/newsfirstlive-kannada/media/post_attachments/wp-content/uploads/2024/12/Urmila-Kothare-death.jpg)
ಪುಣೆ ಪೋರ್ಷೆ ಕಾರು ಅಪಘಾತದ ಬಳಿಕ ಮಹಾರಾಷ್ಟ್ರದಲ್ಲಿ ಮತ್ತೊಂದು ದಾರುಣ ಘಟನೆ ಬೆಳಕಿಗೆ ಬಂದಿದೆ. ಮುಂಬೈನಲ್ಲಿ ಮರಾಠಿ ನಟಿ ಊರ್ಮಿಳಾ ಕೊಠಾರೆ ಅವರ ಕಾರು ಭಯಾನಕ ಡಿಕ್ಕಿ ಆಗಿದೆ. ನಟಿ ಊರ್ಮಿಳಾ ಕೊಠಾರೆ ಕಾರಿನ ಅಪಘಾತದಲ್ಲಿ ಓರ್ವ ಮೆಟ್ರೋ ಕಾರ್ಮಿಕ ಸಾವನ್ನಪ್ಪಿದ್ದು, ಮತ್ತೊರ್ವ ಕಾರ್ಮಿಕನ ಸ್ಥಿತಿ ಚಿಂತಾಜನಕವಾಗಿದೆ.
ನಟಿ ಊರ್ಮಿಳಾ ಕೊಠಾರೆ ಅವರು ಸಿನಿಮಾ ಶೂಟಿಂಗ್ ಮುಗಿಸಿ ಕಾರಿನಲ್ಲಿ ಮನೆಗೆ ವಾಪಸ್ ಆಗುತ್ತಿದ್ದರು. ಮಧ್ಯರಾತ್ರಿಯಲ್ಲಿ ಊರ್ಮಿಳಾ ಅವರ ಕಾರು ಮೆಟ್ರೋ ಕಾಮಗಾರಿಯಲ್ಲಿ ಭಾಗಿಯಾಗಿದ್ದ ಕಾರ್ಮಿಕರಿಗೆ ಡಿಕ್ಕಿಯಾಗಿದೆ. ಮುಂಬೈನ ಕಾಂದಿವಲಿಯಲ್ಲಿ ನಡೆದ ಅಪಘಾತದಲ್ಲಿ ಓರ್ವ ಕಾರ್ಮಿಕ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.
ಊರ್ಮಿಳಾ ಕೊಠಾರೆ ಅವರ ಕಾರು ಇಬ್ಬರು ಕಾರ್ಮಿಕರಿಗೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ನಟಿ ಊರ್ಮಿಳಾ ಹಾಗೂ ಅವರ ಕಾರು ಚಾಲಕನಿಗೂ ಗಾಯಗಳಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಊರ್ಮಿಳಾ ಕೊಠಾರೆ ಅವರ ಕಾರು ಅತಿಯಾದ ವೇಗದಲ್ಲಿ ತೆರಳುತ್ತಿತ್ತು. ವೇಗವಾಗಿ ಚಲಿಸುತ್ತಿದ್ದಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಮೆಟ್ರೋ ಕಾರ್ಮಿಕರಿಗೆ ಡಿಕ್ಕಿಯಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: 14 kg ಚಿನ್ನ ವಂಚಿಸಿದ ‘ಬಂಗಾರಿ’ ಕೇಸ್‌ಗೆ ಹೊಸ ಟ್ವಿಸ್ಟ್.. ಐಶ್ವರ್ಯಾ ಗೌಡ ಬಂಧನ; ಆಗಿದ್ದೇನು?
ಮಿಡ್‌ನೈಟ್ ಭೀಕರ ಅಪಘಾತದಲ್ಲಿ ಕಾರು ಡ್ಯಾಮೇಜ್ ಆಗಿದೆ. ಅದೃಷ್ಟವಶಾತ್ ನಟಿ ಊರ್ಮಿಳಾ ಅವರು ಅಪಾಯದಿಂದ ಪಾರಾಗಿದ್ದಾರೆ. ಊರ್ಮಿಳಾ ಕೊಠಾರೆ ಅವರು ಮರಾಠಿಯ ಹಲವು ಸಿನಿಮಾ ಹಾಗೂ ಹಿಂದಿಯ ಥ್ಯಾಂಕ್ ಗಾಡ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ