Advertisment

ಹೆಣ್ಣು, ಹೆಂಡದ ಚಟದಿಂದ ದರ್ಶನ್​ ವಿಲನ್ ಆಗಿದ್ದಾನೆ; ಶಿಷ್ಯನ ಬಗ್ಗೆ ರಂಗಾಯಣದ ಮಾಜಿ ನಿರ್ದೇಶಕ ಬೇಸರ

author-image
AS Harshith
Updated On
ಹೆಣ್ಣು, ಹೆಂಡದ ಚಟದಿಂದ ದರ್ಶನ್​ ವಿಲನ್ ಆಗಿದ್ದಾನೆ; ಶಿಷ್ಯನ ಬಗ್ಗೆ ರಂಗಾಯಣದ ಮಾಜಿ ನಿರ್ದೇಶಕ ಬೇಸರ
Advertisment
  • ದರ್ಶನ್ ಗೆ ಮೊಟ್ಟಮೊದಲು ಬಣ್ಣ ಹಚ್ಚಿದ ರಂಗಕರ್ಮಿ
  • ಶಿಷ್ಯನ ಬಗ್ಗೆ ಬೇಸರ ಹೊರಹಾಕಿದ ಅಡ್ಡಂಡ ಕಾರ್ಯಪ್ಪ
  • ದರ್ಶನ್​ ಬಾಳಿಗೆ ಶನಿ ಎಂಟ್ರಿಯಾಗಿದೆ.. ಆ ಶನಿಯೇ ಪವಿತ್ರಾ ಗೌಡ

ಮೈಸೂರು: ನಟ ದರ್ಶನ್ ಇಷ್ಟು ಕೆಟ್ಟವನೆಂದು ನಾನು ಊಹಿಸಿರಲಿಲ್ಲ. ಆತ ನನ್ನ ಶಿಷ್ಯ, ಆತನ ಅಭಿಮಾನಿ ಅಂತೆಲ್ಲ ಹೇಳಿಕೊಂಡು ತಿರುಗಾಡಿದ್ದೆ ಎಂದು ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಬೇಸರ ಹೊರಹಾಕಿದ್ದಾರೆ.

Advertisment

ಅವನಿಗೆ ರಾಜನ ಪಾತ್ರ ಕೊಟ್ಟಿದ್ದೆ

ನ್ಯೂಸ್ ಫಸ್ಟ್ ಜೊತೆ ಮನಬಿಚ್ಚಿ ಮಾತನಾಡಿದ ಅಡ್ಡಂಡ ಕಾರ್ಯಪ್ಪ, ನಾನು ದರ್ಶನ್ ಒಂದೇ ಊರಿನವರು. ಇಬ್ಬರದೂ ಪೊನ್ನಂಪೇಟೆ. ದರ್ಶನ್, ದಿನಕರ್ ಇಬ್ಬರು ರಜಾದ ಸಮಯದಲ್ಲಿ ಊರಿಗೆ ಬರ್ತಿದ್ರು. ನನ್ನ ನಾಟಕದಲ್ಲಿ ನಾನು ಅವನಿಗೆ ರಾಜನ ಪಾತ್ರ ಕೊಟ್ಟಿದ್ದೆ. ಹೀರೋ ಆಗು ಎಂದು ಆಶೀರ್ವಾದ ಮಾಡಿದ್ದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬದಲಾಯ್ತು ನಟನ ಮನಸ್ಥಿತಿ.. ತಪ್ಪಾಯ್ತು.. ತಪ್ಪಾಯ್ತು ಅಂತಿದ್ದಾರಂತೆ ದರ್ಶನ್​!

ಧಾರಾವಾಹಿಗಳಲ್ಲಿ ​ ಕೆಟ್ಟದಾಗಿ ಪಾತ್ರ ಮಾಡುತ್ತಿದ್ದ

ಮುಂದೆ ದರ್ಶನ್​​ಗೆ ಧಾರಾವಾಹಿ ಗಳಲ್ಲಿ ಅವಕಾಶ ಸಿಕ್ತು. ಧಾರಾವಾಹಿಗಳಲ್ಲಿ ದರ್ಶನ್​ ಕೆಟ್ಟದಾಗಿ ಪಾತ್ರ ಮಾಡುತ್ತಿದ್ದ. ಬೈದು ನೀನಾಸಂ ಗೆ ಹೋಗಿ ನಟನೆ ಕಲಿ ಎಂದಿದ್ದೆ. ನಾನು ಮಂಡ್ಯ ರಮೇಶ್ ಇಬ್ಬರು ಲೆಟರ್ ಕೊಟ್ಟು ನೀನಾಸಂಗೆ ಕಳುಹಿಸಿದ್ವಿ. ಒಳ್ಳೆಯ ಹೀರೋ ಆಗಿ ಬಂದು ಗುರುವೇ ಎಂದು ವಿನಯ ಪ್ರೀತಿ ತೋರಿಸಿದ್ದ.
ಕಾಲಿಗೆ ಬಿದ್ದು ಸಿಹಿ ತಿನಿಸಿ ಗೌರವ ಕೊಟ್ಟಿದ್ದ ಎಂದು ಹೇಳಿದ್ದಾರೆ.

Advertisment

ಇದನ್ನೂ ಓದಿ: ಮುಕ್ತಾಯದ ಹಂತಕ್ಕೆ ಬಂದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ.. ದರ್ಶನ್ ಮತ್ತು ಗ್ಯಾಂಗ್ ಜೈಲು ಸೇರುವ ಸಾಧ್ಯತೆ

ಇದನ್ನೂ ಓದಿ: ಸಿನಿಮಾ ಕಂಪ್ಲೀಟ್ ಮಾಡದಿದ್ರೆ, ಭೂಮಿ ಮೇಲೆ ಇಲ್ಲದಂತೆ ಮಾಡಿಸ್ತೀನಿ.. ನಿರ್ಮಾಪಕನಿಗೆ ದರ್ಶನ್​ ಜೀವ ಬೆದರಿಕೆ

ಹೆಣ್ಣು, ಹೆಂಡದ ಚಟ

ಆದರೀಗ ದರ್ಶನ್​ ಹೆಣ್ಣು, ಹೆಂಡದ ಚಟದಿಂದ ವಿಲನ್ ಆಗಿದ್ದಾನೆ. ಸಮಾಜಕ್ಕೆ ಮಾದರಿ ಆಗಬೇಕಿದ್ದ ನಟ ಕೊಲೆಗಡುಕನಾಗಿದ್ದಾನೆ. ಆತನ ಬಾಳಿಗೆ ಶನಿ ಎಂಟ್ರಿಯಾಗಿದೆ. ಆ ಶನಿಯೇ ಪವಿತ್ರಾಗೌಡ. ಆಕೆಯಿಂದಲೇ ದರ್ಶನ್ ಇಂದು ಈ ಸ್ಥಿತಿ ತಲುಪಿರೋದು ಎಂದು ಹೇಳುತ್ತ ನಟ ದರ್ಶನ್ ಗೆ ಮೊಟ್ಟಮೊದಲು ಬಣ್ಣ ಹಚ್ಚಿದ ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ಬೇಸರ ವ್ಯಕ್ತಪಡಿಸಿದ್ದಾರೆ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment