ಅಂತರಪಟ ಖ್ಯಾತಿಯ ತನ್ವಿಯಾ ಬಾಲರಾಜ್ ಬರ್ತ್​ ಡೇ ಸೆಲೆಬ್ರೇಷನ್ ಹೇಗಿತ್ತು? ಫೋಟೋಸ್ ನೋಡಿ!

author-image
Veena Gangani
ಅಂತರಪಟ ಖ್ಯಾತಿಯ ತನ್ವಿಯಾ ಬಾಲರಾಜ್ ಬರ್ತ್​ ಡೇ ಸೆಲೆಬ್ರೇಷನ್ ಹೇಗಿತ್ತು? ಫೋಟೋಸ್ ನೋಡಿ!
Advertisment
  • ಪಿಂಕ್​ ಕಲರ್​ ಡ್ರೆಸ್​ನಲ್ಲಿ ಮಿಂಚಿದ ಕಿರುತೆರೆ ನಟಿ ತನ್ವಿಯಾ
  • ಅದ್ಭುತ ನಟನೆ ಮೂಲಕ ಅಪಾರ ಫ್ಯಾನ್ಸ್​ ಗಳಿಸಿದ ನಟಿ ಇವರು
  • ನಟಿ ತನ್ವಿಯಾ ಅವರ ಹುಟ್ಟು ಹಬ್ಬಕ್ಕೆ ಯಾರೆಲ್ಲಾ ಭಾಗಿಯಾಗಿದ್ರು?

ಕನ್ನಡ ಕಿರುತೆರೆಯಲ್ಲಿ ಹಲವು ಹೊಸ ಹೊಸ ಧಾರಾವಾಹಿಗಳು ಬರುತ್ತಲೇ ಇರುತ್ತವೆ. ವೀಕ್ಷಕರು ಎಲ್ಲಾ ಧಾರಾವಾಹಿಗಳನ್ನ ಮನಸಾರೆ ಅಪ್ಪಿಕೊಳ್ಳುತ್ತ ಬಂದಿದ್ದಾರೆ.

ಇದನ್ನೂ ಓದಿ:ಇಂದಿನಿಂದ ರೈಲು ಪ್ರಯಾಣವೂ ದುಬಾರಿ.. ಐದು ವರ್ಷಗಳ ನಂತರ ಟಿಕೆಟ್​​ ರೇಟ್ ಹೆಚ್ಚಳ..

publive-image

ಆ ಲಿಸ್ಟ್​ನಲ್ಲಿ ವೀಕ್ಷಕರ ನೆಚ್ಚಿನ ಸೀರಿಯಲ್​ಗಳಲ್ಲಿ ಅಂತರಪಟ ಧಾರಾವಾಹಿ ಕೂಡ ಒಂದಾಗಿತ್ತು. ತಮ್ಮ ಅದ್ಭುತ ನಟನೆಯ ಮೂಲಕವೇ ಅತಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ ನಟಿ ತನ್ವಿಯಾ ಬಾಲರಾಜ್.

publive-image

ಅಂತರಪಟ ಸೀರಿಯಲ್​ನಲ್ಲಿ ಆರಾಧನಾ ಪಾತ್ರದಲ್ಲಿ ನಟಿಸುತ್ತಿರುವ ತನ್ವಿಯಾ ಬಾಲರಾಜ್ ಸಖತ್​ ಖುಷಿಯಲ್ಲಿದ್ದಾರೆ. ಹೌದು, ಅಂತರಪಟ ಸೀರಿಯಲ್​ ಮೂಲಕ ಅತಿ ಹೆಚ್ಚು ಅಭಿಮಾನಿಗಳನ್ನು ಗಳಿಸಿಕೊಂಡಿರೋ ತನ್ವಿಯಾ ಹುಟ್ಟು ಹಬ್ಬದ ಖುಷಿಯಲ್ಲಿದ್ದಾರೆ.

publive-image

ಸದ್ಯ ಬರ್ತ್​ ಡೇ ಗ್ರ್ಯಾಂಡ್​ ಆಗಿ ಆಚರಿಸಿಕೊಂಡಿರೋ ಫೋಟೋಗಳನ್ನು ತಮ್ಮ ಇನ್​ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ಫೋಟೋದಲ್ಲಿ ನಟಿ ಗುಲಾಬಿ ಬಣ್ಣದ ಗೌನ್​ ಧರಿಸಿ ಕೇಕ್​ ಕಟ್​ ಮಾಡಿ ಸಂಭ್ರಮಿಸಿದ್ದಾರೆ.

ಅಷ್ಟೇ ಅಲ್ಲದೇ ತನ್ವಿಯಾ ಬಾಲರಾಜ್ ಹುಟ್ಟು ಹಬ್ಬಕ್ಕೆ ಅಂತರಪಟ ಸೀರಿಯಲ್​ ನಟಿ ಶರ್ಮಿಳಾ ಚಂದ್ರಶೇಖರ್ ಹಾಗೂ ಚಂದನ.ಕೆ.ಗೌಡ ಭಾಗಿಯಾಗಿದ್ದು ವಿಶೇಷವಾಗಿತ್ತು. ಇನ್ನೂ ನಟಿ ಶೇರ್ ಮಾಡಿಕೊಂಡ ಬರ್ತ್​ ಡೇ ಸಲೆಬ್ರೇಷನ್​ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment