newsfirstkannada.com

ಆದಿಪುರುಷ ಸಿನಿಮಾ ಬ್ಯಾನ್ ಆಗುತ್ತಾ?; ವಿವಾದಿತ ಸೀನ್‌ಗಳ ಬಗ್ಗೆ ಹೈಕೋರ್ಟ್‌ ಕೊಟ್ಟ ವಾರ್ನಿಂಗ್ ಏನು?

Share :

Published June 27, 2023 at 8:46pm

    ರಾಮ, ಲಕ್ಷ್ಮಣ, ರಾವಣನನ್ನು ತೋರಿಸಿ ರಾಮಾಯಣದ ಕಥೆ ಅಲ್ಲ ಅಂದ್ರೆ?

    ಹನುಮಾನ್, ಸೀತಾರನ್ನು ಏನೇನೂ ಅಲ್ಲವಂತೆ ತೋರಿಸೋದು ಸರಿಯಲ್ಲ

    ಕೆಲವು ಸೀನ್‌ಗಳು A ಕೆಟಗರಿಯಂತೆ ಇದ್ದು ನೋಡುವುದು ಬಹಳ ಕಷ್ಟ

ಲಖನೌ: ಮೋಸ್ಟ್‌ ಕಾಂಟ್ರವರ್ಸಿಯಲ್ ಪ್ಯಾನ್‌ ಇಂಡಿಯಾ ಸಿನಿಮಾ ಆದಿಪುರುಷ ಬ್ಯಾನ್ ಆಗುತ್ತಾ. ಅಲಹಾಬಾದ್ ಹೈಕೋರ್ಟ್ ಕೊಟ್ಟಿರೋ ಖಡಕ್ ವಾರ್ನಿಂಗ್ ನೋಡಿದ್ರೆ ಇಂತಹದೊಂದು ಅನುಮಾನ ಬರೋದೇ ಇರಲ್ಲ. ಪಿಐಎಲ್‌ ಅರ್ಜಿಯ ವಿಚಾರಣೆ ವೇಳೆ ಆದಿಪುರುಷ ಚಿತ್ರತಂಡವನ್ನು ತರಾಟೆಗೆ ತೆಗೊಂಡ ಹೈಕೋರ್ಟ್‌, ಭಾರತೀಯ ಸೆನ್ಸಾರ್ ಮಂಡಳಿಗೂ ಎಚ್ಚರಿಕೆಯನ್ನು ನೀಡಿದೆ.

ಪ್ರಭಾಸ್ ಅಭಿನಯದ ಆದಿಪುರುಷ ಸಿನಿಮಾ ವಿವಾದಗಳಿಂದಲೇ ಸುದ್ದಿಯಾಗಿ ಕಳೆದ ಜೂನ್ 16ರಂದು ಬಿಡುಗಡೆಯಾಗಿತ್ತು. ರಿಲೀಸ್ ಮೊದಲ ವಾರ ಭರ್ಜರಿ ಪ್ರದರ್ಶನ ಕಂಡ ಆದಿಪುರುಷ ಇದೀಗ ಮಕಾಡೆ ಮಲಗಿದೆ. ಬಾಕ್ಸ್‌ ಆಫೀಸ್‌ನಲ್ಲಿ ಕೋಟಿ, ಕೋಟಿ ಕೊಳ್ಳೆ ಹೊಡೆಯುವ ಕನಸು ಕಂಡಿದ್ದ ಆದಿಪುರುಷ ಚಿತ್ರತಂಡ ನಷ್ಟದ ಸುಳಿಗೆ ಸಿಲುಕಿದೆ. ಫ್ಲಾಪ್ ಶೋನ ಮುಖಭಂಗದ ಮಧ್ಯೆ ಆದಿಪುರುಷ ಸಿನಿಮಾ ತಂಡ ಇದೀಗ ಹೈಕೋರ್ಟ್‌ನ ಕೆಂಗಣ್ಣಿಗೆ ಗುರಿಯಾಗಿದೆ.

ವಿವಾದಿತ ಆದಿಪುರುಷ ಸಿನಿಮಾವನ್ನು ಬ್ಯಾನ್ ಮಾಡಬೇಕೆಂದು ಕೋರಿದ್ದ ಪಿಐಎಲ್ ವಿಚಾರಣೆ ವೇಳೆ ಅಲಹಾಬಾದ್ ಹೈಕೋರ್ಟ್‌ ಆದಿಪುರುಷ ಸಿನಿಮಾದ ನಿರ್ದೇಶಕ, ನಿರ್ಮಾಪಕರಿಗೆ ಸಿಕ್ಕಾಪಟ್ಟೆ ತರಾಟೆ ತೆಗೆದುಕೊಂಡಿದೆ. ದೇಶದ ಜನರಿಗೆ ಬುದ್ಧಿ ಇಲ್ಲ ಎಂದುಕೊಂಡಿದ್ದೀರಾ? ದೇಶದ ಹಿಂದೂಗಳ ಸಹನೆಯ ಮಟ್ಟವನ್ನು ಏಕೆ ಪರೀಕ್ಷೆಗೊಳಪಡಿಸುತ್ತಿದ್ದೀರಿ. ಶ್ರೀರಾಮ, ಲಕ್ಷ್ಮಣ, ಲಂಕಾ, ರಾವಣನನ್ನು ತೋರಿಸಿ ಇದು ರಾಮಾಯಣದ ಕಥೆ ಅಲ್ಲ ಎನ್ನುತ್ತೀರಾ ಎಂದು ಪ್ರಶ್ನಿಸಿರೋ ನ್ಯಾಯಾಲಯ ಫುಲ್ ಗರಂ ಆಗಿದೆ.

ಸೆನ್ಸಾರ್ ಮಂಡಳಿಗೂ ಹೈಕೋರ್ಟ್‌ ತರಾಟೆ!
ಆದಿಪುರುಷ ಸಿನಿಮಾ ತಂಡಕ್ಕೆ ಬೆವರಿಳಿಸಿರೋ ಅಲಹಾಬಾದ್ ಹೈಕೋರ್ಟ್, ಭಾರತೀಯ ಸೆನ್ಸಾರ್ ಬೋರ್ಡ್ ಸಿನಿಮಾಗೆ ಸರ್ಟಿಫಿಕೇಟ್ ನೀಡಿದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಚಿತ್ರದಲ್ಲಿ ಹನುಮಾನ್, ಸೀತಾರನ್ನು ಏನೇನೂ ಅಲ್ಲವಂತೆ ತೋರಿಸಲಾಗಿದೆ. ಇದನ್ನು ಪ್ರಾರಂಭದಲ್ಲೇ ಸಿನಿಮಾದಿಂದ ತೆಗೆಯಬೇಕಾಗಿತ್ತು. ಕೆಲವು ದೃಶ್ಯಗಳು A ಕೆಟಗರಿಯ ದೃಶ್ಯಗಳಂತೆ ಇವೆ. ಇಂತಹ ಸಿನಿಮಾಗಳನ್ನು ನೋಡುವುದು ಬಹಳ ಕಷ್ಟ. ಇದು ಬಹಳ ಗಂಭೀರವಾದ ವಿಚಾರವಾಗಿದ್ದು ಯಾರೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಮಾಡಿಲ್ಲ. ಇದಕ್ಕೆ ಚಿತ್ರತಂಡ ಋಣಿಯಾಗಿರಬೇಕು. ಇಂತಹ ಸಂದರ್ಭದಲ್ಲಿ ಸೆನ್ಸಾರ್ ಬೋರ್ಡ್ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿದೆಯೇ ಎಂದು ಹೈಕೋರ್ಟ್‌ ಪ್ರಶ್ನಿಸಿದೆ. ನಾಳೆಯೂ ಹೈಕೋರ್ಟ್‌ನಲ್ಲಿ ಆದಿಪುರುಷ ಸಿನಿಮಾ ಬ್ಯಾನ್ ಕುರಿತಂತೆ ವಿಚಾರಣೆ ಮುಂದುವರಿಯಲಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ 

ಆದಿಪುರುಷ ಸಿನಿಮಾ ಬ್ಯಾನ್ ಆಗುತ್ತಾ?; ವಿವಾದಿತ ಸೀನ್‌ಗಳ ಬಗ್ಗೆ ಹೈಕೋರ್ಟ್‌ ಕೊಟ್ಟ ವಾರ್ನಿಂಗ್ ಏನು?

https://newsfirstlive.com/wp-content/uploads/2023/06/PRABHAS_ADIPURUSH.jpg

Load More