newsfirstkannada.com

ಸುಶಾಂತ್​ ಸಿಂಗ್​ ಆತ್ಮಹತ್ಯೆ ಮಾಡಿಕೊಂಡ ಅಪಾರ್ಟ್​ಮೆಂಟ್​ಗೆ ‘ರಣವಿಕ್ರಮ’ ನಟಿ ಶಿಫ್ಟ್! ಹೋಗ್ಬೇಡಿ ಎಂದ ಫ್ಯಾನ್ಸ್!

Share :

Published June 2, 2024 at 8:29pm

Update June 2, 2024 at 8:45pm

    ಜನರು ಬೇಡ ಹೋಗ್ಬೇಡಿ ಎಂದು ಹೆದರಿಸುತ್ತಿದ್ದಾರೆ ಎಂದ ನಟಿ

    ಸುಶಾಂತ್​ ಸಿಂಗ್​ ಕೊನೆಯ ಕ್ಷಣವನ್ನು ಕಳೆದ ಅಪಾರ್ಟ್​ಮೆಂಟ್​

    ಯಾರು ಹೋಗದ ಅಪಾರ್ಟ್​ಮೆಂಟ್​ ಖರೀದಿಸಿದ ಅದಾ ಶರ್ಮಾ

ಬಾಲಿವುಡ್​ ಖ್ಯಾತ ನಟ ಸುಶಾಂತ್​ ಸಿಂಗ್ 2020​ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಬದುಕು ಮುಗಿಸಿದ್ದರು. ಬಂದ್ರಾ ರೆಸಿಡೆನ್ಸಿಯಲ್ಲಿ ನೇಣಿಗೆ ಶರಣಾಗಿದ್ದರು. ಇವರ ಸಾವು ಎಲ್ಲರನ್ನು ಅಚ್ಚರಿಗೆ ದೂಡಿತ್ತು. ಮಾತ್ರವಲ್ಲದೆ, ಇಂತಹ ನಟನನ್ನು ಕಳೆದುಕೊಂಡ ಅಭಿಮಾನಿಗಳು ಕಣ್ಣೀರು ಸುರಿಸಿದ್ದರು. ಇದೀಗ ಸುಶಾಂತ್​ ಸಿಂಗ್​ ಕೊನೆಯ ದಿನಗಳನ್ನು ಕಳೆದ ಅಪಾರ್ಟ್​ಮೆಂಟನ್ನು ಪುನೀತ್​ ರಾಜ್​ಕುಮಾರ್​ ನಟನೆಯ ‘ರಣ ವಿಕ್ರಮ’ ಸಿನಿಮಾ ನಟಿ ಖರೀದಿಸಿದ್ದು, ಅಲ್ಲೇ ವಾಸಿಸುತ್ತಿದ್ದಾರೆ.

ಸುಶಾಂತ್​ ಸಿಂಗ್​ ಸಾವನ್ನಪ್ಪಿದ ಬಳಿಕ ಆ ಫ್ಲಾಟ್​ಗೆ ಮೂರು ವರ್ಷಗಳಿಂದಾಚೆಗೆ ಬಾಡಿಗೆದಾರರನ್ನು ಹುಡುಕಾಡುತ್ತಿದ್ದಾರೆ. ಆದರೆ ಬಾಲಿವುಡ್​ ನಟಿ ಅದಾ ಶರ್ಮಾ 4 ತಿಂಗಳ ಹಿಂದೆ ಅದೇ ಅಪಾರ್ಟ್​ಮೆಂಟ್​​ಗೆ ಶಿಫ್ಟ್​ ಆಗಿದ್ದಾರೆ. 5 ವರ್ಷಗಳಿಗೆ ಅದನ್ನು ಬಾಡಿಗೆ ಪಡೆದಿದ್ದಾರೆ.

ಈ ಬಗ್ಗೆ ಮಾತನಾಡಿದ ಅದಾ ಶರ್ಮಾ, ‘ನಾನು ‘ಬಸ್ತರ್​’ ಮತ್ತು ‘ದಿ ಕೇರಳ ಸ್ಟೋರಿ’ ಒಟಿಟಿ ಬಿಡುಗಡೆ ಸೇರಿದಂತೆ ನನ್ನ ಪ್ರಾಜೆಕ್ಟ್​​ಗಳಲ್ಲಿ ನಿರತನಾಗಿದ್ದೆ. ಆನಂತರ ಮಥುರಾದ ಆನೆಧಾಮದಲ್ಲಿ ಸ್ವಲ್ಪ ಸಮಯ ಕಳೆದೆ. ನಂತರದ ಸಮಯದಲ್ಲಿ ಅಂತಿಮವಾಗಿ ನೆಲೆಸಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಾನು ನಟನಾಗಲು ಅವರಿಗೆ 10 ಸಾವಿರ ನೀಡಿದೆ, ಮೋಸ ಹೋದೆ; ರಾಜ್​ಕುಮಾರ್​

View this post on Instagram

A post shared by Adah Sharma (@adah_ki_adah)

ಬಳಿಕ, ‘ನಾನು ವೈಬ್​ಗಳನ್ನು ಬಯಸುತ್ತೇನೆ. ಈ ಸ್ಥಳ ನನಗೆ ಧನಾತ್ಮಕ ವೈಬ್​ ನೀಡುತ್ತಿದೆ. ಕೇರಳ ಮತ್ತು ಮುಂಬೈಯಲ್ಲಿರುವ ನಮ್ಮ ಮನೆಗಳು ಮರದಿಂದ ಕೂಡಿದೆ. ಅಲ್ಲಿ ಪಕ್ಷಿಗಳಿಗೆ ಅಳಿಲುಗಳಿಗೆ ಆಹಾರ ನೀಡುತ್ತೇವೆ. ಇದು ಪಕ್ಷಿಗಳಿಗೆ ಆಹಾರ ನೀಡಲು ವಿಶಾಲವಾದ ಸ್ಥಳವಾಗಿದೆ. ವೀಕ್ಷಣೆಗೂ ಯೋಗ್ಯವಾಗಿದೆ ಎಂದು ಅದಾ ಶರ್ಮಾ ಹೇಳಿದ್ದಾರೆ.

ಇನ್ನು ಸುಶಾಂತ್​ ಸಿಂಗ್​ ವಾಸಿಸುತ್ತಿದ್ದ ಸ್ಥಳವನ್ನು ಬಾಡಿಗೆ ಪಡೆದಿರೋದು ಭಯವಿದೆಯೇ ಎಂದು ಪ್ರಶ್ನಿಸಿದ್ದಕ್ಕೆ ನಟಿ ಉತ್ತರಿಸಿದ್ದಾರೆ. ‘ನಾನು ಅಂತ ಪ್ರಜ್ಞೆಯನ್ನು ಅನುಸರಿಸಿದ್ದೇನೆ. ಆದರೆ ಇತರರ ಅಭಿಪ್ರಾಯಗಳನ್ನು ಅಲ್ಲ’ ಎಂದು ಅದಾ ಶರ್ಮಾ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸುಶಾಂತ್​ ಸಿಂಗ್​ ಆತ್ಮಹತ್ಯೆ ಮಾಡಿಕೊಂಡ ಅಪಾರ್ಟ್​ಮೆಂಟ್​ಗೆ ‘ರಣವಿಕ್ರಮ’ ನಟಿ ಶಿಫ್ಟ್! ಹೋಗ್ಬೇಡಿ ಎಂದ ಫ್ಯಾನ್ಸ್!

https://newsfirstlive.com/wp-content/uploads/2024/06/Sushant-Singh.jpg

Load More