newsfirstkannada.com

PHOTO: ಬಹಳ ದಿನಗಳ ಆಸೆ ಈಡೇರಿಸಿಕೊಂಡ ಅದಿತಿ ಪ್ರಭುದೇವ; ಅವಳಿ ಜವಳಿ ಆಗಲಿ ಎಂದ ಫ್ಯಾನ್​!

Share :

Published March 27, 2024 at 12:21pm

    ಶಾಸ್ತ್ರೋಕ್ತವಾಗಿ ನೆರವೇರಿದ ಅದಿತಿ ಪ್ರಭುದೇವ ಸೀಮಂತ ಕಾರ್ಯಕ್ರಮ

    ಹೊಸ ವರ್ಷದ ದಿನವೇ ಸಿಹಿ ಸುದ್ದಿ ಕೊಟ್ಟಿದ್ದ ಸ್ಯಾಂಡಲ್‌ವುಡ್ ನಟಿ ಅದಿತಿ

    ಟ್ರೆಡಿಷನಲ್ ಲುಕ್​ನಲ್ಲಿ ಮಸ್ತ್​ ಫೋಟೋಶೂಟ್​ ಮಾಡಿಸಿಕೊಂಡ ಬ್ಯೂಟಿ

ಸ್ಯಾಂಡಲ್​ವುಡ್​ ನಟಿ ಅದಿತಿ ಪ್ರಭುದೇವ ಅವರು ಹೊಸ ವರ್ಷಕ್ಕೆ ಹೊಸ ಸುದ್ದಿಯೊಂದನ್ನ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. 2024ರ ಮೊದಲ ದಿನ ತಾಯಿಯಾಗುತ್ತಿದ್ದೇನೆ ಎಂದು ಹೇಳುವ ಮೂಲಕ ಫ್ಯಾನ್ಸ್​ ಜೊತೆ ಗುಡ್​ ನ್ಯೂಸ್​ ಕೊಟ್ಟಿದ್ದರು. ಮೊನ್ನೆಯಷ್ಟೇ ನಟಿ ಅದಿತಿ ಪ್ರಭುದೇವ ಅವರು ಶಾಸ್ತ್ರೋಕ್ತವಾಗಿ ತಮ್ಮ ಸೀಮಂತ ಕಾರ್ಯಕ್ರಮ ನೆರವೇರಿಸಿಕೊಂಡಿದ್ದರು.

ಇದನ್ನೂ ಓದಿ: VIDEO: ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಅದಿತಿ ಪ್ರಭುದೇವ; ಸಿಂಪಲ್ ಸೀಮಂತ ಶಾಸ್ತ್ರದ ವಿಡಿಯೋ ಇಲ್ಲಿದೆ

ಇದೀಗ ನಟಿ ಅದಿತಿ ಅವರು ತಮ್ಮ ಬಹು ದಿನಗಳ ಆಸೆಯನ್ನು ಈಡೇರಿಸಿಕೊಂಡಿದ್ದಾರೆ. ಹೌದು, ಬಹು ದಿನಗಳಿಂದ ಅಂದುಕೊಂಡಿದ್ದೆ ಟ್ರೆಡಿಷನಲ್ ಲುಕ್​ನಲ್ಲಿ ಫೋಟೋ ಶೂಟ್​ ಮಾಡಿಸಿಕೊಳ್ಳಬೇಕು ಅಂತಾ ಅಂದುಕೊಂಡಿದ್ದೆ. ಅದರಲ್ಲೂ ರವಿವರ್ಮ ಪೇಂಟಿಂಗ್ ರೀತಿಯಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳಬೇಕು ಅಂದುಕೊಂಡಿದ್ದೆ.

ಇದೀಗ ಅದೇ ರೀತಿಯಲ್ಲಿ ಫೋಟೋಶೂಟ್​ ಮಾಡಿಸಿಕೊಂಡಿದ್ದೇನೆ ಎಂದು ತಮ್ಮ ಯ್ಯೂಟೂಬ್ ಚಾನೆಲ್​ನಲ್ಲಿ ಈ ಮುದ್ದಾದ ಫೋಟೋಶೂಟ್​ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.  ಇನ್ನು, ದಾವಣಗೆರೆ ಮೂಲದ ನಟಿ ಅದಿತಿ ಪ್ರಭುದೇವ ಅವರು 2022ರಲ್ಲಿ ಉದ್ಯಮಿ ಯಶಸ್ಸು ಚಂದ್ರಕಾಂತ್​ ಪಟ್ಲಾ ಅವರನ್ನು ವಿವಾಹವಾದರು. ಈ ಫೋಟೋಶೂಟ್​ನಲ್ಲಿ ನಟಿ ಅದಿತಿ ಅವರು ಕೆಂಪು ಬಣ್ಣದ ಸೀರೆಯಲ್ಲಿ ಸಖತ್​ ಕ್ಯೂಟ್​ ಆಗಿ ಕಾಣಿಸಿಕೊಂಡಿದ್ದಾರೆ. ಕೈಗೆ ಬಳೆ, ತಲೆಗೆ ಮಲ್ಲಿಗೆ ಹೂಗಳನ್ನು ತೊಟ್ಟುಕೊಂಡಿದ್ದಾರೆ. ಇವರ ಜೊತೆಗೆ ಪತಿ ಯಶಸ್ಸು ಚಂದ್ರಕಾಂತ್ ಕೂಡ ಕಾಣಿಸಿಕೊಂಡಿದ್ದಾರೆ.

View this post on Instagram

A post shared by ADITI PRABHUDEVA (@aditiprabhudeva)

ಈ ಫೋಟೋಗಳನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ನನ್ನ ಪುಟ್ಟ ಆಸೆ ಈಡೇರಿತು ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ದೃಷ್ಟಿ ತೆಗಿಬೇಕು ಈ ಚಂದನವನದ ಗೊಂಬೆಗೆ, ಅವಳಿ ಜವಳಿ ಎಂದು ಕಾಮೆಂಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PHOTO: ಬಹಳ ದಿನಗಳ ಆಸೆ ಈಡೇರಿಸಿಕೊಂಡ ಅದಿತಿ ಪ್ರಭುದೇವ; ಅವಳಿ ಜವಳಿ ಆಗಲಿ ಎಂದ ಫ್ಯಾನ್​!

https://newsfirstlive.com/wp-content/uploads/2024/03/adithi-3.jpg

Load More