/newsfirstlive-kannada/media/post_attachments/wp-content/uploads/2025/05/darshan20.jpg)
ಇಂದು ರೆಬೆಲ್ ಸ್ಟಾರ್ ಅಂಬರೀಶ್ ಜನುಮ ದಿನ. 73ನೇ ಜನ್ಮದಿನದ ಅಂಗವಾಗಿ ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸಮಾಧಿಗೆ ತೆರಳಿದ ಪತ್ನಿ ಸುಮಲತಾ ಅಂಬರೀಷ್ ಹಾಗೂ ಕುಟುಂಬದ ಸದಸ್ಯರು ವಿಶೇಷವಾದ ಪೂಜೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಅಬ್ದುಲ್ ರಹಿಮಾನ್ ಕೇಸ್.. ಕರಾವಳಿ ಮುಸ್ಲಿಂ ಕಾಂಗ್ರೆಸ್​ ಮುಖಂಡರಿಂದ ಸಾಮೂಹಿಕ ರಾಜೀನಾಮೆ ಎಚ್ಚರಿಕೆ
/newsfirstlive-kannada/media/post_attachments/wp-content/uploads/2025/04/DARSHAN_VAMANA_3.jpg)
ಇನ್ನೂ, ರೆಬೆಲ್ ಸ್ಟಾರ್ ಅಂಬರೀಶ್​ ಅವರ ಅಭಿಮಾನಿಗಳು ನಟನನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅಂಬಿ ಅವರ ಸಿನಿಮಾಗಳು, ಹಾಡುಗಳನ್ನು ನೆನಪಿಸಿಕೊಂಡು ಹಿರಿಯ ನಟನ ಜನ್ಮದಿನದಂದು ಅವರನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ನಟ ದರ್ಶನ್ ಅವರು ಕೂಡ ಅಂಬಿ ಅಪ್ಪಾಜಿಗೆ ವಿಶ್ ಮಾಡಿದ್ದಾರೆ.
View this post on Instagram
ಈ ಬಗ್ಗೆ ನಟ ದರ್ಶನ್​ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಶೇರ್ ಮಾಡಿ, ತಂದೆ ಸಮಾನರಾದ ಅಂಬಿ ಅಪ್ಪಾಜಿರವರು ಇಂದಿಗೂ ನಮ್ಮ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ. ಅವರ ಜೀವನ ಶೈಲಿ, ಕಲಿಸಿದ್ದ ಪಾಠಗಳು ಮತ್ತು ತೋರುತ್ತಿದ್ದ ಪ್ರೀತಿ ನನಗೆ ಸದಾ ದಾರಿ ದೀಪವಾಗಿದೆ. ಈ ಹುಟ್ಟುಹಬ್ಬದ ದಿನದಂದು ನೀವು ದೈಹಿಕವಾಗಿ ಇಲ್ಲದಿದ್ದರೂ, ನಿಮ್ಮ ಕಲಾಸೇವೆ ಹಾಗೂ ಜನಹಿತ ಕಾರ್ಯಗಳಿಗೆ ಕನ್ನಡಿಗರು ಸದಾ ಚಿರಋಣಿ. ವೀ ಲವ್ ಯು ರೆಬೆಲ್ ಸ್ಟಾರ್ ಅಂತ ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us