newsfirstkannada.com

Aditya-L1: ಭೂಮಿಯಿಂದ 1.5 ಮಿಲಿಯನ್ ಕಿ.ಮೀ ದೂರ.. ಆದಿತ್ಯಯಾನದ ‘ಬ್ರೋಚರ್‌’ ರಿಲೀಸ್ ಮಾಡಿದ ಇಸ್ರೋ

Share :

Published September 1, 2023 at 8:20pm

    15 ಲಕ್ಷ ಕಿಲೋ ಮೀಟರ್ ದೂರದಲ್ಲಿ ನಿಲ್ಲಲಿದೆ ಆದಿತ್ಯ-L1

    ಆದಿತ್ಯಯಾನ ಹೇಗಿರುತ್ತೆ ಅನ್ನೋ ವಿವರಣೆ ಕೊಟ್ಟ ಇಸ್ರೋ

    ಸೂರ್ಯನ ಮೇಲ್ಮೈ ಸ್ಪೋಟ, ಬೆಂಕಿಯುಂಡೆಗಳ ಬಗ್ಗೆ ಅಧ್ಯಯನ

ಚಂದ್ರಯಾನ-3 ಮಿಷನ್‌ ಯಶಸ್ಸಿನ ಬಳಿಕ ಇಸ್ರೋ ಮತ್ತೊಂದು ಮೈಲಿಗಲ್ಲು ಸಾಧಿಸಲು ತುದಿಗಾಲಲ್ಲಿ ನಿಂತಿದೆ. ನಾಳೆ ಮಧ್ಯಾಹ್ನ 11.50ಕ್ಕೆ ಸರಿಯಾಗಿ ಆದಿತ್ಯ L-1 ನೌಕೆ ಉಡಾವಣೆ ಆಗಲಿದೆ. ಆಂಧ್ರದ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಲ್ಲಿ ಆದಿತ್ಯಯಾನದ ಉಡಾವಣೆೆಗೆ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಕೌಂಟ್‌ಡೌನ್‌ ಶುರುವಾಗಿರುವಾಗಲೇ ಇಸ್ರೋ ಆದಿತ್ಯಯಾನದ ಬ್ರೋಚರ್ ಅನ್ನು ಬಿಡುಗಡೆ ಮಾಡಿದೆ. ಭೂಮಿಯಿಂದ ಸೂರ್ಯನ ಶಿಕಾರಿಗೆ ಹೋಗುವ ಆದಿತ್ಯ ಎಷ್ಟು ದೂರ ಕ್ರಮಿಸಲಿದೆ. ಒಟ್ಟಾರೆ ಆದಿತ್ಯಯಾನ ಸಂಪೂರ್ಣ ಬ್ಲೂ ಪ್ರಿಂಟ್‌ ಅನ್ನು ಈ ಬ್ರೋಚರ್‌ ಬಹಿರಂಗಪಡಿಸಿದೆ.

ಇಸ್ರೋ ವಿಜ್ಞಾನಿಗಳು ಬಿಡುಗಡೆ ಮಾಡಿರೋ ಬ್ರೋಚರ್‌ನಲ್ಲಿ ಆದಿತ್ಯಯಾನದ ಪಯಣ ಹೇಗಿರುತ್ತೆ ಅನ್ನೋದನ್ನು ವಿವರಿಸಲಾಗಿದೆ. ಭೂಮಿಯಿಂದ ಸೂರ್ಯನ ಕಡೆಗೆ ಸಾಗುವ ಆದಿತ್ಯ L-1 ಭೂಮಿಯಿಂದ ಸರಿ ಸುಮಾರು 15 ಲಕ್ಷ ಕಿಲೋ ಮೀಟರ್ ದೂರದಲ್ಲಿ ನಿಲ್ಲಲಿದೆ. 1.5 ಮಿಲಿಯನ್ ಕಿಲೋ ಮೀಟರ್ ಅಂದ್ರೆ ಭೂಮಿಗೂ ಸೂರ್ಯನ ಮಧ್ಯೆ ಇರುವ ಶೇಕಡಾ 1ರಷ್ಟು ದೂರವಷ್ಟೇ.

ಆದಿತ್ಯ-L1 ಚಂದ್ರಯಾನದಲ್ಲಿ ವಿಕ್ರಮ್ ಲ್ಯಾಂಡರ್‌ನಂತೆ ಸೂರ್ಯನ ಮೇಲೆ ಇಳಿಯುವುದಿಲ್ಲ. ಆದಿತ್ಯ-L1 ಸೂರ್ಯನನ್ನು ಸಮೀಪಿಸುವುದಿಲ್ಲ ಎಂದು ಇಸ್ರೋ ಸ್ಪಷ್ಟಪಡಿಸಿದೆ. ಸೂರ್ಯನೇ ಒಂದು ದೈತ್ಯಾಕಾರದ ಅನಿಲ ಗೋಳ. ಭೂಮಿಯಿಂದ ಸೂರ್ಯನ ಸಮೀಪಕ್ಕೆ ಹೋಗುವ ಆದಿತ್ಯ-L1 ಸೂರ್ಯನ ಹೊರಗಿನ ವಾತಾವರಣವನ್ನು ಅಧ್ಯಯನ ಮಾಡುತ್ತದೆ.

ಆದಿತ್ಯಯಾನದಲ್ಲಿ ಇಸ್ರೋ ಉದ್ದೇಶಿದ ಅಧ್ಯಯನದ ಅಂಶಗಳೇನು ಅನ್ನೋ ಪ್ರಮುಖಾಂಶಗಳು ಇಲ್ಲಿವೆ ನೋಡಿ.

‘ಆದಿತ್ಯ’ ಅಧ್ಯಯನವೇನು?

ಸೌರ ವಾತಾವರಣದ ಬಗ್ಗೆ ‘ಆದಿತ್ಯ’ ಕೂಲಂಕುಷವಾಗಿ ಅಧ್ಯಯನ

ಸೂರ್ಯನ ಗುರುತ್ವಾಕರ್ಷಣ ಶಕ್ತಿ, ಶಾಖ ಬೆಳಕು ಹೇಗೆ ಉತ್ಪತ್ತಿಯಾಗುತ್ತೆ?

ಎಲೆಕ್ಟ್ರಾನ್, ಪ್ರೋಟ್ರಾನ್, ನ್ಯೂಟ್ರಾನ್ ದೊಡ್ಡ ಮಟ್ಟದಲ್ಲಿ ಹೊರ ಬರುತ್ತೆ

ಸೋಲಾರ್‌ ಕ್ರೋಮೋಸಫೇರ್‌, ಕೋರೋನಾ ಡೈನಾಮಿಕ್ ಅಧ್ಯಯನ

ಕ್ರೋಮೋಸಫೇರಿಕ್, ಕೋರೋನಲ್ ಹೀಟಿಂಗ್, ಪ್ಲಾಸ್ಮಾದ ಅಧ್ಯಯನ

ಸೂರ್ಯನ ಮೇಲ್ಮೈಯ ಸ್ಪೋಟಗಳು, ಬೆಂಕಿಯುಂಡೆಗಳ ಬಗ್ಗೆ ಅಧ್ಯಯನ

ಸೂರ್ಯನಲ್ಲಿನ ಕಣಗಳ ಬದಲಾವಣೆಯ ಬಗ್ಗೆ ಅಧ್ಯಯನ ನಡೆಸುವುದು

ಸೌರ ಕಿರೀಟ ಮತ್ತು ಅದರ ಹೀಟಿಂಗ್ ವ್ಯವಸ್ಥೆಯ ಬಗ್ಗೆಯೂ ಅಧ್ಯಯನ

ಸೂರ್ಯ ಕಿರಣಗಳ ಅಭಿವೃದ್ದಿ, ಬದಲಾವಣೆ, ಮೂಲದ ಬಗ್ಗೆ ಅಧ್ಯಯನ

ಸೌರ ಸ್ಫೋಟದ ವೇಳೆ ಬಹು ಪದರಗಳಲ್ಲಿನ ಸರಣಿ ಪ್ರಕ್ರಿಯೆಗಳ ಅಧ್ಯಯನ

ಸೂರ್ಯನ ಕಾಂತೀಯ ಕ್ಷೇತ್ರದ ಕಾಂತೀಯ ಕ್ಷೇತ್ರದ ಆಳತೆ ಬಗ್ಗೆ ಅಧ್ಯಯನ

ಬಾಹ್ಯಾಕಾಶ-ಸೂರ್ಯನ ವಾತಾವರಣದ ಮೂಲ, ಸಂಯೋಜನೆ ಅಧ್ಯಯನ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Aditya-L1: ಭೂಮಿಯಿಂದ 1.5 ಮಿಲಿಯನ್ ಕಿ.ಮೀ ದೂರ.. ಆದಿತ್ಯಯಾನದ ‘ಬ್ರೋಚರ್‌’ ರಿಲೀಸ್ ಮಾಡಿದ ಇಸ್ರೋ

https://newsfirstlive.com/wp-content/uploads/2023/09/Aditya-L1-Broucher.jpg

Load More