/newsfirstlive-kannada/media/post_attachments/wp-content/uploads/2025/06/Adrian-le-roux-1.jpg)
ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಬಿಸಿಸಿಐ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ತಂಡದ ಫಿಟ್ನೆಸ್ ಗುಣಮಟ್ಟ ಕಾಯ್ದುಕೊಳ್ಳುವ ಉದ್ದೇಶದಿಂದ ಜನಪ್ರಿಯ ಕ್ರೀಡಾ ವಿಜ್ಞಾನಿ ಆಡ್ರಿಯನ್ ಲೆ ರೌಕ್ಸ್ (Adrian le Roux) ಅವರನ್ನು ಹೊಸ ಕೋಚ್ ಸ್ಥಾನಕ್ಕೆ ನೇಮಕ ಮಾಡಿಕೊಂಡಿದೆ.
ದಕ್ಷಿಣ ಆಫ್ರಿಕಾ ಮೂಲದ ಇವರನ್ನು ಸ್ಟ್ರೆಂಥ್ ಅಂಡ್ ಕಂಡೀಷನಿಂಗ್ ಕೋಚ್ (Strength and conditioning coach) ಆಗಿ ನೇಮಕ ಮಾಡಲಾಗಿದೆ. ದೀರ್ಘ ಮತ್ತು ಸವಾಲಿನ ಪ್ರವಾಸದಲ್ಲಿ ಆಟಗಾರರ ದೈಹಿಕ ಸಾಮರ್ಥ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವಲ್ಲಿ ಲೆ ರೌಕ್ಸ್ ಪ್ರಮುಖ ಪಾತ್ರ ವಹಿಸುತ್ತಾರೆ.
ಇದನ್ನೂ ಓದಿ: ಕಾಲ್ತುಳಿತದಲ್ಲಿ RCB ಅಭಿಮಾನಿ ನಿಧನ.. ಮೊಮ್ಮಗನ ಅಗಲಿಕೆ ನೋವಿನಲ್ಲಿದ್ದ ಅಜ್ಜಿಯೂ ಕೊನೆಯುಸಿರು
ಸೋಹಮ್ ದೇಸಾಯಿ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಆಡ್ರಿಯನ್ ಲೆ ರೌಕ್ಸ್ ಕರೆ ತರಲಾಗಿದೆ. ಈ ಹಿಂದೆಯೂ ಟೀಂ ಇಂಡಿಯಾದಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ. ಸುಮಾರು 22 ವರ್ಷಗಳ ಹಿಂದೆ 2002 ಜನವರಿಯಿಂದ 2003 ಮೇ ರವರೆಗೆ ಭಾರತೀಯ ಕ್ರಿಕೆಟ್ ತಂಡದ ದೈಹಿಕ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದರು. ಆ ಅವಧಿಯಲ್ಲಿ ಟೀಂ ಇಂಡಿಯಾ ಆಟಗಾರರ ಫಿಟ್ನೆಸ್ ವಿಚಾರದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಆಡ್ರಿಯನ್ ಲೆ ರೌಕ್ಸ್ ಅವರು ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ಆಟಗಾರರಿಗೆ ದೈಹಿಕ ತರಬೇತುದಾರರಾಗಿದ್ದರು. ಸುಮಾರು ಆರು ವರ್ಷಗಳ ಕಾಲ ಪಂಜಾಬ್ ಕಿಂಗ್ಸ್‌ನೊಂದಿಗೆ ಕೆಲಸ ಮಾಡಿದ್ದಾರೆ. ಇದೀಗ ಮತ್ತೆ ರಾಷ್ಟ್ರೀಯ ತಂಡವನ್ನು ಸೇರಿಕೊಂಡಿದ್ದಾರೆ. ಲೆ ರೌಕ್ಸ್ ಟೀಂ ಇಂಡಿಯಾದ ನೂತನ ನಾಯಕ ಶುಭ್ಮನ್ ಗಿಲ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಜೊತೆ ಹೇಗೆ ಕೆಲಸ ಮಾಡಲಿದ್ದಾರೆ ಅನ್ನೋದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: Breaking: ರೈಲು ಚಲಿಸುತ್ತಿದ್ದಾಗ ಭೀಕರ ಅಪಘಾತ.. ಪ್ರಯಾಣಿಕರು ನೆಲಕ್ಕುರುಳಿ ಬಿದ್ದು ಘೋರ ದುರಂತ..
𝗣𝗿𝗲𝗽 𝗕𝗲𝗴𝗶𝗻𝘀 ✅
First sight of #TeamIndia getting into the groove in England 😎#ENGvINDpic.twitter.com/TZdhAil9wV— BCCI (@BCCI) June 8, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ