Advertisment

Adani big Deal: ದೇಶದ ಅತ್ಯಂತ ಹಳೆಯ ಕಂಪನಿ ಖರೀದಿಸಿದ ಗೌತಮ್ ಅದಾನಿ

author-image
Ganesh
Updated On
ಅಮೆರಿಕ ಮಾಡಿದ್ದ ಆರೋಪಕ್ಕೆ ಗೌತಮ್ ಅದಾನಿ ಮೊದಲ ಪ್ರತಿಕ್ರಿಯೆ.. ಏನಂದ್ರು ಉದ್ಯಮಿ?
Advertisment
  • ಸುಮಾರು 6 ಸಾವಿರ ಕೋಟಿಗೆ ಮೆಗಾ ಡೀಲ್ ಮಾಡಿದ ಅದಾನಿ
  • ಓಪನ್ ಆಫರ್ ಮೂಲಕ ಒಪ್ಪಂದ ನಡೆದಿದೆ, ಶೀಘ್ರದಲ್ಲೇ ಅನೌನ್ಸ್
  • ಸ್ವಾತಂತ್ರ್ಯ ಬರುವುದಕ್ಕಿಂತ ಮೊದಲೇ ದೇಶದಲ್ಲಿದ್ದ ಕಂಪನಿ

ಅದಾನಿ ಗ್ರೂಪ್ ಮತ್ತೊಂದು ಕಂಪನಿ ಖರೀದಿಸಲು ಬಿಗ್ ಡೀಲ್​​ ಮಾಡಿದೆ. ಎಂಜಿನಿಯರಿಂಗ್ ಮತ್ತು ನಿರ್ಮಾಣ ಸಂಸ್ಥೆ ಐಟಿಡಿ ಸಿಮೆಂಟೇಶನ್ (ITD Cementation) ಖರೀದಿಸಲು ಮುಂದಾಗಿದೆ. ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಗೌತಮ್ ಅದಾನಿ, ಸುಮಾರು 6 ಸಾವಿರ ಕೋಟಿ ರೂಪಾಯಿಗೆ ಡೀಲ್ ಮಾಡಿದ್ದಾರೆ ಎಂದು ವರದಿಯಾಗಿದೆ.

Advertisment

ಓಪನ್ ಆಫರ್ ಮೂಲಕ ಡೀಲ್..!

ಇಪಿಸಿ ಕಂಪನಿ ಐಟಿಡಿ ಸಿಮೆಂಟೇಶನ್ ಖರೀದಿಸುವ ರೇಸ್‌ನಲ್ಲಿ ಅದಾನಿ ಗ್ರೂಪ್ ಮುಂಚೂಣಿಯಲ್ಲಿದೆ. ಅದಾನಿ ಗ್ರೂಪ್, ಐಟಿಡಿ ಸಿಮೆಂಟೇಶನ್‌ನ ಶೇಕಡಾ 46.64 ಪಾಲನ್ನು ಖರೀದಿಸಲು ನೋಡುತ್ತಿದೆ. ಪ್ರಸ್ತುತ ಮಾರುಕಟ್ಟೆ ಮೌಲ್ಯದ ಪ್ರಕಾರ ಈ ಒಪ್ಪಂದವು 5,888.57 ಕೋಟಿ ಮೌಲ್ಯದ್ದಾಗಿದೆ.

ಇದನ್ನೂ ಓದಿ:Jio, Airtel ಸೋಲಿಸಲು ಹಠತೊಟ್ಟು ನಿಂತ BSNL; ದಿಢೀರ್ ಟಿವಿ ಜಗತ್ತಿಗೆ ಕಾಲಿಟ್ಟ ಟೆಲಿಕಾಂ ಕಂಪನಿ

ಈಗಾಗಲೇ ಒಪ್ಪಂದ..!
ಎರಡು ಸಂಸ್ಥೆಗಳ ನಡುವೆ ಈಗಾಗಲೇ ಒಪ್ಪಂದ ಆಗಿದೆ. ಈ ಬಗ್ಗೆ ಅಧಿಕೃತ ಘೋಷಣೆಯನ್ನು ಶೀಘ್ರದಲ್ಲೇ ಮಾಡಲಿವೆ. ಐಟಿಡಿ ಸಿಮೆಂಟೇಶನ್‌ನ ಸ್ವಾಧೀನವು ಆಂತರಿಕ ಸಿವಿಲ್ ಎಂಜಿನಿಯರಿಂಗ್ ಸಾಮರ್ಥ್ಯಗಳನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ.

Advertisment

ಭಾರತದ ಸ್ವಾತಂತ್ರ್ಯಕ್ಕಿಂತ ಹಳೆಯ ಇತಿಹಾಸ..!
ಐಟಿಡಿ ಸಿಮೆಂಟೇಶನ್ ಕಂಪನಿಯು ಅತ್ಯಂತ ಹಳೆಯ ಇತಿಹಾಸ ಹೊಂದಿದೆ. ದೇಶದ ಅತ್ಯಂತ ಹಳೆಯ ಕಂಪನಿಗಳಲ್ಲಿ ಒಂದಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲೇ ಈ ಕಂಪನಿಯನ್ನು ಆರಂಭಿಸಲಾಗಿತ್ತು. ಇದರ ಮೂಲ ಬ್ರಿಟನ್‌. ಕಂಪನಿಯು ಇತಿಹಾಸದಲ್ಲಿ ಹಲವಾರು ಬಾರಿ ಖರೀದಿಯಾಗಿ ಮಾರಾಟವಾಗಿದೆ.

ಇದನ್ನೂ ಓದಿ:BSNL: ಪ್ರತಿದಿನ 2GB ಡೇಟಾ.. ದಿನಕ್ಕೆ 7 ರೂಪಾಯಿಯಂತೆ 75 ದಿನಗಳ ವ್ಯಾಲಿಡಿಟಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment