ಐಪಿಎಲ್​ನತ್ತ ಅದಾನಿ ಚಿತ್ತ.. ಈ ತಂಡವನ್ನು ಖರೀದಿಸಲು ಪ್ಲಾನ್​​!

author-image
AS Harshith
Updated On
ಅಮೆರಿಕ ಮಾಡಿದ್ದ ಆರೋಪಕ್ಕೆ ಗೌತಮ್ ಅದಾನಿ ಮೊದಲ ಪ್ರತಿಕ್ರಿಯೆ.. ಏನಂದ್ರು ಉದ್ಯಮಿ?
Advertisment
  • ಕ್ರಿಕೆಟ್​ ಲೋಕಕ್ಕೆ ಪ್ರವೇಶಿಸಲು ನಿರ್ಧರಿಸಿರುವ ಅದಾನಿ?
  • ಐಪಿಎಲ್ ತಂಡವೊಂದನ್ನು ಖರೀದಿ ಮಾಡಲು ಪ್ಲಾನ್​
  • 12 ಸಾವಿರದ 550 ಕೋಟಿ ರೂಪಾಯಿ ಹೂಡಿಕೆ ಮಾಡೋ ಸಾಧ್ಯತೆ

ದೇಶದ ಅತಿ ದೊಡ್ಡ ಶ್ರೀಮಂತರ ಪೈಕಿ ಒಬ್ಬರಾದ ಗೌತಮ್ ಅದಾನಿ, ಐಪಿಎಲ್ ತಂಡವೊಂದನ್ನು ಖರೀದಿ ಮಾಡಿ ಕ್ರಿಕೆಟ್​ ಲೋಕಕ್ಕೆ ಪ್ರವೇಶಿಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗ್ತಿದೆ. ಸಿವಿಸಿ ಕ್ಯಾಪಿಟಲ್ಸ್ ಪಾರ್ಟ್‌ನರ್ಸ್‌ನಿಂದ ಗುಜರಾತ್ ಟೈಟಾನ್ಸ್ ಫ್ರಾಂಚೈಸ್‌ನಲ್ಲಿ ಹೆಚ್ಚಿನ ಪಾಲನ್ನು ಪಡೆಯಲು ಮಾತುಕತೆ ನಡೆಯುತ್ತಿದೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

ಇದನ್ನೂ ಓದಿ: ಚೂರಿ ಜೊತೆಗೆ ಲೇಡೀಸ್​ ಪಿಜಿಗೆ ನುಗ್ಗಿದ ಯುವಕ.. ಯುವತಿಯ ಕತ್ತು ಕೊಯ್ದು ಕೊಲೆ ಮಾಡಿ ಎಸ್ಕೇಪ್

2021 ರಲ್ಲಿ ಗುಜರಾತ್ ಟೈಟಾನ್ಸ್ ಫ್ರಾಂಚೈಸ್ ಅನ್ನು 5,625 ಕೋಟಿ ರೂಪಾಯಿಗೆ ಸ್ವಾಧೀನಪಡಿಸಿಕೊಂಡಿರುವ CVC ಕ್ಯಾಪಿಟಲ್ಸ್ ಪಾರ್ಟ್‌ನರ್ಸ್, IPL ತಂಡದ ಮಾರಾಟಕ್ಕಾಗಿ ಅದಾನಿ ಗ್ರೂಪ್ ಮತ್ತು ಟೊರೆಂಟ್ ಗ್ರೂಪ್ ಎರಡರೊಂದಿಗೂ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ.

publive-image

ಇದನ್ನೂ ಓದಿ: ದೇವಸ್ಥಾನದ ಮೇಲೆ ಬಿದ್ದ ಮರ, ಕುಸಿದು ಬಿದ್ದ ಸರ್ಕಾರಿ ಶಾಲಾ ಗೋಡೆ.. ಮಳೆಯಿಂದಾಗಿ ಸಾವಿರಾರು ಸಮಸ್ಯೆ

ಬರೋಬ್ಬರಿ 12 ಸಾವಿರದ 550 ಕೋಟಿ ರೂಪಾಯಿಯನ್ನ ಗೌತಮ್ ಅದಾನಿ ಹೂಡಿಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ. ಸದ್ಯ ಕ್ರಿಕೆಟ್​​ ಪ್ರಿಯರಿಗಂತೂ ಈ ವಿಚಾರ ಸಂತಸ ನೀಡಿದ್ದು, ಜಿಟಿ ತಂಡವನ್ನು ಖರೀದಿಸಲಿ ಎಂದು ಆಶಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment