/newsfirstlive-kannada/media/post_attachments/wp-content/uploads/2024/11/JOBS_KPSC_1.jpg)
ಕರ್ನಾಟಕ ಅರಣ್ಯ ಇಲಾಖೆಯು ಮೈಸೂರು ಜಿಲ್ಲೆ ಅರಣ್ಯ ವಲಯಕ್ಕೆ ಅರಣ್ಯ ವೀಕ್ಷಕರ ನೇರ ನೇಮಕಾತಿ ಹುದ್ದೆಗಳಿಗೆ ಹೊರಡಿಸಿರುವ ಅಧಿಸೂಚನೆಯನ್ವಯ ಕರಡು ಹೆಚ್ಚುವರಿ ಪಟ್ಟಿಯನ್ನ ರಿಲೀಸ್ ಮಾಡಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಿ, ಆಯ್ಕೆ ಪ್ರಕ್ರಿಯೆಯಲ್ಲಿ ಹಾಜರಾಗಿದ್ರೆ ಸದ್ಯ ಇದೀಗ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ಪರೀಕ್ಷಿಕೊಳ್ಳಬಹುದು.
2023-24ನೇ ಸಾಲಿನ ಕೆನರಾ ವೃತ್ತದ 32 ಅರಣ್ಯ ವೀಕ್ಷಕ ಗ್ರೂಪ್-ಡಿ ಹುದ್ದೆಗಳಿಗೆ ನೇರ ನೇಮಕಾತಿ ಸಂಬಂಧಿಸಿದಂತೆ ತಾತ್ಕಾಲಿಕ ಕಾಯುವಿಕೆ (Waiting List) ಪಟ್ಟಿಯನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಈ ಉದ್ಯೋಗಗಳಿಗೆ ಸಂಬಂಧಿಸಿದಂತೆ 32 ಅರಣ್ಯ ವೀಕ್ಷಕ ಅಭ್ಯರ್ಥಿಗಳನ್ನು ಅಧಿಸೂಚನೆಯನ್ವಯ ಆಯ್ಕೆ ಮಾಡಿ ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು.
ಇದನ್ನೂ ಓದಿ: ಆದಾಯ ತೆರಿಗೆ ಇಲಾಖೆ ಇಂದ ಖಾಲಿ ಹುದ್ದೆಗಳ ಅಧಿಸೂಚನೆ ರಿಲೀಸ್.. ಇಂದಿನಿಂದ ಅರ್ಜಿ ಸಲ್ಲಿಸಬಹುದು
ಆದರೆ ಸಾಮಾನ್ಯ ಅಭ್ಯರ್ಥಿ (ಇತರೆ)ಗಳು ಹಾಗೂ ಪರಿಶಿಷ್ಟ ಪಂಗಡ (ಎಸ್ಟಿ) ಕೋಟಾದಡಿ ಆಯ್ಕೆ ಆಗಿದ್ದವರು ಸದರಿ ಹುದ್ದೆಗೆ ಸೇರ್ಪಡೆಗೊಂಡಿಲ್ಲ. ಹೀಗಾಗಿ ಮೀಸಲಾತಿ ಅನ್ವಯ ಕರಡು ಹೆಚ್ಚುವರಿ ಪಟ್ಟಿ ಪ್ರಕಟಿಸುವಂತೆ, ಬೆಂಗಳೂರು ಪ್ರಧನಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಕರಡು ಹೆಚ್ಚುವರಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಈ ಅರಣ್ಯ ವೀಕ್ಷಕ ಹುದ್ದೆಗಳಿಗೆ 10ನೇ ತರಗತಿ ವಿದ್ಯಾರ್ಹತೆಯನ್ನು ನಿಗದಿ ಮಾಡಲಾಗಿತ್ತು. ಜಾತಿವಾರು ವಯಸ್ಸಿನ ಅರ್ಹತೆಯನ್ನು 18 ರಿಂದ 33 ವರ್ಷದ ಒಳಗಿನವರಿಗೆ ಅವಕಾಶ ಕಲ್ಪಿಸಲಾಗಿತ್ತು. ಉದ್ಯೋಗಕ್ಕೆ ಆಯ್ಕೆ ಆದ ಅಭ್ಯರ್ಥಿಗಳಿಗೆ 36 ತಿಂಗಳು ಅಂದರೆ 3 ವರ್ಷಗಳ ಕಾಲ ತರಬೇತಿ ಅವಧಿ ಇರುತ್ತದೆ. ಆಯ್ಕೆ ಆದವರಿಗೆ ಪ್ರತಿ ತಿಂಗಳು 18,600 ದಿಂದ 32,600 ರೂಪಾಯಿಗಳ ವರೆಗೆ ಸಂಬಳ ನೀಡಲಾಗುತ್ತದೆ.
ಸಂಪೂರ್ಣ ಮಾಹಿತಿಗಾಗಿ;https://static-cdn.publive.online/newsfirstlive-kannada/media/pdf_files/wp-content/uploads/2025/03waiting-list-1.pdf
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ