/newsfirstlive-kannada/media/post_attachments/wp-content/uploads/2024/10/yamuna.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಗ್ರ್ಯಾಂಡ್ ಆಗಿ ಓಪನಿಂಗ್ ಪಡೆದುಕೊಂಡು ಒಂದು ವಾರ ಕಳೆದಿದೆ. ಪ್ರತಿ ಸೀಸನ್ನಂತೆ ಈ ಬಾರಿಯೂ ಕೂಡ ಬಿಗ್ಬಾಸ್ ಮನೆಯಿಂದ ಓರ್ವ ಸ್ಪರ್ಧಿ ಆಚೆ ಬಂದಿದ್ದಾರೆ. ಕನ್ನಡದ ಬಿಗ್ಬಾಸ್ ಸೀಸನ್ 11 ಶುರುವಾಗಿ ಒಂದೇ ವಾರಕ್ಕೆ ಕನ್ನಡದ ನಟಿ ಯಮುನಾ ಶ್ರೀನಿಧಿ ಆಚೆ ಬಂದಿದ್ದಾರೆ.
ಇದನ್ನೂ ಓದಿ:BBK11: ಫಸ್ಟ್ ಟೈಮ್ ಬರಿಗಾಲಲ್ಲಿ ವೀಕೆಂಡ್ ಶೋ ನಡೆಸಿಕೊಟ್ಟ ಕಿಚ್ಚ ಸುದೀಪ್; ಏನಿದರ ವಿಶೇಷ?
ಈ ವಾರದಲ್ಲಿ ಬಿಗ್ಬಾಸ್ ಮನೆಯಿಂದ ಆಚೆ ಹೋಗಲು ಒಟ್ಟು 9 ಮಂದಿ ನಾಮಿನೇಟ್ ಆಗಿದ್ದರು. ಲಾಯರ್ ಜಗದೀಶ್, ಗೌತಮಿ ಜಾಧವ್, ಹಂಸ, ಭವ್ಯಾ ಗೌಡ, ಯಮುನಾ, ಶಿಶಿರ್, ಮಾನಸಾ, ಮೋಕ್ಷಿತಾ ಪೈ ಹಾಗೂ ಚೈತ್ರಾ ಕುಂದಾಪುರ ಬಿಗ್ಬಾಸ್ ಮನೆಯಿಂದ ಆಚೆ ಹೋಗಲು ನಾಮಿನೇಟ್ ಆಗಿದ್ದಾರೆ. ಇವರ ಪೈಕಿ ನಿನ್ನೆಯ ಎಪಿಸೋಡ್ನಲ್ಲಿ ಭವ್ಯಾ ಗೌಡ, ಗೌತಮಿ ಜಾಧವ್ ಹಾಗೂ ಮಾನಸ ಅವರನ್ನು ಸೇಫ್ ಮಾಡಲಾಗಿತ್ತು. ಇನ್ನೂ ಉಳಿದಂತೆ ಉಗ್ರಂ ಮಂಜು, ಐಶ್ವರ್ಯ, ಧರ್ಮ ಕೀರ್ತಿರಾಜ್, ಧನರಾಜ್, ಅನುಷಾ ರೈ, ರಂಜಿತ್, ಗೋಲ್ಡ್ ಸುರೇಶ್, ತ್ರೀವಿಕ್ರಂ ಸೇಫ್ ಆಗಿದ್ದರು.
ಲಾಯರ್ ಜಗದೀಶ್, ಹಂಸ, ಯಮುನಾ, ಶಿಶಿರ್, ಮೋಕ್ಷಿತಾ ಪೈ ಹಾಗೂ ಚೈತ್ರಾ ಕುಂದಾಪುರ ಬಿಗ್ಬಾಸ್ ಮನೆಯಿಂದ ನೇರವಾಗಿ ನಾಮಿನೇಟ್ ಆಗಿದ್ದರು. ಇವರ ಪೈಕಿ ಮೊದಲ ವಾರವೇ ಬಿಗ್ಬಾಸ್ ಮನೆಯಿಂದ ಯಮುನ ಅವರು ಔಟ್ ಆಗಿದ್ದಾರೆ. ಒಟ್ಟು 17 ಸ್ಪರ್ಧಿಗಳಿದ್ದ ದೊಡ್ಮನೆಯಲ್ಲಿ ಈಗ ಓರ್ವ ಸ್ಪರ್ಧಿಯನ್ನು ಆಚೆ ಕಳುಹಿಸಲಾಗಿದೆ. ಹೀಗೆ ಪ್ರತಿ ವಾರವು ಬಿಗ್ಬಾಸ್ ಮನೆಯಿಂದ ಒಬ್ಬರಾದ ಮೇಲೆ ಒಬ್ಬರು ಸ್ಪರ್ಧಿಗಳು ಬಿಗ್ಬಾಸ್ ಮನೆಯಿಂದ ಆಚೆ ಬರಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ