/newsfirstlive-kannada/media/post_attachments/wp-content/uploads/2024/07/tamanna1.jpg)
ನಟನೆ, ತಮ್ಮ ಅದ್ಭುತ ಸೌಂದರ್ಯದ ಮೂಲಕವೇ ಅಪಾರ ಫ್ಯಾನ್ಸ್​ಗಳನ್ನು ಸಂಪಾದಿಸಿರುವ ನಟಿ ತಮನ್ನಾ ಭಾಟಿಯಾ ಬಗ್ಗೆ ಒಂದಲ್ಲಾ ಒಂದು ವಿಚಾರಗಳು ಮುನ್ನಲೆಗೆ ಬರುತ್ತಲೇ ಇರುತ್ತವೆ. ಅವರ ಕಾಸ್ಟ್ಯೂಮ್, ಮೇಕಪ್ ಹೀಗೆ ಸಾಕಷ್ಟೂ ವಿಚಾರಗಳ ಮೂಲಕ ತಮನ್ನಾ ಭಾಟಿಯಾ ಸಖತ್​ ಸುದ್ದಿಯಲ್ಲಿ ಇರುತ್ತಾರೆ.
ಇದನ್ನು ಓದಿ: ವಿರಾಟ್ ಕೊಹ್ಲಿ- ಬ್ಯೂಟಿ ತಮನ್ನಾ ನಡುವೆ ಮತ್ತೆ ಗಾಸಿಪ್; ಈ ಬಗ್ಗೆ ಅನುಷ್ಕಾ ಶರ್ಮಾಗೆ ಸಲಹೆ ಕೊಟ್ಟವಱರು?
ಇದೀಗ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರದ್ದು ಮತ್ತೊಂದು ವಿಚಾರಕ್ಕೆ ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ. ಹೌದು, ಸಾಮಾನ್ಯವಾಗಿ ನಟಿ ತಮನ್ನಾ ಭಾಟಿಯಾ ನಟಿಸುವ ಸಿನಿಮಾಗಳಿಗೆ 5 ರಿಂದ 7 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಇನ್ನು ಐಟಂ ಸಾಂಗ್‌ನಲ್ಲಿ ಡ್ಯಾನ್ಸ್​ ಮಾಡಲು ಸರಿಸುಮಾರು 2 ಕೋಟಿ ರೂಪಾಯಿಯಷ್ಟು ಚಾರ್ಜ್ ಮಾಡುತ್ತಾರೆ.
ಆದರೆ ಸಿನಿಮಾದಿಂದ ಕೋಟಿ ಕೋಟಿ ಆದಾಯಗಳಿಸುವ ನಟಿ ತಮನ್ನಾ ಕಮರ್ಷಿಯಲ್​ ಪ್ರಾಪರ್ಟಿ ಒಂದು ಬಾಡಿಗೆಗೆ ತೆಗೆದುಕೊಂಡಿದ್ದಾರೆ. ನಟಿ ತಮನ್ನಾ ಮುಂಬೈನ ಜುಹು ತಾರಾ ರಸ್ತೆಯಲ್ಲಿರುವ ವಾಣಿಜ್ಯ ಕಟ್ಟಡಕ್ಕೆ ತಿಂಗಳಿಗೆ ಬರೋಬ್ಬರಿ 18 ಲಕ್ಷ ಬಾಡಿಗೆ ಕಟ್ಟುತ್ತಿದ್ದಾರೆ ಎಂದು ವರದಿಯಾಗಿದೆ. ಈ ಕಟ್ಟಡವನ್ನು 5 ವರ್ಷಗಳ ಅವಧಿಗೆ ಬಾಡಿಗೆ ಪಡೆಯಲಾಗಿದೆ. 6065 ಚದರ ಅಡಿ ವಾಣಿಜ್ಯ ಕಟ್ಟಡ ಇದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ