newsfirstkannada.com

ಸೂರ್ಯನ ಕಕ್ಷೆ ತಲುಪಲು ಎಷ್ಟು ದಿನ ಬೇಕು..? ಹೇಗಿರಲಿದೆ ಗೊತ್ತಾ ಆದಿತ್ಯ-L1 ನೌಕೆ ಹಾದಿ..? ಸ್ಟೋರಿ ಓದಿ!

Share :

03-09-2023

    ಬಾಹ್ಯಾಕಾಶ ಕ್ಷೇತ್ರದಲ್ಲಿ ಛಾಪು ಮೂಡಿಸುತ್ತಿರುವ ಇಸ್ರೋ!

    ಚಂದ್ರಯಾನ 3ರ ಯಶಸ್ಸಿನ ಬಳಿಕ ಮತ್ತೊಂದು ಮೈಲಿಗಲ್ಲು

    ಆದಿತ್ಯ-L1 ಸೂರ್ಯನ ಕಕ್ಷೆ ತಲುಪಲು ಎಷ್ಟು ದಿನ ಬೇಕು..?

ಬೆಂಗಳೂರು: ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಇಸ್ರೋ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಚಂದ್ರಯಾನ 3ರ ಯಶಸ್ಸಿನ ಬಳಿಕ ಇಸ್ರೋ ಯಶಸ್ವಿಯಾಗಿ ಸೂರ್ಯನತ್ತ ಆದಿತ್ಯ ಎಲ್​1 ನೌಕೆ ಹಾರಿಸಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಆದಿತ್ಯ ಎಲ್ 1 ಯಶಸ್ವಿಯಾಗಿ ಹಾರಿದೆ.

ಭಾರತದ ಮೊಟ್ಟ ಮೊದಲ ಸೂರ್ಯಯಾನ ನೌಕೆ ಯಶಸ್ವಿಯಾಗಿ ಉಡಾವಣೆಯಾಗಿದೆ. ಭೂಮಿಯಿಂದ ಯಶಸ್ವಿಯಾಗಿ ಪ್ರಯಾಣ ಆರಂಭಿಸಿರುವ ಆದಿತ್ಯ ಎಲ್​ 1 ನೌಕೆ ಇನ್ನು ನಾಲ್ಕು ತಿಂಗಳುಗಳ ಬಳಿಕ ತನ್ನ ನಿಗದಿತ ಕಕ್ಷೆಗೆ ತಲುಪಲಿದೆ. ಇದು ಸೂರ್ಯನ ಕಿರಣಗಳು, ಸೂರ್ಯನ ಮೇಲ್ಮೈ, ಸೂರ್ಯನ ಶಾಖ ಸೇರಿದಂತೆ ಬೇರೆ ಬೇರೆ ವಿಷಯಗಳ ಬಗ್ಗೆ ಅಧ್ಯಯನ ನಡೆಸಲಿದೆ.

ಇನ್ನು ಬೆಂಗಳೂರಿನ ನೆಹರು ತಾರಾಲಯದಲ್ಲಿ ಆದಿತ್ಯ ಎಲ್ಒನ್ ಉಡಾವಣೆಯಾಗಿ ಸೂರ್ಯನ ಹತ್ತಿರ ಹೇಗೆ ಚಲಿಸುತ್ತದೆ ಎಂಬುದರ ಬಗ್ಗೆ ಡೆಮೋ ಮಾಡಲಾಗಿತ್ತು. ಅಲ್ಲದೆ ಆದಿತ್ಯ ಎಲ್ಒನ್ ಉಡಾವಣೆಯನ್ನು ನೋಡೋದಕ್ಕೆ ಸಾರ್ವಜನಿಕರಿಗೆ ಎಲ್ಇಡಿ ಸ್ಕ್ರೀನ್ ಮೂಲಕ ಅವಕಾಶ ಮಾಡಿಕೊಡಲಾಗಿತ್ತು. ಇದನ್ನು ನೋಡೋದಕ್ಕೆ ನೆಹರು ತಾರಾಲಯಕ್ಕೆ ಸಾಕಷ್ಟು ಜನರ ದಂಡೆ ಹರಿದು ಬಂದಿತ್ತು.

ಅದೇನೇ ಇರಲಿ 2023 ಭಾರತಕ್ಕೆ ಸುವರ್ಣ ಅಕ್ಷರಗಳಲ್ಲಿ ಬರೆದಿಡುವ ದಿನವಾಗಿದ್ದಂತೂ ನಿಜ. ಚಂದ್ರಯಾನದ ಯಶಸ್ಸಿನ ಬಳಿಕ ಆದಿತ್ಯ ಎಲ್‌ 1 ಉಡಾವಣೆ ಮಾಡಿದ್ದು ಇದು ಕೂಡ ಯಶಸ್ವಿಯಾಗಲಿ ಎಂಬುದೇ ಶತಕೋಟಿಗೂ ಅಧಿಕ ಭಾರತೀಯರ ಆಶಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೂರ್ಯನ ಕಕ್ಷೆ ತಲುಪಲು ಎಷ್ಟು ದಿನ ಬೇಕು..? ಹೇಗಿರಲಿದೆ ಗೊತ್ತಾ ಆದಿತ್ಯ-L1 ನೌಕೆ ಹಾದಿ..? ಸ್ಟೋರಿ ಓದಿ!

https://newsfirstlive.com/wp-content/uploads/2023/09/Aditya-L1-5.jpg

Load More