newsfirstkannada.com

’ನನ್ನ ಹೆಂಡತಿ ಗರ್ಭಿಣಿ ಬಿಟ್ಬಿಡಿ ಅಕ್ಕ‘ ಎಳೆ ಎಳೆಯಾಗಿ ಬೇಡಿಕೊಂಡಿದ್ದ ರೇಣುಕಾಸ್ವಾಮಿ.. ಆದರೂ ಬಿಡಲೇ ಇಲ್ಲ..

Share :

Published June 18, 2024 at 6:21am

    ರೇಣುಕಾಸ್ವಾಮಿ ಫೋನ್​ಗಾಗಿ ರಾಜಕಾಲುವೆಗೆ ಇಳಿದ ಬಿಬಿಎಂಪಿ ಸಿಬ್ಬಂದಿ

    ಪ್ರಕರಣಕ್ಕೆ ಪ್ರಮುಖ ಸಾಕ್ಷಿಯೇ ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಮೊಬೈಲ್

    ರಾಜ ಕಾಲುವೆಯಲ್ಲಿ ಮೃತದೇಹ ಬಿಸಾಡಿದ್ದ ಜಾಗದಲ್ಲೇ ಫೋನ್ ಎಸೆದ ಗ್ಯಾಂಗ್​

ರೇಣುಕಾಸ್ವಾಮಿ ಬಟ್ಟೆಯೂ ಪತ್ತೆಯಾಯ್ತು. ಉಂಗುರ, ಸರವನ್ನ ರಘು ಎತ್ಕೊಂಡು ಹೋಗಿದ್ದ. ಆದ್ರೆ, ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಆತನ ಮೊಬೈಲ್​ ಬಗ್ಗೆ ಮಾತ್ರ ಯಾವ ಸುಳಿವು ಸಿಕ್ಕಿರಲಿಲ್ಲ. 10 ದಿನಗಳಿಂದ ತನಿಖೆ ಮಾಡ್ತಿದ್ದ ಪೊಲೀಸರಿಗೆ ಇವತ್ತು ಆ ಮೊಬೈಲ್​ ಜಾಡು ಸುಮ್ಮನಹಳ್ಳಿಯ ರಾಜಕಾಲುವೆಯ ಬಳಿ ಸಿಕ್ಕಿತ್ತು. ಆದ್ರೆ ಎಷ್ಟೇ ಹುಡುಕಿದ್ರೂ ಅದು ಕೈಗೆ ಸಿಕ್ಕಿಲ್ಲ.

ಇದನ್ನೂ ಓದಿ: ತಗಡು ಎಂದಿದ್ದ ದರ್ಶನ್​ಗೆ ಟಾಂಗ್ ಕೊಟ್ಟ ರಾಬರ್ಟ್​ ನಿರ್ಮಾಪಕ​.. ಉಮಾಪತಿ ಗೌಡ ಏನಂದ್ರು?

ಅಣ್ಣಾ ನನ್ನ ಕ್ಷಮಿಸಿ.. ಅಕ್ಕ ನನ್ನ ಕ್ಷಮಿಸಿ.. ನನ್ನ ಹೆಂಡತಿ ಗರ್ಭಿಣಿ ನನ್ನ ಬಿಟ್ಬಿಡಿ.. ನನ್ನಿಂದ ತಪ್ಪಾಯ್ತು, ಇನ್ಮುಂದೆ ಹೀಗೆ ಮಾಡಲ್ಲ ಅಂತ ರೇಣುಕಾಸ್ವಾಮಿ ಪವಿತ್ರಾ ಕಾಲು ಹಿಡಿದು ಪರಿಪರಿಯಾಗಿ ಬೇಡಿಕೊಂಡಿದ್ದನಂತೆ. ಅದನ್ನ ಈ ಪಾಪಿಗಳು ಆತನ ಮೊಬೈಲ್​ನಲ್ಲೆ ರೆಕಾರ್ಡ್​ ಕೂಡ ಮಾಡಿದ್ರಂತೆ. ಹೀಗಾಗಿ ನಾಪತ್ತೆಯಾಗಿರೋ ಆ ಮೊಬೈಲ್​ಗಾಗಿ ಪೊಲೀಸರ ಸರ್ಚಿಂಗ್​ ಶುರುವಾಗಿದೆ.

ಜೂನ್​ 8ರಂದು ಚಿತ್ರದುರ್ಗದಿಂದ ರೇಣುಕಾ ಕಿಡ್ನ್ಯಾಪ್ ಮಾಡಿದ್ದರ ಬೆಳಗ್ಗೆ ಚಿತ್ರದುರ್ಗದಲ್ಲಿ ಫೋನ್​ ಸ್ವಿಚ್ ಆಫ್ ಆಗಿತ್ತು. ಬಳಿಕ ಮಧ್ಯಾಹ್ನ ಬೆಂಗಳೂರಿನ ಆರ್.ಆರ್ ನಗರದಲ್ಲಿ ಸ್ವಿಚ್ ಆನ್ ಆಗಿತ್ತು. ಮತ್ತೆ ಸಂಜೆ ಪಟ್ಟಣಗೆರೆಯಲ್ಲಿ ಸ್ವಿಚ್ ಆಫ್ ಆಗಿತ್ತು. ಆ ಮೇಲೆ ಏನಾಯ್ತು ಎಲ್ಲಿ ಹೋಯ್ತು ಅನ್ನೋದೆ ಗೊತ್ತಿರಲಿಲ್ಲ. ಕಳೆದ 10 ದಿನದಿಂದ ಪೊಲೀಸರು ರೇಣುಕಾಸ್ವಾಮಿಯ ಮೊಬೈಲ್​ಗಾಗಿ ಜಾಲಾಡ್ತಿದ್ರು, ​ಸುಳಿವು ಮಾತ್ರ ಸಿಕ್ಕಿರಲಿಲ್ಲ. ಕೇಶವ್, ಕಾರ್ತಿಕ್, ನಿಖಿಲ್, ರಘು ವಿಚಾರಣೆ ವೇಳೆ ರೇಣುಕಾ ಮೊಬೈಲ್​ ಅನ್ನೂ ಕೂಡ ಶವದ ಜೊತೆ ಕಾಲುವೆಗೆ ಬಿಸಾಡಿದ್ದಾಗಿ ಬಾಯ್ಬಿಟ್ಟಿದ್ದಾರೆ. ಅಷ್ಟೇ ಅಲ್ಲ, ರೇಣುಕಾ ಮೊಬೈಲ್​ನಲ್ಲೇ ಕ್ಷಮಾಪಣಾ ವಿಡಿಯೋ ಮಾಡಿಸಿದ್ದರು.

ಹೀಗಾಗಿ ಆತನ ಮೊಬೈಲ್​ ಪ್ರಮುಖ ಸಾಕ್ಷಿ ಕೂಡ ಆಗಿತ್ತು. ಹೀಗಾಗಿ ಆರೋಪಿ ಪ್ರದೋಶ್ ಕರೆತಂದು ತಕ್ಷಣ ಪೊಲೀಸರು ಸುಮ್ಮನಹಳ್ಳಿ ಸಮೀಪದ ರಾಜಕಾಲುವೆ ಬಳಿ ಮೊಬೈಲ್​ಗಾಗಿ ಶೋಧ ನಡೆಸಿದ್ರು. ಪ್ರಮುಖ ಸಾಕ್ಷಿಯಾಗಲಿರೋ ಮೊಬೈಲ್​ಗಾಗಿ ಸುಮಾರು ಒಂದೂವರೆ ಗಂಟೆಯಿಂದ ರಾಜಕಾಲುವೆಯಲ್ಲಿ ಶೋಧ ನಡೆಸಲಾಯ್ತು. ಬಿಬಿಎಂಪಿ ಸಿಬ್ಬಂದಿಯನ್ನೂ ಕರೆಸಿ ಫುಲ್​ ಸರ್ಚಿಂಗ್​ ಮಾಡಿದ್ರು. ಆದ್ರೆ, ಎಷ್ಟು ಹುಡುಕಿದ್ರೂ ರಾಜಕಾಲುವೆಯಲ್ಲಿ ಮೊಬೈಲ್ ಪತ್ತೆಯಾಗಲೇ ಇಲ್ಲ. ರೇಣುಕಾಸ್ವಾಮಿಗೆ ಮನಸೋ ಇಚ್ಛೆ ಹಲ್ಲೆ ಮಾಡಿದ ಪಾಪಿಗಳು ಕಡೆಗೆ ಆತನ ಮೊಬೈಲ್​ನಲ್ಲೇ ಕ್ಷಮಾಪಣಾ ವಿಡಿಯೋ ಕೂಡ ಮಾಡಿಸಿದ್ರಂತೆ.

ಇದನ್ನೂ ಓದಿ: ಮೆಗ್ಗರ್​​ ರಾಜುನ ಕ್ರೌರ್ಯದ ಇತಿಹಾಸ ತುಂಬಾನೇ ಭಯಾನಕ.. ಚಿತ್ರಹಿಂಸೆ ಅನುಭವಿಸಿದ್ದು ರೇಣುಕಾಸ್ವಾಮಿ ಒಬ್ಬರೇ ಅಲ್ಲ..!

ಬೆಳಗ್ಗೆ ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿಯನ್ನ ವಾಹನಕ್ಕೆ ಹತ್ತಿಸಿಕೊಂಡಾಗ ಮೊಬೈಲ್​ ಸ್ವಿಚ್ ಆಫ್ ಮಾಡಿಸಲಾಗಿತ್ತು. ಮಧ್ಯಾಹ್ನ ಬೆಂಗಳೂರಿನ ಆರ್.ಆರ್ ನಗರಕ್ಕೆ ತಲುಪಿದ ಮೇಲೆ ಸ್ವಿಚ್ ಆನ್ ಆಗಿತ್ತು. ಈ ಮಧ್ಯೆ ಪತ್ನಿ ಕರೆ ಮಾಡಿದಾಗ ತಾನು ಸ್ನೇಹಿತರ ಜೊತೆಗಿರೋದಾಗಿ ರೇಣುಕಾಸ್ವಾಮಿ ಹೇಳಿದ್ದ. ಸಂಜೆ ಪಟ್ಟಣಗೆರೆಯಲ್ಲಿ ಮತ್ತೆ ಸ್ವಿಚ್ ಆಫ್ ಆಗಿತ್ತು. ಅದೇ ಕೊನೆ. ಅದೇ ದಿನ ತಡರಾತ್ರಿ ರೇಣುಕಾ ಮೃತದೇಹವನ್ನ ಆರೋಪಿಗಳು ಬಿಸಾಡಿ ಬಂದಿದ್ದದ್ದರು. ಸುಮ್ಮನಹಳ್ಳಿಯ ರಾಜ ಕಾಲುವೆಯಲ್ಲಿ ಮೃತದೇಹ ಬಿಸಾಡಿದ್ದ ಗ್ಯಾಂಗ್, ಆತನ ಮೊಬೈಲ್‌ ಅನ್ನ ಅಲ್ಲೇ ಕಾಲುವೆಗೆ ಎಸೆದಿದ್ದಾಗಿ ಹೇಳಿಕೆ ನೀಡಿದ್ದಾರೆ.

ಆರೋಪಿಗಳ ಹೇಳಿಕೆ ಆಧರಿಸಿ ಮೊಬೈಲ್‌ಗಾಗಿ ಪೊಲೀಸರು ರಾಜಾಕಾಲುವೆಗಿಳಿದು ಶೋಧ ನಡೆಸಿದ್ದಾರಾದ್ರೂ ಯಾವುದೇ ಪ್ರಯೋಜನವಾಗಿಲ್ಲ. ಆ ಮೊಬೈಲ್​ ಸಿಕ್ಕಿದ್ರೆ, ಪ್ರಕರಣಕ್ಕೆ ಪ್ರಮುಖ ಸಾಕ್ಷಿ ಸಿಕ್ಕಂತಾಗುತ್ತೆ. ಆದ್ರೆ, ಶೋಧ ನಡೆಸಿದ ಪೊಲೀಸರು ಮೊಬೈಲ್​ ಸಿಗದೇ ಬಂದ ದಾರಿಗೆ ಸುಂಕವಿಲ್ಲ ಅಂತ ವಾಪಸ್​ ಬಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

’ನನ್ನ ಹೆಂಡತಿ ಗರ್ಭಿಣಿ ಬಿಟ್ಬಿಡಿ ಅಕ್ಕ‘ ಎಳೆ ಎಳೆಯಾಗಿ ಬೇಡಿಕೊಂಡಿದ್ದ ರೇಣುಕಾಸ್ವಾಮಿ.. ಆದರೂ ಬಿಡಲೇ ಇಲ್ಲ..

https://newsfirstlive.com/wp-content/uploads/2024/06/renukaswami7.jpg

Load More