/newsfirstlive-kannada/media/post_attachments/wp-content/uploads/2025/06/laxmi-nivasa11.jpg)
ಕಿರುತೆರೆಯಲ್ಲಿ ಇತ್ತೀಚೆಗೆ ಲಾಂಚ್ ಆದ ಧಾರಾವಾಹಿಗಳಲ್ಲಿ ಲಕ್ಷ್ಮೀ ನಿವಾಸ ಕೂಡ ಒಂದು. ಬಹುದೊಡ್ಡ ತಾರಗಣ ಹೊಂದಿರೋ ಈ ಧಾರಾವಾಹಿಯ ವೀಕ್ಷಕರ ನೆಚ್ಚಿನ ಸೀರಿಯಲ್ನಲ್ಲಿ ಒಂದಾಗಿದೆ.
ಇದನ್ನೂ ಓದಿ:ಕನ್ನಡ ಕೋಗಿಲೆ ಸಿಂಗರ್ ಅಖಿಲಾ ಪಜಿಮಣ್ಣು ದಾಂಪತ್ಯದಲ್ಲಿ ಬಿರುಕು.. ಡಿವೋರ್ಸ್ಗೆ ಅರ್ಜಿ
ಮೊನ್ನೆಯಷ್ಟೇ ಲಕ್ಷ್ಮೀ ನಿವಾಸ ಸೀರಿಯಲ್‌ನಿಂದ ತನು ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಯುಕ್ತಾ ಅವರು ಹೊರಬಂದಿದ್ದರು. ಇದೀಗ ಮತ್ತೊಂದು ಸ್ಟಾರ್ ನಟಿ ಲಕ್ಷ್ಮೀ ನಿವಾಸ ಸೀರಿಯಲ್‌ನಿಂದ ಆಚೆ ಬಂದು ವೀಕ್ಷಕರಿಗೆ ಶಾಕ್ ಕೊಟ್ಟಿದ್ದಾರೆ.
ಹೌದು, ಲಕ್ಷ್ಮೀ ನಿವಾಸ ಧಾರಾವಾಹಿ ಶುರುವಾದಾಗಿನಿಂದಲೂ ಲಕ್ಷ್ಮೀ ಪಾತ್ರದಲ್ಲಿ ಅಭಿನಯಿಸುತ್ತಿದ್ದ ನಟಿ ಶ್ವೇತಾ ಅವರು ಸೀರಿಯಲ್‌ನಿಂದ ಹೊರಗಡೆ ಬಂದಿದ್ದಾರೆ. ತಾಯಿಯ ಅನಾರೋಗ್ಯ ಹಾಗೂ ವೈಯಕ್ತಿಕ ಕಾರಣಕ್ಕೆ ಅವರು ಧಾರಾವಾಹಿಯಿಂದ ಹೊರಗಡೆ ಬಂದಿದ್ದಾರೆ. ಹೀಗಾಗಿ ಇವರ ಪಾತ್ರಕ್ಕೆ ಹೊಸ ನಟಿ ಎಂಟ್ರಿ ಕೊಟ್ಟಿದ್ದಾರೆ. ಅವರು ಕೂಡ ಕನ್ನಡದ ಅನೇಕ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಹೆಸರು ಮಾಧುರಿ. ಸದ್ಯ ಲಕ್ಷ್ಮೀ ನಿವಾಸದ ಲಕ್ಷ್ಮೀ ಪ್ರಾತದಲ್ಲಿ ನಟಿಸುತ್ತಿದ್ದಾರೆ.
View this post on Instagram
ಇನ್ನೂ ಸೀರಿಯಲ್‌ನಿಂದ ಆಚೆ ಬಂದ ನಟಿ ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. ವೈಯಕ್ತಿಕ ಕಾರಣಗಳಿಂದ ಮತ್ತು ನನ್ನ ತಾಯಿಯ ಆರೋಗ್ಯ ಸಮಸ್ಯೆಯಿಂದಾಗಿ ಲಕ್ಷ್ಮಿ ನಿವಾಸದಿಂದ ವಿರಾಮ ತೆಗೆದುಕೊಳ್ಳುತ್ತಿದ್ದೇನೆ. ಕರ್ನಾಟಕವು ತುಂಬಾ ದಯೆಯಿಂದ ವರ್ತಿಸಿದ್ದಕ್ಕಾಗಿ ಮತ್ತು ನನ್ನನ್ನು ಸಂಪೂರ್ಣವಾಗಿ ಸ್ವೀಕರಿಸಿದ್ದಕ್ಕಾಗಿ ಧನ್ಯವಾದಗಳು. ಸೆಟ್‌ಗಳಲ್ಲಿ ಕೆಲವರನ್ನು ಮಿಸ್ ಮಾಡಿಕೊಳ್ಳುತ್ತೇನೆ. ಮತ್ತು ನನ್ನನ್ನು ಮತ್ತೆ ಕನ್ನಡ ಪ್ರೇಕ್ಷಕರಿಗೆ ಪರಿಚಯಿಸಿದ್ದಕ್ಕಾಗಿ ಜೀ ಕನ್ನಡ ಅವರಿಗೆ ತುಂಬಾ ಧನ್ಯವಾದಗಳು, ನೀವು ಅದ್ಭುತರು. ಶೀಘ್ರದಲ್ಲೇ ನಿಮ್ಮೆಲ್ಲರನ್ನೂ ಭೇಟಿಯಾಗುತ್ತೇವೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ