ಗೆಳೆಯನ ಜೊತೆ ಸಪ್ತಪದಿ ತುಳಿದ ಮಾರ್ಟಿನ್ ಬ್ಯೂಟಿ; ಹುಡುಗ ಯಾರು..?

author-image
Bheemappa
Updated On
ಗೆಳೆಯನ ಜೊತೆ ಸಪ್ತಪದಿ ತುಳಿದ ಮಾರ್ಟಿನ್ ಬ್ಯೂಟಿ; ಹುಡುಗ ಯಾರು..?
Advertisment
  • ಕನ್ನಡದ ಸಿನಿಮಾಗಳಲ್ಲಿ ಹೀರೋಯಿನ್ ಆಗಿ ನಟಿಸಿದ್ದ ವೈಭವಿ
  • ಮಾರ್ಟಿನ್, ಗಾಳಿಪಟ-2, ರಾಜ್ ವಿಷ್ಣು ಚಿತ್ರದಲ್ಲಿ ನಟಿಸಿದ್ದ ನಟಿ
  • ಬ್ಯೂಟಿ ವೈಭವಿ ಶಾಂಡಿಲ್ಯ ಅವ್ರು ಕೈ ಹಿಡಿದ ಹುಡುಗ ಯಾರು..?

ಸ್ಯಾಂಡಲ್​ವುಡ್​ನ ಗಾಳಿಪಟ 2, ಮಾರ್ಟಿನ್ ಸಿನಿಮಾ ಖ್ಯಾತಿಯ ನಟಿ ವೈಭವಿ ಶಾಂಡಿಲ್ಯ ಅವರು ಫಿಲ್ಮ್ ಮೇಕರ್ ಆಗಿರುವ ಹರ್ಷವರ್ಧನ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ನಟಿ ವೈಭವಿ ಶಾಂಡಿಲ್ಯ ಹಾಗೂ ಹರ್ಷವರ್ಧನ್ ಅವರು ಕೆಲವು ವರ್ಷಗಳಿಂದ ಪ್ರೀತಿಯಲ್ಲಿದ್ದರು. ಹೀಗಾಗಿ ಇಬ್ಬರು ಮನೆಯವರನ್ನು ಒಪ್ಪಿಸಿ ಕೊನೆಗೆ ಮದುವೆಯಾಗಿದ್ದಾರೆ. ಮುಂಬೈನಲ್ಲಿ ನಡೆದ ವಿವಾಹ ಸಂಭ್ರಮದಲ್ಲಿ ಗುರು, ಹಿರಿಯರು, ಎರಡು ಕಡೆಯ ಕುಟುಂಬಸ್ಥರು, ಸ್ನೇಹಿತರು ಹಾಗೂ ಗಣ್ಯರ ಸಮ್ಮುಖದಲ್ಲಿ ವೈಭವಿ, ಹರ್ಷವರ್ಧನ್ ಹೊಸ ಜೀವನಕ್ಕೆ ವೆಲ್​ಕಮ್ ಹೇಳಿದ್ದಾರೆ.

publive-image

ಈ ಸಂಬಂಧ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿರುವ ವೈಭವಿ ಶಾಂಡಿಲ್ಯ ಅವರು, ನಮ್ಮ ಕುಟುಂಬ ಹಾಗೂ ಗುರು, ಹಿರಿಯರು, ಸ್ನೇಹಿತರ ಆಶೀರ್ವಾದದೊಂದಿಗೆ, ಹರ್ಷವರ್ಧನ್ ಜೊತೆ ಸುಂದರ ಪ್ರಯಾಣ ಆರಂಭವಾಗಿದೆ. ನಿಮ್ಮ ಪ್ರೀತಿ ಹಾಗೂ ಬೆಂಬಲಕ್ಕಾಗಿ ನಾನು ಕೃತಜ್ಞರಾಗಿರುತ್ತೇನೆ. ಸಂತೋಷವಾಗಿರಲಿ.. ಎಂದು ಹಾರೈಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ವೈಭವಿ ಶಾಂಡಿಲ್ಯ ಅವರು ಮೂಲತಹ ಮಹಾರಾಷ್ಟ್ರದವರು. ಅದರಲ್ಲಿಯೂ ಮರಾಠಿಯವರು. 1994ರ ಮೇ 27 ರಂದು ಮುಂಬೈನಲ್ಲಿ ಜನಿಸುತ್ತಾರೆ. ಬಳಿಕ ವಿದ್ಯಾಭ್ಯಾಸ ಮುಗಿದ ಮೇಲೆ ನಟನೆ ಕಡೆಗೆ ಹೆಚ್ಚಿನ ಗಮನ ಹರಿಸುತ್ತಾರೆ. ಹೀಗಾಗಿಯೇ 2015ರಲ್ಲಿ ಮರಾಠಿಯ ಜನಿವಾ ಎನ್ನುವ ಮೂವಿ ಮೂಲಕ ಸಿನಿ ಪ್ರಯಾಣ ಆರಂಭಿಸುತ್ತಾರೆ.

ಇದನ್ನೂ ಓದಿ:ಭಾರತೀಯರಿಗೆ ಮತ್ತಷ್ಟು ಹತ್ತಿರವಾದ ಕಾಶ್ ಪಟೇಲ್.. FBI ಮುಖ್ಯಸ್ಥರಾಗಿ ಭಗವದ್ಗೀತೆ ಮೇಲೆ ಪ್ರತಿಜ್ಞಾವಿಧಿ..!

publive-image

ವೈಭವಿ ಅವರು ಮರಾಠಿ ಮಾತ್ರವಲ್ಲ ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ ಅಭಿನಯ ಮಾಡಿ ಖ್ಯಾತಿ ಗಳಿಸಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ರಾಜ್ ವಿಷ್ಣು ಸಿನಿಮಾ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದರು. ನಂತರ ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ-2 ಸಿನಿಮಾದಲ್ಲಿ ನಟಿಸಿದರು. ನಿರ್ದೇಶಕ ಎ.ಪಿ ಅರ್ಜುನ್ ಹಾಗೂ ಆ್ಯಕ್ಷನ್ ಫಿನ್ಸ್​ ಧ್ರುವ ಸರ್ಜಾ ಕಾಂಬಿನೇಷನ್​ ಮಾರ್ಟಿನ್ ಸಿನಿಮಾದಲ್ಲಿ ನಾಯಕಿ ಆಗಿ ಅಭಿನಯಿಸಿದ್ದರು. ಸದ್ಯ ಇದೀಗ ಫಿಲ್ಮ ಮೇಕರ್ ಆಗಿರುವ ಹರ್ಷವರ್ಧನ್ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment