/newsfirstlive-kannada/media/post_attachments/wp-content/uploads/2024/08/sonal1-1.jpg)
ಇಂದು ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೆಸ್​ನಲ್ಲಿ ಸ್ಟಾರ್​ ಡೈರೆಕ್ಟರ್​​ ತರುಣ್ ಕಿಶೋರ್ ಸುಧೀರ್ ಹಾಗೂ ನಟಿ ಸೋನಲ್ ಮೊಂತೆರೊ ಮದುವೆ ನಡೆದಿದೆ. ಗುರು ಹಿರಿಯರು, ಸ್ನೇಹಿತರು, ಹಾಗೂ ಬಂಧು ಮಿತ್ರರ ಸಮ್ಮುಖದಲ್ಲಿ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮೊಂತೆರೊ ಮದುವೆಯಾಗಿದ್ದಾರೆ.
/newsfirstlive-kannada/media/post_attachments/wp-content/uploads/2024/08/sona.jpg)
ನಿನ್ನೆ ಸ್ಟಾರ್ ಜೋಡಿದ ಆರತಕ್ಷತೆ ಸಮಾರಂಭಕ್ಕೆ ಸಿನಿಮಾ ತಾರೆಯರು, ರಾಜಕೀಯ ಗಣ್ಯರು ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ್ದರು. ಇಂದು ಕೂಡ ಸ್ಯಾಂಡಲ್​ವುಡ್​ ಸ್ಟಾರ್​ ನಟ ನಟಿಯರು ತರುಣ್ ಕಿಶೋರ್ ಸುಧೀರ್ ಹಾಗೂ ನಟಿ ಸೋನಲ್ ಮೊಂತೆರೊ ಮದುವೆಯಲ್ಲಿ ಕಾಣಿಸಿಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2024/08/tharun-sudhir4.jpg)
ವಿನೋದ್​ ರಾಜ್​, ನಟ ಗಣೇಶ್​, ಪ್ರೇಮ್​, ನಟಿ ಶ್ರುತಿ, ನಟ ಶರಣ್​, ನಿಶ್ವಿಕಾ ನಾಯ್ಡು, ನಟ ಮಾಳವಿಕ ಅವಿನಾಶ್ ದಂಪತಿ, ತೆಲುಗು ಸ್ಟಾರ್​ ನಟ ಜಗಪತಿ ಬಾಬು, ಗಾಯಕ ವಿಜಯ್​ ಪ್ರಕಾಶ್​, ನಟಿ ತಾರಾ, ನಟಿ ಮೇಘನಾ ಗಾಂವ್ಕರ್, ನಟಿ ಕಾರುಣ್ಯ ರಾಮ್, ಸಂಜನಾ ಗಲ್ರಾನಿ, ಆಶಿಕಾ ರಂಗನಾಥ್, ಸುಧಾರಾಣಿ, ವಿ ನಾಗೇಂದ್ರ ಪ್ರಸಾದ್, ನಟ ಬಾಲಾಜಿ ವೀರಸ್ವಾಮಿ ಬಂದಿದ್ದಾರೆ.
/newsfirstlive-kannada/media/post_attachments/wp-content/uploads/2024/08/tharun-sudhir1.jpg)
ಬಿಗ್​ಬಾಸ್​ ಸ್ಪರ್ಧಿ ತನಿಷಾ ಕುಪ್ಪಂಡ, ನಟ ನಿರಂಜನ್ ದೇಶಪಾಂಡೆ ದಂಪತಿ, ಜೊತೆ ಜೊತೆಯಲಿ ಸೀರಿಯಲ್​ ಖ್ಯಾತ ನಟಿ ಮೇಘ ಶೆಟ್ಟಿ ಆಗಮಿಸಿದ್ದಾರೆ. ಇನ್ನು, ತರುಣ್ ಸುಧೀರ್ ಅವರು ತಾಳಿ ಕಟ್ಟುತ್ತಿದ್ದಂತೆ ನಟಿ ಸೋನಲ್ ಮೊಂತೆರೊ ಕಣ್ಣೀರಿಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2024/08/tharun-sudhir2.jpg)
ಇನ್ನು, ಮದುವೆ ಹಾಲ್​ಗೆ ಸೋನಲ್ ಮೊಂತೆರೊ ಅವರನ್ನು ಗ್ರ್ಯಾಂಡ್​ ಆಗಿ ಮೆಲ್​ಕಮ್​ ಮಾಡಿದ್ದಾರೆ. ಸೋನಲ್ ಮೊಂತೆರೊ ಅವರು ಹಾಲ್​ಗೆ ಎಂಟ್ರಿ ಕೊಡುತ್ತಿದ್ದಂತೆ ಸಾಕಷ್ಟು ಯುವತಿಯರು ಡ್ಯಾನ್ಸ್ ಮಾಡುತ್ತಾ ಅವರನ್ನು ಬರಮಾಡಿಕೊಂಡಿದ್ದಾರೆ. ಬಳಿಕ ಹಿಂದೂ ಸಂಪ್ರದಾಯದಂತೆ ತರುಣ್ ಕಿಶೋರ್ ಸುಧೀರ್ ಹಾಗೂ ನಟಿ ಸೋನಲ್ ಮೊಂತೆರೊ ಮದುವೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us