/newsfirstlive-kannada/media/post_attachments/wp-content/uploads/2025/07/shwtha.jpg)
ಕನ್ನಡ ಕಿರುತೆರೆಯಲ್ಲಿ ಇವರು ರಾಧಾ ಮಿಸ್​ ಅಂತಲೇ ಫೇಮಸ್​ ಆದವರು. ಅಭಿಮಾನಿಗಳು ಇವರನ್ನು ಈಗಲೂ ಮಿಸ್​.. ಮಿಸ್.. ಅಂತಲೇ ಕರೆಯುತ್ತಾರೆ. ​ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಫೇಮಸ್​ ಧಾರಾವಾಹಿ 'ರಾಧಾರಮಣ' ದಲ್ಲಿ ರಾಧಾ ಮಿಸ್ ಪಾತ್ರದಲ್ಲಿ ಕಾಣಿಸಿಕೊಂಡವರೇ ನಟಿ ಶ್ವೇತಾ ಪ್ರಸಾದ್.
ಇದನ್ನೂ ಓದಿ: ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ ಅಮಿತ್ ಶಾ -ಮುಂದೆ ಏನು ಮಾಡ್ತಾರಂತೆ ಗೊತ್ತಾ..?
/newsfirstlive-kannada/media/post_attachments/wp-content/uploads/2025/07/shwtha1.jpg)
ಮೊದಲು ಮರಾಠಿ ಧಾರಾವಾಹಿಯಲ್ಲಿ ರಿಮೇಕ್ ಆಗಿ ಪ್ರಸಾರ ಆಗಿದ್ದ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ನಟಿ ಶ್ವೇತಾ ಪ್ರಸಾದ್ ನಟನೆಗೆ ಕಾಲಿಟ್ಟರು. ತಮ್ಮ ಅಭಿನಯದ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ನೆಚ್ಚಿನ ನಟಿಯಾಗಿದ್ದರು. ಇದಾದ ಬಳಿಕ ರಾಧಾ ರಮಣ ಧಾರಾವಾಹಿ ಮೂಲಕ ಇನ್ನಷ್ಟು ಖ್ಯಾತಿ ಗಳಿಸಿದರು.
View this post on Instagram
ಆಗಾಗ ನಟಿ ಶ್ವೇತಾ ಪ್ರಸಾದ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ಅಭಿಮಾನಿಗಳಿಗೆ ಸರ್​ಪ್ರೈಸ್​ ಕೊಡುತ್ತಾ ಇರುತ್ತಾರೆ. ಜೊತೆಗೆ ಸೋಷಿಯಲ್​ ಮೀಡಿಯಾ ಸಿಕ್ಕಾಪಟ್ಟೆ ಌಕ್ಟೀವ್​ ಆಗಿದ್ದಾರೆ. ಇದೀಗ ನಟಿ ಶ್ವೇತಾ ಪ್ರಸಾದ್ ಹಾಟ್​ ಅವತಾರ ತಾಳಿದ್ದಾರೆ. ನಟಿ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅದೇ ವಿಡಿಯೋದಲ್ಲಿ ಬ್ಲಾಕ್​ ಟು ಬ್ಲಾಕ್​ ಲುಕ್​ನಲ್ಲಿ ನಟಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದೇ ವಿಡಿಯೋ ಸಕ್ಕಾಪಟ್ಟೆ ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us