ಜನರು ಬೇಡ ಹೋಗ್ಬೇಡಿ ಎಂದು ಹೆದರಿಸುತ್ತಿದ್ದಾರೆ ಎಂದ ನಟಿ
ಸುಶಾಂತ್ ಸಿಂಗ್ ಕೊನೆಯ ಕ್ಷಣವನ್ನು ಕಳೆದ ಅಪಾರ್ಟ್ಮೆಂಟ್
ಯಾರು ಹೋಗದ ಅಪಾರ್ಟ್ಮೆಂಟ್ ಖರೀದಿಸಿದ ಅದಾ ಶರ್ಮಾ
ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ 2020 ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಬದುಕು ಮುಗಿಸಿದ್ದರು. ಬಂದ್ರಾ ರೆಸಿಡೆನ್ಸಿಯಲ್ಲಿ ನೇಣಿಗೆ ಶರಣಾಗಿದ್ದರು. ಇವರ ಸಾವು ಎಲ್ಲರನ್ನು ಅಚ್ಚರಿಗೆ ದೂಡಿತ್ತು. ಮಾತ್ರವಲ್ಲದೆ, ಇಂತಹ ನಟನನ್ನು ಕಳೆದುಕೊಂಡ ಅಭಿಮಾನಿಗಳು ಕಣ್ಣೀರು ಸುರಿಸಿದ್ದರು. ಇದೀಗ ಸುಶಾಂತ್ ಸಿಂಗ್ ಕೊನೆಯ ದಿನಗಳನ್ನು ಕಳೆದ ಅಪಾರ್ಟ್ಮೆಂಟನ್ನು ಪುನೀತ್ ರಾಜ್ಕುಮಾರ್ ನಟನೆಯ ‘ರಣ ವಿಕ್ರಮ’ ಸಿನಿಮಾ ನಟಿ ಖರೀದಿಸಿದ್ದು, ಅಲ್ಲೇ ವಾಸಿಸುತ್ತಿದ್ದಾರೆ.
ಸುಶಾಂತ್ ಸಿಂಗ್ ಸಾವನ್ನಪ್ಪಿದ ಬಳಿಕ ಆ ಫ್ಲಾಟ್ಗೆ ಮೂರು ವರ್ಷಗಳಿಂದಾಚೆಗೆ ಬಾಡಿಗೆದಾರರನ್ನು ಹುಡುಕಾಡುತ್ತಿದ್ದಾರೆ. ಆದರೆ ಬಾಲಿವುಡ್ ನಟಿ ಅದಾ ಶರ್ಮಾ 4 ತಿಂಗಳ ಹಿಂದೆ ಅದೇ ಅಪಾರ್ಟ್ಮೆಂಟ್ಗೆ ಶಿಫ್ಟ್ ಆಗಿದ್ದಾರೆ. 5 ವರ್ಷಗಳಿಗೆ ಅದನ್ನು ಬಾಡಿಗೆ ಪಡೆದಿದ್ದಾರೆ.
ಈ ಬಗ್ಗೆ ಮಾತನಾಡಿದ ಅದಾ ಶರ್ಮಾ, ‘ನಾನು ‘ಬಸ್ತರ್’ ಮತ್ತು ‘ದಿ ಕೇರಳ ಸ್ಟೋರಿ’ ಒಟಿಟಿ ಬಿಡುಗಡೆ ಸೇರಿದಂತೆ ನನ್ನ ಪ್ರಾಜೆಕ್ಟ್ಗಳಲ್ಲಿ ನಿರತನಾಗಿದ್ದೆ. ಆನಂತರ ಮಥುರಾದ ಆನೆಧಾಮದಲ್ಲಿ ಸ್ವಲ್ಪ ಸಮಯ ಕಳೆದೆ. ನಂತರದ ಸಮಯದಲ್ಲಿ ಅಂತಿಮವಾಗಿ ನೆಲೆಸಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಾನು ನಟನಾಗಲು ಅವರಿಗೆ 10 ಸಾವಿರ ನೀಡಿದೆ, ಮೋಸ ಹೋದೆ; ರಾಜ್ಕುಮಾರ್
View this post on Instagram
ಬಳಿಕ, ‘ನಾನು ವೈಬ್ಗಳನ್ನು ಬಯಸುತ್ತೇನೆ. ಈ ಸ್ಥಳ ನನಗೆ ಧನಾತ್ಮಕ ವೈಬ್ ನೀಡುತ್ತಿದೆ. ಕೇರಳ ಮತ್ತು ಮುಂಬೈಯಲ್ಲಿರುವ ನಮ್ಮ ಮನೆಗಳು ಮರದಿಂದ ಕೂಡಿದೆ. ಅಲ್ಲಿ ಪಕ್ಷಿಗಳಿಗೆ ಅಳಿಲುಗಳಿಗೆ ಆಹಾರ ನೀಡುತ್ತೇವೆ. ಇದು ಪಕ್ಷಿಗಳಿಗೆ ಆಹಾರ ನೀಡಲು ವಿಶಾಲವಾದ ಸ್ಥಳವಾಗಿದೆ. ವೀಕ್ಷಣೆಗೂ ಯೋಗ್ಯವಾಗಿದೆ ಎಂದು ಅದಾ ಶರ್ಮಾ ಹೇಳಿದ್ದಾರೆ.
ಇನ್ನು ಸುಶಾಂತ್ ಸಿಂಗ್ ವಾಸಿಸುತ್ತಿದ್ದ ಸ್ಥಳವನ್ನು ಬಾಡಿಗೆ ಪಡೆದಿರೋದು ಭಯವಿದೆಯೇ ಎಂದು ಪ್ರಶ್ನಿಸಿದ್ದಕ್ಕೆ ನಟಿ ಉತ್ತರಿಸಿದ್ದಾರೆ. ‘ನಾನು ಅಂತ ಪ್ರಜ್ಞೆಯನ್ನು ಅನುಸರಿಸಿದ್ದೇನೆ. ಆದರೆ ಇತರರ ಅಭಿಪ್ರಾಯಗಳನ್ನು ಅಲ್ಲ’ ಎಂದು ಅದಾ ಶರ್ಮಾ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ