/newsfirstlive-kannada/media/post_attachments/wp-content/uploads/2025/04/vaishnvi-gowda4.jpg)
ಅದೆಷ್ಟೋ ಹೆಣ್ಣು ಮಕ್ಕಳಿಗೆ ಆಸೆ ಇರುತ್ತೆ. ನಿಶ್ಚಿತಾರ್ಥ, ಮದುವೆ ಹೀಗೆ ಇನ್ನಿತರ ಕಾರ್ಯಕ್ರಮಗಳಲ್ಲಿ ತಾವು ಸುಂದರವಾಗಿ ಕಾಣಿಸಿಕೊಳ್ಳಬೇಕು. ಎಲ್ಲರೂ ನಮ್ಮ ಮೇಕಪ್ಗೆ ಕಾಂಪ್ಲಿಮೆಂಟ್ ಕೊಡಬೇಕು ಅಂತ ಅಂದುಕೊಳ್ಳುತ್ತಾರೆ. ಅದರಲ್ಲೂ ಸಿನಿಮಾ ನಟಿಯರಿಗೆ ಸಾಕಷ್ಟು ಫ್ಯಾನ್ಸ್ ಭೇಸ್ ಇರುತ್ತೆ. ಅವರು ಹೇಗೆ ರೆಡಿ ಆಗ್ತಾರೆ ಅಂತೆಲ್ಲಾ ಅಭಿಮಾನಿಗಳು ಕಾಯುತ್ತಾ ಇರುತ್ತಾರೆ. ಅದರಂತೆ ಮೊದಲೇ ಅಷ್ಟು ಕ್ಯೂಟ್ ಆಗಿದ್ದ ಕನ್ನಡದ ನಟಿಗೆ ಮತ್ತಷ್ಟು ಹೊಳಪು ಬರುವಂತೆ ಮಾಡಿದ್ದಾರೆ ಮೇಕಪ್ ಆರ್ಟಿಸ್ಟ್.
ಎಷ್ಟು ಚಂದ ಇವಳು ಯಾವ ರಾಣಿ ಮಗಳು.. ಈ ಸಾಲುಗಳು ಕನ್ನಡ ಕಿರುತೆರೆ ನಟಿಯಾಗಿರೋ, ಬಿಗ್ಬಾಸ್ ಬೆಡಗಿ ವೈಷ್ಣವಿ ಗೌಡಗೆ ಅರ್ಪಣೆ. ಏಕೆಂದರೆ ಮೊನ್ನೆಯಷ್ಟೇ ನಟಿ ವೈಷ್ಣವಿ ಗೌಡ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಇಷ್ಟು ದಿನ ಸಿಂಗಲ್ ಆಗಿದ್ದ ವೈಷ್ಣವಿ ಗೌಡ ಈಗ ಮಿಂಗಲ್ ಆಗಿದ್ದಾರೆ. ಏಪ್ರಿಲ್ 14ರಂದು ವೈಷ್ಣವಿ ಗೌಡ ಉದ್ಯಮಿ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ರೀಲ್ಸ್ ಗೆಳೆಯನಿಗಾಗಿ ರಿಯಲ್ ಗಂಡನ ಕತ್ತು ಹಿಸುಕಿ ಸಾಯಿಸಿದ ಮಹಿಳೆ; ಇಂಚಿಂಚೂ ಮಾಹಿತಿ ಬಹಿರಂಗ!
ಇನ್ನೂ, ನಿಶ್ಚಿತಾರ್ಥದ ವೇಳೆ ನಟಿ ಎರಡು ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಬಾರ್ಬಿ ಡಾಲ್ ಲುಕ್, ಇನ್ನೊಂದು ಲೆಹೆಂಗಾ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಎರಡು ಥೀಮ್ನಲ್ಲಿ ನಟಿಗೆ ಅಷ್ಟು ಚಂದವಾಗಿ ಮೇಕಪ್ ಮಾಡಲಾಗಿದೆ. ಮೊದಲು ಬಾರ್ಬಿ ಲುಕ್ನಲ್ಲಿ ನಟಿ ವೈಷ್ಣವಿ ಗೌಡ ಥೇಟ್ ಅಪ್ಸರೆಯಂತೆ ಕಾಣಿಸಿಕೊಂಡಿದ್ದಾರೆ. ಲೆಹೆಂಗಾ ಡ್ರೆಸ್ ಧರಿಸಿಕೊಂಡು ಮೇಕಪ್ ಮಾಡಿಸಿಕೊಂಡಿರೋ ನಟಿ ವೈಷ್ಣವಿ ಗೌಡ ಅವರನ್ನು ನೋಡೋದಕ್ಕೆ ಎರಡು ಕಣ್ಣು ಸಾಲುತ್ತಾ ಇರಲಿಲ್ಲ ಅಷ್ಟು ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
ನಟಿ ವೈಷ್ಣವಿ ಗೌಡಗೆ ಮೇಕಪ್ ಮಾಡಿದ್ಯಾರು?
ನಟಿ ವೈಷ್ಣವಿ ಗೌಡ ಅವರಿಗೆ ಮೇಕಪ್ ಮಾಡಿದ್ದು, ಪ್ರಿಯಾಂಕಾ ಹರೀಶ್ ರೆಡ್ಡಿ ಅಂತ. ತಮಗೆ ಮೇಕಪ್ ಮಾಡಿದ್ದ ಪ್ರಿಯಾಂಕಾ ಹರೀಶ್ ಅವರ ಬಗ್ಗೆ ಮಾತಾಡಿದ ನಟಿ, ಪ್ರಿಯಾಂಕಾ ಹರೀಶ್ ರೆಡ್ಡಿ ಅವರ ಜೊತೆಗೆ ತುಂಬಾ ವರ್ಷಗಳ ಕಾಲ ಕೆಲಸ ಮಾಡಿದ್ದೇವೆ. ನಾನು ಯಾವಾಗಲೂ ಅವರ ಕೆಲಸ ಇಷ್ಟ. ಅದಕ್ಕೆ ಈ ಲುಕ್ಕೇ ಸಾಕ್ಷಿ. ನನ್ನ ಬಿಗ್ ಡೇ ನಾ ಇನ್ನಷ್ಟೂ ಸ್ಪೆಷಲ್ ಆಗಿ ಮಾಡಿದ್ದಾರೆ ಅಂತ ಹೇಳಿದ್ದಾರೆ.
View this post on Instagram
ಯಾರು ಈ ಪ್ರಿಯಾಂಕಾ ಹರೀಶ್ ರೆಡ್ಡಿ?
ಪ್ರಿಯಾಂಕಾ ಹರೀಶ್ ರೆಡ್ಡಿ ಅವರು ಪ್ರಫೆಷನಲ್ ಮೇಕಪ್ ಆರ್ಟಿಸ್ಟ್ ಆಗಿದ್ದಾರೆ. ಈ ವೃತಿಯಲ್ಲಿ ಅವರಿಗೆ 9 ವರ್ಷಗಳ ಅನುಭವ ಇದೆ. ಈಗಾಗಲೇ ಇವರು ಮೇಕಪ್ ಕೋರ್ಸ್ ಅನ್ನು ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ನಡೆಸುತ್ತಿದ್ದಾರೆ. ಪ್ರಿಯಾಂಕಾ ಹರೀಶ್ ಅವರು ನಟಿ ಅದಿತಿ ಪ್ರಭುದೇವ, ಶಾನ್ವಿ ಶ್ರೀವಾಸ್ತವ, ರೀಷ್ಮಾ ನಾಣಯ್ಯ ಸೇರಿದಂತೆ ಸಾಕಷ್ಟು ಸ್ಟಾರ್ ನಟಿಯರಿಗೆ ಮೇಕಪ್ ಮಾಡಿದ್ದಾರೆ. ಇವರು ಇನ್ಸ್ಟಾಗ್ರಾಮ್ನಲ್ಲಿ 1.4 ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ