Advertisment

ಆ ಸ್ಪೆಷಲ್ ವ್ಯಕ್ತಿಗಾಗಿ ರಾತ್ರಿಯೆಲ್ಲಾ ಮಲಗೋದೆ ಇಲ್ವಂತೆ ನಟಿ ಅದಿತಿ ಪ್ರಭುದೇವ; ಏನ್ಮಾಡ್ತಾರೆ ಗೊತ್ತಾ?

author-image
Veena Gangani
Updated On
ಆ ಸ್ಪೆಷಲ್ ವ್ಯಕ್ತಿಗಾಗಿ ರಾತ್ರಿಯೆಲ್ಲಾ ಮಲಗೋದೆ ಇಲ್ವಂತೆ ನಟಿ ಅದಿತಿ ಪ್ರಭುದೇವ; ಏನ್ಮಾಡ್ತಾರೆ ಗೊತ್ತಾ?
Advertisment
  • ಹೊಸ ವರ್ಷದ ದಿನವೇ ಫ್ಯಾನ್ಸ್​ಗೆ ಸಿಹಿ ಸುದ್ದಿ ಕೊಟ್ಟಿದ್ದ ಅದಿತಿ ಪ್ರಭುದೇವ
  • 2022ರಲ್ಲಿ ಯಶಸ್ಸು ಚಂದ್ರಕಾಂತ್​ ಜೊತೆ ಮದುವೆಯಾಗಿದ್ದ ಕನ್ನಡದ ನಟಿ
  • ನನ್ನ ಮಾತಿಗೆ ಅವಳು ನಗುತ್ತಾಳೆ, ಅದು ನನಗೆ ಖುಷಿ ಸಿಗುತ್ತೆ ಎಂದ ಅದಿತಿ

ಸ್ಯಾಂಡಲ್‌ವುಡ್ ಖ್ಯಾತ ನಟಿ ಅದಿತಿ ಪ್ರಭುದೇವ ಸದ್ಯ ತಮ್ಮ ಮುದ್ದಾದ ಮಗಳ ಜೊತೆಗೆ ಕಾಲ ಕಳೆಯುತ್ತಿದ್ದಾರೆ. ಈಗ ನಾಲ್ಕು ತಿಂಗಳ ಪುಟಾಣಿ ಮಗಳ ಅಮ್ಮ ಆಗಿದ್ದಾರೆ. ಕಿರುತೆರೆ ನಟಿಯಾಗಿ ಸ್ಯಾಂಡಲ್​ವುಡ್​ಗೆ ಕಾಲಿಟ್ಟ ನಟಿ ಅದಿತಿ ಪ್ರಭುದೇವ ರಾಜಾ ರಾಣಿ ಶೋನಲ್ಲಿ ತೀರ್ಪುಗಾರರಾಗಿದ್ದಾರೆ.

Advertisment

ಇದನ್ನೂ ಓದಿ:ಪತಿಯ ಬರ್ತ್​ ಡೇಗೆ ಪತ್ನಿಯಿಂದ ರೊಮ್ಯಾಂಟಿಕ್ ವಿಶ್​.. ನಟಿ ಅದಿತಿ ಪ್ರಭುದೇವ ಕೊಟ್ಟ ಉಡುಗೊರೆ ಏನು?

publive-image

ಅದಿತಿ ಪ್ರಭುದೇವ ಅವರು ಕೇವಲ ನಟಿ ಅಲ್ಲದೇ ಗೃಹಿಣಿ ಕೂಡ ಆಗಿದ್ದಾರೆ. ಅದಿತಿ ಅವರು ಕೂರ್ಗ್ ಮೂಲದ ಉದ್ಯಮಿ ಯಶಸ್ಸು ಚಂದ್ರಕಾಂತ್​ ಪಟ್ಲಾ ಅವರ ಜೊತೆಗೆ 2022ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದಾದ ಬಳಿಕ ಹೊಸ ವರ್ಷ ದಿನವೇ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದ ಅದಿತಿ ಮನೆಗೆ ಏಪ್ರಿಲ್ 4 ಯುಗಾದಿ ಹಬ್ಬದಂದು ಹೊಸ ಅತಿಥಿ ಆಗಮನವಾಗಿತ್ತು.

ಮಗು ಹುಟ್ಟಿ ಮಗು ಎರಡೂವರೆ ತಿಂಗಳು ಇರುವಾಗಲೇ ರಾಜಾ ರಾಣಿ ಶೋಗೆ ತೀರ್ಪುಗಾರರಾಗಿಯೂ ಬಂದು ಕೆಲಸ ಶುರು ಮಾಡಿಕೊಂಡಿದ್ದರು. ಇದರ ಜೊತೆ ಜೊತೆಗೆ ಮಗಳನ್ನು ಕೂಡ ರಾಜಾ ರಾಣಿ ಶೋಗೆ ಕರೆದುಕೊಂಡು ಹೋಗುತ್ತಾರಂತೆ. ಹೀಗಾಗಿ ತಮ್ಮ ಇಡೀ ದಿನವನ್ನು ನಟಿ ಮುದ್ದಾದ ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಮಗಳ ಜೊತೆಗೆ ಕಾಲ ಕಳೆಯುವ ನಟಿ ಇಡೀ ರಾತ್ರಿ ನಿದ್ದೆ ಮಾಡೋದೇ ಇಲ್ವಂತೆ. ಬದಲಿಗೆ ತಮ್ಮ ಮುದ್ದಾದ ಮಗಳ ಜೊತೆಗೆ ಇಡೀ ರಾತ್ರಿ ಮಾತಾಡುತ್ತಾರಂತೆ.

Advertisment

ಇದನ್ನೂ ಓದಿ: ಬಿಗ್​ಬಾಸ್​ ಬೆಡಗಿ ಸಂಗೀತಾ ಶೃಂಗೇರಿಗೆ ಒಲಿದ ಅವಾರ್ಡ್; ಅನುಬಂಧದಲ್ಲಿ ಗಿಟ್ಟಿಸಿಕೊಂಡ ಬಿರುದೇನು?

publive-image

ಇನ್ನು ಈ ಬಗ್ಗೆ ಱಪಿಡ್ ರಶ್ಮಿ ಸಂದರ್ಶನದಲ್ಲಿ ಮಾತಾಡಿದ ನಟಿ ಅದಿತಿ ಪ್ರಭುದೇವ, ನನ್ನ ಮಗಳು ರಾತ್ರಿಯಲ್ಲಾ ಆಟವಾಡುತ್ತಾಳೆ. ಬೆಳ್ಳಿಗೆ ಫುಲ್​ ನಿದ್ದೆ ಮಾಡುತ್ತಾಳೆ. ಇದರಿಂದ ನನಗೆ ತುಂಬಾ ಅಡ್ವಾಂಟೇಜ್ ಆಗುತ್ತೆ. ಹೀಗಾಗಿ ನನಗೆ ಕೆಲಸ ಮಾಡುವುದಕ್ಕೆ ಸ್ವಲ್ಪ ಸಮಯ ಸಿಕ್ಕಂತೆ ಆಗುತ್ತದೆ. ಮೊದ ಮೊದಲು ಕಷ್ಟ ಆಯ್ತು. ಈಗ ನನಗೆ ಅದು ಸೂಟ್​ ಆಗಿದೆ. ನಾನು ಹಾಗೂ ನನ್ನ ಮಗಳು ಇಬ್ಬರೇ ರಾತ್ರಿ ಕಾಲ ಕಳೆಯುತ್ತೇವೆ. ನನಗೆ ಅನಿಸಿದ್ದನ್ನು ನಾನು ಅವಳಿಗೆ ಹೇಳುತ್ತೇನೆ. ಅದಕ್ಕೆ ಅವಳು ನಗುತ್ತಾಳೆ ಅದು ನನಗೆ ಖುಷಿ ಸಿಗುತ್ತೆ. ಹೀಗಾಗಿ ನನ್ನ ಪತಿ ಮನೆಯಿಂದ ಆಚೆ ಇರುತ್ತಾರೆ. ಆಗ ನಾನು, ನಮ್ಮನೆ ಮುದ್ದಿನ ನಾಯಿ ಮತ್ತು ಮಗಳು ಕಾಲ ಕಳೆಯುತ್ತಾ ಇರುತ್ತೇವೆ ಅಂತ ಹೇಳಿದ್ದಾರೆ.

ಧೈರ್ಯಂ, ಬಜಾರ್, ಸಿಂಗ್, ಬ್ರಹ್ಮಚಾರಿ, ಒಂಬತ್ತನೆ ದಿಕ್ಕು, ತೋತಾಪುರಿ, ತ್ರಿಬಲ್ ರೈಡಿಂಗ್, ಅಲೆಕ್ಸಾ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ನಟಿ ಅದಿತಿ ಪ್ರಭುದೇವ ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ರಾಜಾ ರಾಣಿ ಶೋನಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment