡ್ಕೋಬೇಡಿ..!
ಹೌದು, ಯು ಟರ್ನ್, ಆಪರೇಷನ್ ಅಲಮೈಲಮ್ಮ, ಡಿಯರ್ ವಿಕ್ರಮ್ ಸಿನಿಮಾದ ಮೂಲಕ ಸಖತ್ ಫೇಮಸ್ ಆಗಿರೋ ನಟಿ ಶ್ರದ್ಧಾ ಶ್ರೀನಾಥ್ ಸದ್ಯ ಜಾಲಿ ಮೂಡ್ನಲ್ಲಿದ್ದಾರೆ.
ಕನ್ನಡ ಸಿನಿಮಾದಲ್ಲಿ ನಟಿಸಿದ ನಂತರ ಪರಭಾಷೆಯಿಂದಲೂ ಸಾಕಷ್ಟು ಅವಕಾಶಗಳು ಹರಿದುಬಂದವು. ಡಿಯರ್ ವಿಕ್ರಮ್, ರುಸ್ತಮ್, ದಿ ವಿಲನ್, ಉರ್ವಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿ ಸಕ್ರಿಯವಾಗಿದ್ದಾರೆ.
ಸದ್ಯ ನಟಿ ಮಾಲ್ಡೀವ್ಸ್ ಕಡೆ ಮೂಖ ಮಾಡಿದ್ದಾರೆ. ಮಾಲ್ಡೀವ್ಸ್ನಲ್ಲಿ ಕಾಲ ಕಳೆಯುತ್ತಿರೋ ನಟಿ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಫೋಟೋಗಳನ್ನು ಶೇರ್ ಮಾಡಿಕೊಂಡು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.
ನಟಿ ಇದೇ ಮೊದಲ ಬಾರಿಗೆ ಸಖತ್ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮಾಲ್ಡೀವ್ಸ್ ಪ್ರವಾಸದ ಫೋಟೋಗಳ ಜೊತೆಗೆ 'ಅದು ಕನಸಾಗಿರಲಿಲ್ಲ' ಎಂದು ಬರೆದುಕೊಂಡಿದ್ದಾರೆ. ಅದು ಏನೆಂದು ನಟಿ ರಿವೀಲ್ ಮಾಡಿಲ್ಲ.
ನಟಿ ಸಖತ್ ಬೋಲ್ಡ್ ಲುಕ್‌ನಲ್ಲಿ ಫೋಟೋಗೆ ಪೋಸ್ ಕೊಟ್ಟು ಇನ್ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಇದೇ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
View this post on Instagram
ಸದ್ಯ ನಟಿ ತಮಿಳು ಮತ್ತು ತೆಲುಗಿನಲ್ಲಿ ಹೆಚ್ಚೆಚ್ಚು ಸಿನಿಮಾಗಳನ್ನು ಮಾಡುತ್ತಿದ್ದಾರೆ. 2022ರಲ್ಲಿ ತೆರೆಕಂಡಿದ್ದ 'ಡಿಯರ್ ವಿಕ್ರಮ್' ಸಿನಿಮಾ ಬಳಿಕ ನಟಿ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ