ಬ್ಯೂಟಿ ಸ್ನಾನದ ನೀರಲ್ಲಿ ಸೋಪ್ ತಯಾರಿಸಿ ಮಾರಾಟ.. ಖ್ಯಾತ ನಟಿಯ ಆಫರ್‌; ಸೋಪ್ ಬೆಲೆ ಎಷ್ಟು?

author-image
admin
Updated On
ಬ್ಯೂಟಿ ಸ್ನಾನದ ನೀರಲ್ಲಿ ಸೋಪ್ ತಯಾರಿಸಿ ಮಾರಾಟ.. ಖ್ಯಾತ ನಟಿಯ ಆಫರ್‌; ಸೋಪ್ ಬೆಲೆ ಎಷ್ಟು?
Advertisment
  • ನಟಿ ಸಿಡ್ನಿ ಸ್ವೀನಿ ಕೊಟ್ಟ ಈ ಬಿಗ್ ಆಫರ್ ಬಗ್ಗೆ ಬಿಸಿ, ಬಿಸಿ ಚರ್ಚೆ
  • ಸ್ನಾನದ ನೀರಿನ ಸೋಪ್‌ ಲಿಮಿಟೆಡ್ ಎಡಿಷನ್‌ ಎಂದ ಚೆಲುವೆ!
  • ಇದೊಂದು ಒಳ್ಳೆಯ ಐಡಿಯಾ ಅಂತ ಹೇಳಿದವರು ಯಾರು?

ಅಮೆರಿಕಾದ ಖ್ಯಾತ ನಟಿ ಸಿಡ್ನಿ ಸ್ವೀನಿ ತನ್ನ ಸ್ನಾನದ ನೀರಲ್ಲಿ ಸೋಪ್ ತಯಾರಿಸಿ ಮಾರಾಟ ಮಾಡಲು ಮುಂದಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿಡ್ನಿ ಸ್ವೀನಿ ಕೊಟ್ಟ ಈ ಬಿಗ್ ಆಫರ್ ಬಗ್ಗೆ ಬಿಸಿ, ಬಿಸಿ ಚರ್ಚೆಯಾಗಿದೆ.

publive-image

ಸಿಡ್ನಿ ಸ್ವೀನಿ ಸ್ನಾನದ ನೀರಿನ ಸೋಪ್‌ಗೆ ಡಾ. ಸ್ಕ್ವಾಚ್ (Dr. Squatch) ಅನ್ನೋ ಹೆಸರಿಡಲಾಗಿದೆ. Dr. Squatch ಬ್ರ್ಯಾಂಡ್ ಜೊತೆ ಸಿಡ್ನಿ ಸ್ವೀನಿ ಒಪ್ಪಂದ ಮಾಡಿಕೊಂಡಿದ್ದಾರೆ. ಇದು ಲಿಮಿಟೆಡ್ ಎಡಿಷನ್‌ನ ಸೋಪ್ ಎನ್ನಲಾಗಿದೆ.

ಇದನ್ನೂ ಓದಿ: ಮದುವೆ ಗಿಫ್ಟ್‌ ಬಾಕ್ಸ್‌ನಲ್ಲಿ ಬಾಂಬ್‌.. ನವ ವಿವಾಹಿತನ ಬಲಿ ಪಡೆದ ಮಾಸ್ಟರ್ ಮೈಂಡ್‌ಗೆ ಶಿಕ್ಷೆ; ಆಗಿದ್ದೇನು? 

ಡಾ. ಸ್ಕ್ವಾಚ್ ಹೆಸರಿನ ಈ ಸೋಪಿಗೆ 8 ಡಾಲರ್ ಬೆಲೆ ನಿಗದಿ ಮಾಡಲಾಗುತ್ತಿದೆ. 8 ಅಮೆರಿಕನ್ ಡಾಲರ್ ಅಂದ್ರೆ ಭಾರತೀಯ ಮೌಲ್ಯದಲ್ಲಿ 684 ರೂಪಾಯಿಗಳು. ಸ್ನಾನದ ನೀರಿನ ಜೊತೆಗೆ ಪೈನ್ ತೊಗಟೆ ಸಾರ, ಸುಗಂಧದ ಪರಿಮಳವನ್ನು ಇದರಲ್ಲಿ ಸೇರಿಸಲಾಗುತ್ತದೆ ಎನ್ನಲಾಗಿದೆ. ಆದರೆ ಸ್ನಾನದ ನೀರಲ್ಲಿ ಸೋಪ್ ತಯಾರಿಸಿ ಸಿಡ್ನಿ ಸ್ವೀನಿ ಪ್ಲಾನ್‌ಗೆ ಈಗಾಗಲೇ ವಿರೋಧ ವ್ಯಕ್ತವಾಗಿದೆ.

publive-image

ಸ್ನಾನದ ನೀರಲ್ಲಿ ಸೋಪ್‌ ತಯಾರಿಸೋ ಈ ನಟಿಯ ಯೋಜನೆಗೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ. ಈ ಸೋಪ್‌ನಲ್ಲಿ ಸ್ನಾನ ಮಾಡಿದ ಮೇಲೆ ನಾವು ಕನ್ನಡಿಯಲ್ಲಿ ನಮ್ಮನ್ನು ನೋಡಿಕೊಳ್ಳಬೇಕು ಅಂತ ಒಬ್ಬರು ಹೇಳಿದ್ರೆ, ಇದೊಂದು ಒಳ್ಳೆಯ ಐಡಿಯಾ ಅಂತ ಹೇಳಿದವರು ಯಾರು ಎಂದು ಟೀಕಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment