/newsfirstlive-kannada/media/post_attachments/wp-content/uploads/2025/04/Aditi-Prabhudeva13.jpg)
ಸ್ಯಾಂಡಲ್‌ವುಡ್ ಖ್ಯಾತ ನಟಿ ಅದಿತಿ ಪ್ರಭುದೇವ ಹಾಗೂ ಯಶಸ್ಸು ಚಂದ್ರಕಾಂತ್ ಸಖತ್ ಖುಷಿಯಲ್ಲಿದ್ದಾರೆ. ಬಹಳ ಗ್ರ್ಯಾಂಡ್ ಆಗಿ ನಟಿ ಅದಿತಿ ಪ್ರಭುದೇವ ದಂಪತಿ ಮಗಳ ಹುಟ್ಟು ಹಬ್ಬವನ್ನು ಆಚರಣೆ ಮಾಡಿದ್ದಾರೆ.
ಇದನ್ನೂ ಓದಿ: ಸೀರಿಯಲ್ ಮುಗಿಯುತ್ತಿದ್ದಂತೆ ಸಖತ್ ಬ್ಯುಸಿಯಾದ ಲಕ್ಷ್ಮೀ; ನಟಿ ಭೂಮಿಕಾ ರಮೇಶ್ ನೆಕ್ಸ್ಟ್ ಪ್ಲಾನ್ ಏನು?
ಹೌದು, 2022ರಲ್ಲಿ ಉದ್ಯಮಿ ಯಶಸ್ಸು ಚಂದ್ರಕಾಂತ್ ಪಟ್ಲಾ ಅವರನ್ನು ಸ್ಯಾಂಡಲ್‌ವುಡ್ ಮುದ್ದಾದ ನಟಿ ಅದಿತಿ ಪ್ರಭುದೇವ ವಿವಾಹವಾಗಿದ್ದರು. ಹೊಸ ವರ್ಷದ ದಿನವೇ ಕುಟುಂಬಸ್ಥರಿಗೆ ಹಾಗೂ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ಕೊಟ್ಟಿದ್ದರು.
ಯುಗಾದಿ ಹಬ್ಬದ ದಿನ ಅಂದರೆ ಏಪ್ರಿಲ್ 4ರಂದು ನಟಿ ಅದಿತಿ ಪ್ರಭುದೇವ ಅವರ ಮನೆಗೆ ಮುದ್ದಾದ ಮಗಳ ಆಗಮನವಾಗಿತ್ತು.
ಯುಗಾದಿ ಹಬ್ಬದಂದು ತಾಯಿ ಆದ ಖುಷಿಯ ಜೊತೆಗೆ ನಮ್ಮ ಮನೆ ಮಹಾಲಕ್ಷ್ಮಿ ಅಂತಾ ಮಗುವಿನ ಫೋಟೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.
ನಟಿ ಅದಿತಿ ಪ್ರಭುದೇವ ಅವರ ಮುದ್ದಾದ ಮಗಳು ನೇಸರ ಹುಟ್ಟು ಹಬ್ಬವನ್ನು ಗ್ರ್ಯಾಂಡ್ ಆಗಿ ಮಾಡಿದ್ದಾರೆ. ಅಲ್ಲದೇ ಮಗಳ ಸಂಭ್ರಮವನ್ನು ಪೋಷಕರು ದುಪ್ಪಟ್ಟು ಮಾಡಿದ್ದಾರೆ.
ಮಗಳ ಬರ್ತ್ ಡೇಯನ್ನು ಜೆಡಬ್ಲ್ಯೂ ಮ್ಯಾರಿಯೇಟ್ ಹೋಟೆಲ್ನಲ್ಲಿ ಮಾಡಿದ್ದರು ನಟಿ ಅದಿತಿ ಪ್ರಭುದೇವ ದಂಪತಿ. ಅದಿತಿ ಪ್ರಭುದೇವ ಮಗಳು ನೇಸರ ಹುಟ್ಟು ಹಬ್ಬಕ್ಕೆ ಸಾಕಷ್ಟು ತಾರೆಯರು ಭಾಗಿಯಾಗಿ ಪಾರ್ಟಿಗೆ ಮೆರಗು ತುಂಬಿದ್ದರು.
ಅದಿತಿ ಪ್ರಭುದೇವ್ ಮಗಳ ಬರ್ತ್ ಡೇಗೆ ನಟಿಯರಾದ ಮಿಲನಾ ನಾಗರಾಜ್ ಹಾಗೂ ಅಮೃತಾ ಅಯ್ಯಂಗಾರ್ ಭಾಗಿಯಾಗಿದ್ದರು. ನೆನಪಿರಲಿ ಪ್ರೇಮ್ ಮತ್ತು ಮಗಳು ಅಮೃತಾ ಕೂಡ ಬಂದಿದ್ದರು.
ಇಷ್ಟೇ ಅಲ್ಲದೇ ನಟಿ ಮೇಘನಾ ರಾಜ್ ಹಾಗೂ ಮಗ ರಾಯನ್ ರಾಜ್ ಕೂಡ ಭಾಗಿಯಾಗಿ ಖುಷಿಪಟ್ಟಿದ್ದಾರೆ.
ಹಿಟ್ಲರ್ ಕಲ್ಯಾಣ ಮಲೈಕಾ ಹಾಗೂ ಗುರುಕಿರಣ್ ಅವರು ಹಾಡು ಹಾಡಿ ಮನರಂಜನೆ ನೀಡಿದ್ದಾರೆ.
ಅಲ್ಲದೇ ಮಗಳ ಹುಟ್ಟು ಹಬ್ಬದ ಫೋಟೋಗಳನ್ನು ನಟಿ ಅದಿತಿ ಪ್ರಭುದೇವ ದಂಪತಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದೇ ಫೋಟೋಗಳನ್ನು ನೋಡಿದ ಅಭಿಮಾನಿಗಳು, ನೇಸರ ತುಂಬಾ ಪುಣ್ಯ ಮಾಡಿದ್ದಾಳೆ, ಮುದ್ದು ಪಾಪುಗೆ ಯಾರ್ ದೃಷ್ಟಿನೂ ಬೀಳದೆ ಇರಲಿ ಎಂದು ಹಾಡಿ ಹೊಗಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ