/newsfirstlive-kannada/media/post_attachments/wp-content/uploads/2025/07/actress-shravya.jpg)
ಬೆಂಗಳೂರು: ನಿರ್ದೇಶಕ ಸಿಂಪಲ್ ಸುನಿ ಅವರ ಶೂಟಿಂಗ್​ ಸೆಟ್​​​ನಲ್ಲಿ ನಿನ್ನೆ ಅನಾಹುತವೊಂದು ನಡೆದಿತ್ತು. ಮೋಡ ಕವಿದ ವಾತಾವರಣ ಚಿತ್ರೀಕರಣದ ವೇಳೆ ಹೀರೋಯಿನ್ ಶ್ರಾವ್ಯ ರಾವ್ ಆಯತಪ್ಪಿ ನೆಲಕ್ಕೆ ಬಿದ್ದಿದ್ದಾರೆ. ಅದೃಷ್ಟವಶಾತ್ ನಟಿಗೆ ಗಂಭೀರ ಗಾಯಗಳಾಗಿಲ್ಲ. ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ಗಗನಾಳ ಸಾಧನೆ ಬಗ್ಗೆ ಮನಸಾರೆ ಹಾಡಿ ಹೊಗಳಿದ ಸ್ಟಾರ್​.. ರಮೇಶ್ ಅರವಿಂದ್ ಹೇಳಿದ್ದೇನು..?
/newsfirstlive-kannada/media/post_attachments/wp-content/uploads/2025/07/Shravya-Rao1.jpg)
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಸಿಂಪಲ್ ಸುನಿ, ತಮ್ಮ ಹೊಸ ಚಿತ್ರದ ಶೂಟಿಂಗ್ ಮಾಡುತ್ತಿದ್ದರು. ಅಂತೆಯೇ ಮೋಡ ಕವಿದ ವಾತಾವರಣ ಸಿನಿಮಾದ ಹಾಡೊಂದರ ಚಿತ್ರೀಕರಣ ನಡೆಯುತ್ತಿತ್ತು. ಹೀಗಾಗಿ ರೋಪ್ ಮೂಲಕ ನಟ ಹಾಗೂ ನಟಿ ನೇತಾಡುತ್ತಿದ್ದರು. ಆಗ ನಟಿ ಶ್ರಾವ್ಯ ರಾವ್ ಆಕಸ್ಮಿಕವಾಗಿ ನೆಲಕ್ಕೆ ಬಿದ್ದಿದ್ದಾರೆ.
/newsfirstlive-kannada/media/post_attachments/wp-content/uploads/2025/07/actress-shravya1.jpg)
ಇನ್ನೂ, ಈ ಘಟನೆ ಬಳಿಕ ನಟಿ ಶ್ರಾವ್ಯ ನ್ಯೂಸ್ ಫಸ್ಟ್​ ಜೊತೆ ಮಾತನಾಡಿದ್ದಾರೆ. ಸಿನಿಮಾದ ಹಾಡಿನ ಚಿತ್ರೀಕರಣಕ್ಕೆ ಸಾಕಷ್ಟು ಪ್ರಾಕ್ಟೀಸ್ ಮಾಡಿದ್ವಿ. ಪ್ರಾಕ್ಟೀಸ್ ಟೈಂನಲ್ಲಿ ಯಾವುದೇ ತೊಂದರೆ ಆಗಿರಲಿಲ್ಲ. ಆದ್ರೆ ಬೈ ಮಿಸ್ ಆಗಿ ಘಟನೆ ಆಯ್ತು. ಕಾಲು ಉಳುಕಿದ್ದು, ಚಿಕಿತ್ಸೆ ಪಡೆಯುತ್ತಿದ್ದೇನೆ. ಸದ್ಯ ಯಾವುದೇ ಗಂಭೀರ ಗಾಯ ಆಗಿಲ್ಲ ಎಂದು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us