/newsfirstlive-kannada/media/post_attachments/wp-content/uploads/2024/07/Sushma.K.Rao3_.jpg)
ನಿರೂಪಕಿ, ನಟಿ ಸುಷ್ಮಾ ರಾವ್ ಅವರು ಭಾಗ್ಯಲಕ್ಷ್ಮೀ ಧಾರಾವಾಹಿ ಮೂಲಕ ಹೊಸ ಇನ್ನಿಂಗ್ಸ್ ಶುರು ಮಾಡಿದ್ದರು. ಸದ್ಯ ಟಾಪ್ ಲಿಸ್ಟ್ನಲ್ಲಿ ಭಾಗ್ಯಲಕ್ಷ್ಮೀ ಸ್ಥಾನ ಪಡೆದುಕೊಂಡು ಮುನ್ನುಗುತ್ತಿದೆ. ಅದರಲ್ಲೂ ಸುಷ್ಮಾ ಅವರ ಅಭಿನಯಕ್ಕೆ ದೊಡ್ಡ ಅಭಿಮಾನಿ ಬಳಗ ಇದೆ. ನಟಿ ಸುಷ್ಮಾ ರಾವ್ ಅವರನ್ನು ತುಂಬಾ ಪ್ರೀತಿಸೋ ಜನರು ಕೂಡ ಇದ್ದಾರೆ. ಇಷ್ಟೆಲ್ಲಾ ಹೇಳೋಕೆ ಕಾರಣ ಸುಷ್ಮಾ ಅವರ ಹುಟ್ಟುಹಬ್ಬದ ಸಂಭ್ರಮ.
ಇದನ್ನೂ ಓದಿ: ಸಿಹಿ ಸುದ್ದಿ ಕೊಟ್ಟ ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ! ಅಪ್ಪ ಆಗ್ತಿದ್ದಾರೆ ಭುವನ್ ಪೊನ್ನಣ್ಣ
ನಿನ್ನೆ ಜುಲೈ 1 ರಂದು ನಟಿ ಸುಷ್ಮಾ ಅವರ ಹುಟ್ಟು ಹಬ್ಬವಿತ್ತು. ಹೀಗಾಗಿ ಭಾಗ್ಯಲಕ್ಷ್ಮೀ ಸೀರಿಯಲ್ ತಂಡ ನೆಚ್ಚಿನ ನಟಿಯ ಹುಟ್ಟು ಹಬ್ಬವನ್ನು ಬಹಳ ಸಂಭ್ರಮ ಸಡಗರದಿಂದ ಆಚರಣೆ ಮಾಡಿದೆ. ಇನ್ನೂ ವಿಶೇಷ ಎಂದರೆ ಬರ್ತ್ ಡೇ ಸಂಭ್ರಮದಲ್ಲಿದ್ದ ನಟಿ ಸುಷ್ಮಾ ಅವರು ಹೊಸ ಕಾರನ್ನು ಖರೀದಿ ಮಾಡಿದ್ದಾರೆ. 11 ಲಕ್ಷ ರೂಪಾಯಿ ಮೌಲದ್ಯ ಹುಂಡೈ ಕ್ರೆಟಾ E 1.5L ಕಾರನ್ನು ನಟಿ ಖರೀದಿ ಮಾಡಿದ್ದಾರೆ. ತೆರೆ ಮೇಲೆ ಭಾಗ್ಯಮ್ಮನನ್ನು ಎಷ್ಟು ಪ್ರೀತಿ ಮಾಡ್ತಾರೋ, ಅದೇ ರೀತಿ ತೆರೆ ಹಿಂದೆ ಕೂಡ ಮಕ್ಕಳು ಅದಕ್ಕಿಂತ ಹೆಚ್ಚು ಸುಷ್ಮಾ ಅವರನ್ನು ಪ್ರೀತಿಸುತ್ತಾರೆ.
View this post on Instagram
ಅಮ್ಮನ ಬರ್ತ್ ಡೇಗೆ ಮಕ್ಕಳು ಹಾಡಿನ ಮೂಲಕ ವಿಶ್ ಮಾಡಿದ್ದಾರೆ. ಇನ್ನೂ ಅಕ್ಕಮ್ಮನ ಬರ್ತ್ ಡೇ ಲಕ್ಷ್ಮೀ ಅಂದ್ರೆ ಭೂಮಿಕಾ ಅವರು ಕೂಡ ಸ್ಪೆಷಲ್ ಕ್ಷಣಗಳನ್ನ ಶೇರ್ ಮಾಡುವುದರ ಮೂಲಕ ವಿಶ್ ಮಾಡಿದ್ದಾರೆ. ಸದ್ಯ ಹೊಸ ಕಾರನ್ನು ಖರೀದಿ ಮಾಡಿದ್ದ ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋ ನೋಡಿದ ಅಭಿಮಾನಿಗಳು ಬರ್ತ್ ಡೇ ವಿಶ್ ಜೊತೆಗೆ ಹೊಸ ಕಾರು ಖರೀದಿ ಮಾಡಿದ್ದಕ್ಕೂ ಶುಭ ಹಾರೈಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ